ಮಣ್ಣಿನ ಆರೋಗ್ಯ ನಿರ್ವಹಣೆಗೆ ಸಮತೋಲನ ಗೊಬ್ಬರಗಳ ಬಳಕೆ

0
13

ಕಲಬುರಗಿ: ಕೃಷಿ ವಿಜ್ಞಾನ ಕೇಂದ್ರ, ಆವರಣದಲ್ಲಿ ರಸಗೊಬ್ಬರಗಳ ಸಮರ್ಥ ಮತ್ತು ಸಮತೋಲಿತ ಬಳಕೆ ಕುರಿತು ಜಾಗೃತಿ ಕಾರ್ಯಕ್ರಮದ ನೇರ ಪ್ರಸಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕೃಷಿ ಮಹಾವಿದ್ಯಾಲಯದ ಡೀನ್‌ರಾದ ಡಾ. ಎಂ. ಎಂ. ಧನೋಜಿರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರೈತರು ಮಣ್ಣಿನ ಫಲವತ್ತೆಯನ್ನು ಕಾಪಾಡಲು ಹೆಚ್ಚಿನ ಗಮನಹರಿಸಬೇಕಾದ ಅವಶ್ಯಕತೆಯಿದೆ. ಹೀಗಾಗಿ ವಿಜ್ಞಾನಿಗಳ ಸಲಹೆಯಂತೆ ಶಿಪಾರಸ್ಸು ಮಾಡಿದ ರಸಗೊಬ್ಬರಗಳ ಬಳಕೆ ಮಾಡುವುದು ಉತ್ತಮವೆಂದು ಸಲಹೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ತೋಟಗಾರಿಕೆ ವಿಜ್ಞಾನಿಯಾದ ಡಾ. ವಾಸುದೇವ ನಾಯ್ಕ್‌ರವರು ರಸಗೊಬ್ಬರಗಳನ್ನು ದಕ್ಷತೆಯಿಂದ ಬಳಸಿದರೆ ಪರಿಸರ ಮಾಲಿನ್ಯವನ್ನು ತಡೆಗಟ್ಟುವುದರ ಜೊತೆಗೆ ಕೀಟ ಮತ್ತು ರೋಗ ಬಾಧೆಗಳಿಂದ ಆಗುವ ಸಮಸ್ಯೆಗಳನ್ನು ನಿಯಂತ್ರಿಸಬಹುದು.

ಕೃಷಿ ವಿಜ್ಞಾನಕೇಂದ್ರದ ಮಣ್ಣು ವಿಜ್ಞಾನಿಡಾ. ಶ್ರೀನಿವಾಸ ಬಿ.ವಿಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ರೈತರು ತಮ್ಮ ಜಮೀನಿನ ಮಣ್ಣನ್ನು ಪರೀಕ್ಷಿಸಿ ಫಲಿತಾಂಶದ ಆಧಾರದ ಮೇಲೆ ರಸಗೊಬ್ಬರ ಬಳಸುವುದರಿಂದ ಉತ್ತಮ ಇಳುವರಿಯೊಂದಿಗೆ ಖರ್ಚನ್ನೂ ಸಹ ಉಳಿಸಬಹುದೆಂದರು. ಮುಂದುವರೆದು, ರಾಸಾಯನಿಕ ಗೊಬ್ಬರಗಳೊಂದಿಗೆ ಸಾವಯವ ಮತ್ತುಜೈವಿಕಗೊಬ್ಬರವನ್ನು ಬಳಸುವುದರಿಂದ ಮಣ್ಣಿನಆರೊಗ್ಯವನ್ನು ಕಾಪಾಡಿಕೊಳ್ಳಬಹುದೆಂದರು.

ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಎಂ.ಧನ್ನಿ, ಅಧ್ಯಕ್ಷರು, ತೀರ್ಥಪ್ಪಾ ಭೀಮನ್, ಸದಸ್ಯರು, ಗ್ರಾಮ ಪಂಚಾಯತ್‌ಚಿಂಚನಸೂರುತಾ: ಆಳಂದ ಜಿ: ಕಲಬುರಗಿ, ಕೆವಿಕೆ, ಸಿಬ್ಬಂದಿಯವರು ಮತ್ತು ಜಿಲ್ಲೆಯ ರೈತರು ಭಾಗವಹಿಸಿದ್ದರು. ಕೊನೆಗೆ ಸಸ್ಯರೋಗಶಾಸ್ತ್ರ ವಿಜ್ಞಾನಿಯಾದ ಡಾ. ಜಹೀರ್ ಅಹೆಮದ್ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here