ಸುರಪುರ: ಜಿಲ್ಲೆಯಲ್ಲಿನ ರೈತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಗರದ ತಹಸೀಲ್ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ:ಸ್ನೇಹಲ್ ಆರ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಮನವಿ ಸಲ್ಲಿಸಿದರು.
ತಾಲೂಕಿನಲ್ಲಿನ ರೈತರಿಗೆ ರಸಗೊಬ್ಬರ ಅಭಾವ ತುಂಬಾ ಉಂಟಾಗುತ್ತಿದೆ,ರಸಗೊಬ್ಬರ ಅಂಗಡಿಗಳ ಮಾಲೀಕರು ರೈತರಿಗೆ ಬೇಕಾದ ರಸಗೊಬ್ಬರ ನೀಡುತ್ತಿಲ್ಲ,ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿದಾಗ ಅಧಿಕಾರಿಗಳು ರಸಗೊಬ್ಬರ ಮಾರಾಟಗಾರರೊಂದಿಗೆ ಶಾಮಿಲಾಗಿ ಮಾತನಾಡುತ್ತಾರೆ.ಆದ್ದರಿಂದ ಕೂಡಲೇ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ರಸಗೊಬ್ಬರ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಶಾ ಆಲ್ ಹುಸೇನ್,ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ, ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಚಂದ್ಲಾಪುರ,ವೆಂಕಟೇಶ ಕುಪಗಲ್,ರಾಘು ಕುಪಗಲ್,ಭೀಮಣ್ಣ ತಿಪ್ಪನಟಗಿ,ರತ್ನಪ್ಪ ಪೂಜಾರಿ,ಭೀಮನಗೌಡ ಗುಂಡಾಪುರ,ಸಣ್ಣಭೀಮಣ್ಣ ಗುಂಡಾಪುರ ಸೇರಿದಂತೆ ಅನೇಕರಿದ್ದರು.