ಕಲಬುರಗಿ: ಹೈ.ಕ.ಸಂಸ್ಥೆಯ, ಶ್ರೀಮತಿ ವಿ.ಜಿ.ಮಹಿಳಾ ಪದವಿ ಮಹಾವಿದ್ಯಾಲಯದ ರಾ.ಸೇ.ಯೋ. NSS ಮತ್ತು NCC ಘಟಕಗಳ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಹನುಮಾನಸಿಂಗ್ ಠಾಕೂರ್, ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಘದ ಸುನಿತಾ ಠಾಕೂರ್ ಇವರು ವಿದ್ಯಾರ್ಥಿನಿಯರಗೆ ಯೋಗದ ಲಾಭವನ್ನು ಕುರಿತು ಪ್ರಾತ್ಯಕ್ಷಿಕೆಯ ಮೂಲಕ ತಿಳಿ ಹೇಳಿದರು.
ಹೇಜಿ ಯೋಗದಿಂದಾಗುವ ಲಾಭಗಳ ಬಗ್ಗೆ ಅನಿಸಿಕೆ ಹೇಳಿದಳು ಕಾರ್ಯಕ್ರಮದಲ್ಲಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ,ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ನಾಗೇಂದ್ರ ಮಸೂತಿ,ರಾ.ಸೇ.ಯೋ NSS ಕಾರ್ಯಕ್ರಮಾಧಿಕಾರಿಗಳಾದ ಡಾ.ಮಹೇಶ ಗಂವ್ಹಾರ,ಡಾ.ಶಾಂತಾ ಮಠ.NCC ಕೇರ್ ಟೇಕರ್ ಶ್ರೀಮತಿ ಉಮಾ ಪಾಟೀಲ,ಡಾ.ಮೀನಾಕ್ಷಿ ಬಾಳಿ,ಡಾ.ವಿಜಯಕುಮಾರ ಪರುತೆ,ಡಾ.ಮೋಹನರಾಜ.ಉಮಾ ರೇವುರ ಪತ್ತಾರ.ಭಾಗವಹಿಸಿದ್ದರು.
ಸುಧಾ ನಿರ್ವಹಿಸಿದರು. ಡಾ.ಮಹೇಶ ಗಂವ್ಹಾರ ವಂದಿಸಿದರು,ಡಾ.ಶಾಂತಾ ಮಠ ಸ್ವಾಗತಿಸಿದರು.