ರಂಗಭೂಮಿ ಜೀವನದ ಪಾಠ ಕಲಿಸಿದೆ: ಮಾಲತಿಶ್ರೀ

1
91

ಕಲಬುರಗಿ: ಬರವಣಿಗೆಗೆ ಸಮಾಜದ ಜವಾಬ್ದಾರಿ ಇರುತ್ತದೆ. ಸಮಾಜ ಬದಲಾವಣೆಗೆ ಕಾರಣವಾಗಿರುವಂತಹ ಸಾಹಿತ್ಯ, ನಾಟಕಗಳಿರಬೇಕು. ಕಲೆಗೆ ಕೊನೆ ಎಂಬುದಿಲ್ಲ ಎಂದು ಖ್ಯಾತ ಕಲಾವಿದೆ ಮಾಲತಿಶ್ರೀ ಮೈಸೂರು  ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ರಂಗಾಂತರಂಗ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ಜಗತ್ತಿನಲ್ಲಿಯೇ ಪುರಾತನ, ಶ್ರೇಷ್ಠವಾದ ಭಾಷೆ ಕನ್ನಡ ಭಾಷೆ: ಸಿದ್ದಲಿಂಗ ದೇವರು

ರಂಗಭೂಮಿಯಿಂದಾಗಿ ಇಡೀ ನಾಡಿಗೆ ಪರಿಚಿತಳಾದ ನಾನು ೧೯೬೨ರಲ್ಲಿ ಬಣ್ಣ ಹಚ್ಷಿದವಳು. ಇಂದಿಗೂ ನಾಟಕದ ಗೀಳಿದೆ. ರಂಗಭೂಮಿಯ ಅನುಭವ ಬದುಕಿನ ಪಾಠ ಕಲಿಸಿಕೊಡುತ್ತದೆ ಎಂದರು. ನಾವು ಬೇಕಾದಷ್ಟು ಆಸ್ತಿ ಗಳಿಸಬಹುದು. ಆದರೆ ಜನರ ಪ್ರೀತಿ ಗಳಿಸುವುದು ಮುಖ್ಯ ಎಂದು ತಮ್ಮ ಮನದಾಳದ ಮಾತುಗಳನ್ನು ಹೊರ ಹಾಕಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುಲ್ಬರ್ಗ ವಿವಿ ರಿಜಿಸ್ಟ್ರಾರ್ ಪ್ರೊ. ವಿ.ಟಿ. ಕಾಂಬ್ಳೆ, ಕಥೆಗಾರ ಮಹಾಂತೇಶ ನವಲಕಲ್ ಮಾತನಾಡಿದರು. ದಿಶಾ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಖಜೂರ್ಗಿ ವೇದಿಕೆಯಲ್ಲಿದ್ದರು. ಇದೇ ವೇಳೆಯಲ್ಲಿ ಕಲಾವಿದರಾದ ಗಂಗಾಧರ ಬಡಿಗೇರ, ಆಶಾ ಕಂಠಿ, ಶಾಂತಲಿಂಗಯ್ಯ ಮಠಪತಿ, ಅಶೋಕ ಕಾಳೆ, ಮಲ್ಲಿಕಾರ್ಜುನ ದೊಡ್ಡಮನಿ, ಮಾಣಿಕ ನಾಡಗುಂದ ಅವರನ್ನು ಸನ್ಮಾನಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿದರು. ಶಿವರಾಜ ಅಂಡಗಿ ನಿರೂಪಿಸಿದರು. ಸಿ.ಎಸ್. ಆನಂದ ಸ್ವಾಗತಿಸಿದರು. ರವೀಂದ್ರ ಭಂಟನಳ್ಳಿ ವಂದಿಸಿದರು.

ಇದನ್ನೂ ಓದಿ: ಎಸ್‌ಯುಸಿಐ (ಕಮ್ಯುನಿಸ್ಟ್) ಪ್ರತಿಭಟನೆ: ಜಿಎಸ್‌ಟಿ ತಿಗಣೆ ವಿರುದ್ಧ ಕಾಮ್ರೇಡರ ಆಕ್ರೋಶ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here