ಕಲಬುರಗಿ: ಧಾರವಾಡ ಜಿಲ್ಲಾ ಅಂಜುಮನ್-ಎ-ಇಸ್ಲಾಮ್ ಹುಬ್ಬಳ್ಳಿ ಹಾಗೂ ಕಲಬುರಗಿ ಜಿಲ್ಲೆಯ ವಿವಿಧ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹುಬ್ಬಳಿಯಲ್ಲಿ ಹಜ್ ಹೌಸ್ ನಿರ್ಮಾಣಕ್ಕೆ ಒತ್ತಾಯಿಸಿ ಇಂದು ಕಲಬುರಗಿ ಉಪ ಆಯಕ್ತರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಅಂಜುಮ್-ಎ-ಇಸ್ಲಾಮ್ ಸಂಸ್ಥೆಯ ಅಧ್ಯಕ್ಷ ಎಚ್.ಎಂ ಕೊಪ್ಪ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಹಜ್ ಹಾಗೂ ಉಮ್ರಾ ನಿರ್ವಹಿಸುವ ಯಾತ್ರಿಗಳಿಗೆ ಹಲವು ಸಮಸ್ಯೆಗಳು ಉಂಟಾಗುತ್ತಿದ್ದು, ಈ ಸಮಸ್ಯೆಗೆ ಪರಿಹಾರಕ್ಕೆ ಉತ್ತರ ಕರ್ನಾಟಕ 9 ಜಿಲ್ಲೆಗಳ ಹಜ್ ಯಾತ್ರಿಗಳಿಗೆ ಅನಕೂಲಕ್ಕಾಗಿ ಹುಬ್ಬಳ್ಳಿಯಲ್ಲಿ ಹಜ್ ಭವನ ನಿರ್ಮಾಣದಿಂದ ಮುಸ್ಲಿಂ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಲಬುರಗಿ ಜಿಲ್ಲೆಯ ಹಜ್ ಕಮೀಟಿಯ ಅಧ್ಯಕ್ಷ ಮಾತನಾಡಿ ಹುಬ್ಬಳ್ಳಿಯಲ್ಲಿ ಹಜ್ ಯಾತ್ರಿಗಳಿಗೆ ಸಂಬಂಧಿಸಿದಂತೆ ಯಲ್ಲಾ ರೀತಿಯ ವ್ಯವಸ್ಥೆ ಇದ್ದು, ಹುಬ್ಬಳ್ಳಿಯಲ್ಲಿ ಹಜ್ ಹೌಸ್ ನಿರ್ಮಾಣದಿಂದ ಹಜ್ ಹಾಗೂ ಉಮ್ರಾಗೆ ತೆರಳಲಿರುವ ಯಾತ್ರಿಗೆಳಿಗೆ ಅನುಕೂಲವಾಗಲಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಹೈದಾರಾಬಾದ ಕರ್ನಾಟಕ ಮುಸ್ಲಿಂ ಪಟೇಲ್ ಮಂಚ್ ಕನವಿನರ್ ಅಲೀಂ ಅಹ್ಮದ್, ಅಫಜಲ್ ಮಹೇಮೂದ್, ಮುಬೀನ್ ಅಹ್ಮದ್, ಎಚ್.ಎಮ್ ಖಾಜಿ, ಶಾಹನವಾಜ್ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.