ಕಲಬುರಗಿ: ನಗರದ ರಾಮತೀರ್ಥ ಏರಿಯಾದಲ್ಲಿರುವ ಮನೆಗಳು ಸರಿಯಾಗಿ ಹಂಚಿಕೆ ಆಗಬೇಕು ಮತ್ತು ಹಂಚಿಕೆಯಾಗಿರುವ ಮನೆಗಳಿಗೆ ಮೂಲಭೂತ ಸೌಕರ್ಯಗಳು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಹಾಗೂ ಸರಕಾರಿ ಆಶ್ರಯ ಮನೆಗಳಿಗೆ ಮೂಲಭೂತ ನಗರದ ನಾಗನಹಳ್ಳಿ ಗ್ರಾಮದ ಹತ್ತಿರ ಬರುವಂತಹ ಆಶ್ರಯ ಮನೆಗಳು ವಾಸವಾಗದೇ ಖಾಲಿ ಮಂಜೂರಾಗಿದ್ದು, ಆದರೆ ಅಲ್ಲಿ ಯಾವ ನಾಗರೀಕರು ಸಂಪೂರ್ಣವಾಗಿ ಹಾಳಾಗುತ್ತಿದ್ದು, ಕೂಡಲೇ ಮರು ಹಂಚಿಕೆ ಮಾಡಬೇಕೆಂದು ಜೈ ಕನ್ನಗಿಗರ ರಕ್ಷಣ ವೇದಿಕೆ ವತಿಯಿಂದ ವಸತಿ ಸಚಿವ ವಿ ಸೋಮಣ್ಣ ಅವರಿಗೆ ಸಂಘದ ಸಂಸ್ಥಾಪಕ ಅಧ್ಯಕ್ಷ ಸಚಿನ್ ಫರತಾಬಾದ ಅವರ ನೇತೃತ್ವದ ತಂಡ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾಶಿನಾಥ ಮಾಳಗಿ, ಸುರೇಶ ಹನಗುಡಿ, ಅಕ್ಷಯ, ಲೋಕೇಶ ಸಿಂಧೆ, ನವೀನ, ಸುನೀಲ್ ಜಾಧವ, ನಾಗರಾಜ ಜ್ವಾನ್, ಲಚ್ಚು, ಪ್ರವೀಣ ಸಜ್ಜನ್, ಲಕ್ಷ್ಮೀಕಾಂತ, ಉದಯಕುಮಾರ, ರಾಹುಲ್ ಆಶ್ರಯ ಕಾಲೋನಿ ಇದ್ದರು.