ಕಲಬುರಗಿ: ನಗರದ ಸ್ವಾಮಿ ವಿವೇಕಾನಂದ ಕಾಲೂನಿಯಲ್ಲಿ ಇರುವ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ಶ್ರೀ ಮತಿ ಕಸ್ತೂರಬಾಯಿ ಪಿ ಬುಳ್ಳಾ ಸಾಂಸ್ಕೃತಿಕ ಸಭಾ ಭವನದಲ್ಲಿ ನಡೆದ ಸಂಸ್ಥೆಯ ಸಂಸ್ಥಾಪಕ ದಿನ, ಸ್ನೇಹ ಶ್ರೀ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಜರುಗಿತು..
ಸಮಾರಂಭದಲ್ಲಿ ರಾಷ್ಟ್ರೀಯ ಕೋಲಿ ಕಬ್ಬಲಿಗ ಸಮಾಜದ ರಾಜ್ಯಾಧ್ಯಕ್ಷರಾದ ದತ್ತಾತ್ರೇಯ ರೆಡ್ಡಿ ಮುದಿರಾಜ ಮಾತನಾಡುತ್ತಾ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಸಂಸ್ಥೆಗಳು ಕಟ್ಟಿ ಬೆಳೆಸಿ ನಡೆಸಿಕೊಂಡು ಹೋಗುವುದು ತುಂಬಾ ಕಷ್ಟದ ಕೆಲಸ ಇಂತಹ ಸಂದರ್ಭದಲ್ಲಿ ಸ್ನೇಹ ಗಂಗಾ ವಾಹಿನಿಯ ಸಂಸ್ಥೆ ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ ಅದನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಏಕೆಂದರೆ ಇದು ನಮ್ಮ ಸಮಾಜದ ಏಕೈಕ ಶಿಕ್ಷಣ ಸಂಸ್ಥೆ ಆಗಿದೆ ಎಂದು ಹೇಳಿದರು.
ನಂತರ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ಸಂಸ್ಥೆಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಲಬುರಗಿ ಜಿಲ್ಲಾ ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷರಾದ ನೀಲಕಂಠ ಎಂ. ಜಮಾದಾರ, ಸಮಾಜದ ಹೋರಾಟಗಾರ ಉಮೇಶ್ ಮುದ್ನಾಳ ಹಾಗೂ ಅಂಬಿಗ ನ್ಯೂಸ್ ಸಂಸ್ಥಾಪಕ ಅಂಬರೀಷ್ ಕಾಮನಕರೆ ಅವರಿಗೆ ಸ್ನೇಹ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಜಿ ನಾಟೀಕಾರ, ಡಾ.ರಾಘವೇಂದ್ರ ಗುಡಗುಂಟಿ ನಾರಾಯಣರಾವ ಭಂಗಿ, ಸಾಯಬಣ್ಣ ವಡಗೇರ, ಪಿ.ಕೆ ಚೌಧರಿ, ಡಾ ಬಿ.ಪಿ ಬುಳ್ಳಾ ಅವರು ಸೇರಿದಂತೆ ಅನೇಕರಿದ್ದರು.