ಪಠ್ಯದಲ್ಲಿ ಸುರಪುರ ಇತಿಹಾಸ ಮುಂದುವರೆಸಲು ದಲಿತ ಪ್ಯಾಂಥರ‍್ಸ್ ಮನವಿ

0
20

ಸುರಪುರ: ಸರಕಾರಿ ಪಠ್ಯದಲ್ಲಿ ಸುರಪುರ ಇತಿಹಾಸವನ್ನು ಮುಂದುವರೆಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಪ್ಯಾಂಥರ‍್ಸ್ ಸಂಘಟನೆಯಿಂದ ಒತ್ತಾಯಿಸಲಾಯಿತು.ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರಕಾರಕ್ಕೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಆದಪ್ಪ ಹೊಸ್ಮನಿ ಮಾತನಾಡಿ,ಸುರಪುರ ಇತಿಹಾಸಕ್ಕೆ ಜಗತ್ತಿನಲ್ಲಿಯೇ ಮನ್ನಣೆಯಿದೆ.ಬ್ರಿಟೀಷರಿಗೆ ಸೆಡ್ಡು ಹೊಡೆದು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ರಾಜ ಮನೆತನಗಳಲ್ಲಿ ಸುರಪುರ ಅರಸರು ಮೊದಲಿಗರು.

Contact Your\'s Advertisement; 9902492681

ಅಲ್ಲದೆ ಇಲ್ಲಿಯ ಕಲೆ ಸಾಹಿತ್ಯ ಸಂಸ್ಕೃತಿ ವಿಶ್ವವಿಖ್ಯಾತವಾಗಿದೆ.ಇಂತಹ ಭವ್ಯ ಇತಿಹಾಸವುಳ್ಳ ಸುರಪುರ ಅರಸರ ಪಾಠವನ್ನು ಸರಕಾರ ಪಠ್ಯದಲ್ಲಿ ಕಡಿತಗೊಳಿಸಿರುವುದನ್ನು ದಲಿತ ಪ್ಯಾಂಥರ‍್ಸ್ ಖಂಡಿಸುತ್ತೆ ಹಾಗೂ ಈ ಹಿಂದೆ ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯವನ್ನೆ ಯಥಾವತ್ತ ಮುಂದುವರೆಸಬೇಕು ಎಂದು ಒತ್ತಾಯಿಸಿ,ಒಂದುವೇಳೆ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಸರಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂಘಟನೆಯ ತಾಲೂಕು ಅಧ್ಯಕ್ಷ ರಮೇಶ ಬಾಚಿಮಟ್ಟಿ ಮಾತನಾಡಿ,ಪಠ್ಯದಲ್ಲಿ ಸುರಪುರ ಅರಸರ ಪಾಠ ಮುಂದುವರೆಸಬೇಕು ಮತ್ತು ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರ ನೂತನವಾಗಿ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಅಗ್ನಿಪಥ ಮಿಲಿಟರಿ ನೇಮಕಾತಿಯಲ್ಲಿ ನೇಮಕವಾದ ವಿದ್ಯಾರ್ಥಿಗಳಿಗೆ ಸೇವಾವಧಿ ಕೇವಲ ೪ ವರ್ಷಕ್ಕೆ ಸೀಮಿತ ಮಾಡಿಹೊಸದಾಗಿ ತಂದಿರುವ ನೇಮಕಾತಿ ಕಾನೂನು ಅವೈಜ್ಞಾನಿಕವಾಗಿದ್ದು,ತಕ್ಷಣವೇ ಸರಕಾರ ಈ ಯೋಜನೆಯನ್ನು ಕೈಬಿಟ್ಟುದೇಶದ ಮಿಲಿಟರಿ ನೇಮಕಾತಿಯಲ್ಲಿ ಸಿಗುವ ಸೇವಾವಧಿ ಮತ್ತು ಸೌಲಭ್ಯಗಳನ್ನು ಮುಂದುವರೆಸಿ ನೇಮಕಾತಿ ಮಾಡಿಕೊಳ್ಳಲು ಆಗ್ರಹಿಸಿದರು.

ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ಗೋಪಾಲ ಚಲುವಾದಿ,ಮಂಜುನಾಥ ಹೊಸ್ಮನಿ,ಕಾಶಿಪತಿ ಮಾಲಗತ್ತಿ,ಸುರೇಶ ಬಡಿಗೇರ,ರವಿಚಂದ್ರ ಹೆಮನೂರ,ಲಿಂಗರಾಜ ಮಂಗಿಹಾಳ,ಹಣಮಂತ ಭದ್ರಾವತಿ,ಮಲ್ಲು ಕೆಸಿಪಿ,ಶಂಕರ ಶಹಾಬಾದ,ವೈಜನಾಥ ಹೊಸ್ಮನಿ,ಲಕ್ಷ್ಮಣ ಬಸರಿಗಿಡ ಕೆಂಭಾವಿ,ಪ್ರಮೋದ ಕಟ್ಟಿಮನಿ,ರೋಹಿತ್ ಕಾಂಬಳೆ,ಹಣಮಂತ ಚನ್ನೂರ,ಶ್ರೀನಿವಾಸ ಯಾದವ್,ಪ್ರೇಮಕುಮಾರ ಜೀವಣಗಿ,ಚೇತನ ಬೊಮ್ಮನಹಳ್ಳಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here