ಕಲಬುರಗಿ: ವಿಶ್ವನಾಥ್ ರಡ್ಡಿ ಮದ್ನಾಳ್ ಪದವಿ ಮಹಾ ವಿದ್ಯಾಲಯ ಹಾಗೂ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಡೋಂಗರಗಾoವ ಸಹಯೋಗದಲ್ಲಿ ಡಾ.ಪ್ರೇಮಾ ಅಪಚಂದ ಅವರು ರಚಿಸಿರುವ “ಸಾಹಿತ್ಯ ಸಮ್ಮಿಲನ” “ಹೊನಲ ಹೊತ್ತಿಗೆ” “ಕರ್ನಾಟಕ ಕಾದಂಬರಿ ಸಂಕ್ಷಿಪ್ತ ಅಲೋಕನ” “ಚಂದದ ಛಂದಸ್ಸು ಒಂದು ಅವಲೋಕನ” ಎನ್ನುವ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಸಮಾರಂಭವನ್ನು ಇದೇ ತಿಂಗಳು 23 ರಂದು ಮಧ್ಯಾಹ್ನ 3 ಗಂಟೆಗೆ ವಿಶ್ವನಾಥರಡ್ಡಿ ಮುದ್ನಾಳ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶ ಕುಮಾರ ಹೊಸಮನಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು,ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಡಾ. ಎಚ್.ಟಿ.ಪೋತೆ ಅವರು ನಾಲ್ಕು ಕೃತಿಗಳ ಲೋಕಾರ್ಪಣೆ ಮಾಡಲಿದ್ದು,ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಶ್ರೀ ದೇವಯ್ಯ ಗುತ್ತೇದಾರವರು ಆಗಮಿಸುತ್ತಿದ್ದು, ನಾಲ್ಕು ಕೃತಿಯನ್ನು ಕುರಿತು ಡಾ. ಶ್ರೀಶೈಲ್ ನಾಗರಾಳ ಮಾತನಾಡುತ್ತಿದ್ದು, ವಿ.ವಿ ಸಂಘದ ಜಂಟಿ ಕಾರ್ಯದರ್ಶಿಗಳಾದ ಎಸ್.ಡಿ ನಿಜಗುಣಿ ಅವರು ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ಡಾ. ಪ್ರೇಮಾ ಅಪಚಂದ,ಡಾ. ಬಸವರಾಜ ಮಠಪತಿ, ಡಾ. ಶರಣಬಸಪ್ಪ ವಡ್ಡನಕೇರಿ ಅವರು ಉಪಸ್ಥಿತರಿರಲಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ಡಾ.ಬಸವರಾಜ ಮಠಪತಿಯವರು ತಿಳಿಸಿದ್ದಾರೆ.