ಜಗತ್ತಿನಲ್ಲಿಯೇ ಪುರಾತನ, ಶ್ರೇಷ್ಠವಾದ ಭಾಷೆ ಕನ್ನಡ ಭಾಷೆ: ಸಿದ್ದಲಿಂಗ ದೇವರು

1
60

ಕನ್ನಡ ಭಾಷೆಗೆ ಮಠಗಳು ಹಾಗೂ ಮಠಾದೀಶರ ಕೊಡಿಗೆಯೂ ಅಪಾರವಾಗಿದೆ.ಬಾಲ್ಕಿಯ ಚನ್ನಬಸವ ಪಟ್ಟದೇವರು ನಿಜಾಮನ ಆಳ್ವಿಕೆಯಲ್ಲಿ ಉರ್ದು ಭಾಷೆಗೆ ಮಾನ್ಯತೆ ಕೊಡಲಾಗಿತ್ತು.ಕನ್ನಡ ಭಾಷೆಗೆ ಕಲಿಸುವುದನ್ನು ಕಂಡರೆ ಶಿಕ್ಷೆಗೆ ಒಳಪಡಿಸಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಹೊರಗಡೆ ಉರ್ದು ಭೋರ್ಡ ಹಾಕಿ ಒಳಗಡೆ ಕನ್ನಡ ಕೆಲಸವನ್ನು ಚನ್ನಬಸವ ಪಟ್ಟದೇವರು ಮಾಡುತ್ತಿದ್ದರು.ಕನ್ನಡ ಭಾಷೆ ಮೇಲೆ ಇರುವ ಪ್ರೀತಿ, ಅಭಿಮಾನ ತೋರಿಸುತ್ತದೆ.ಕನ್ನಡದ ಬಗ್ಗೆ ಸ್ವಾಭಿಮಾನ ತನ್ನಿಂದ ತಾನೇ ಬರಬೇಕಾಗಿದೆ.ಕಡ್ಡಾಯವಾಗಿ ಎಲ್ಲಾ ಅಂಗಡಿಗಳ ನಾಮಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕು. – ಸಿದ್ದಲಿಂಗ ದೇವರು ರಾವೂರ.

ಶಹಾಬಾದ: ಜಗತ್ತಿನಲ್ಲಿಯೇ ಪುರಾತನ ಮತ್ತು ಶ್ರೇಷ್ಠವಾದ ಭಾಷೆ ಕನ್ನಡ ಭಾಷೆಯಾಗಿದೆ ಎಂದು ರಾವೂರಿನ ಸಿದ್ಧಲಿಂಗೇಶ್ವರ ಮಠದ ಪೂಜ್ಯ ಸಿದ್ದಲಿಂಗ ದೇವರು ಹೇಳಿದರು.

Contact Your\'s Advertisement; 9902492681

ಅವರು ರವಿವಾರ ಭಂಕೂರ ಗ್ರಾಮದ ಬಸವ ಸಮಿತಿಯಲ್ಲಿ ಆಯೋಜಿಸಲಾದ ಭಂಕೂರ ಕಸಾಪ ವಲಯ ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಕನ್ನಡಕ್ಕೆ ತನ್ನದೇ ಆದ ಪರಂಪರೆಯಿದೆ.ವಿಶ್ವದಲ್ಲಿಯೇ ಎಲ್ಲಾ ಭಾಷೆಗಳಿಗಿಂತ ಶ್ರೇಷ್ಠ ಭಾಷೆ ಕನ್ನಡವಾಗಿದೆ.ಕನ್ನಡದಲ್ಲಿ ನೂರಾರು ಪದ್ಧತಿಯ ಸಾಹಿತ್ಯಗಿವೆ.ಜನಪದ ಸಾಹಿತ್ಯ, ವಚನ ಸಾಹಿತ್ಯ, ಗದ್ಯ,ಪದ್ಯ, ರಗಳೆ, ಕಾವ್ಯ, ಕಾದಂಬರಿ, ಬಂಡಾಯ ಹೀಗೇ ಹಲವಾರು ಕಾಣುತ್ತೆವೆ.

ಅದರಲ್ಲೂ ಜನಪದ ಸಾಹಿತ್ಯ ವನ್ನು ನಮ್ಮ ಹಿರಿಯರು ಹೊಲದಲ್ಲಿ ಕೆಲಸ ಮಾಡುವಾಗ, ಬೀಸುವಾಗ, ಮಗುವನ್ನು ಮಲಗಿಸುವಾಗ ಸೇರಿದಂತೆ ಬಾಯಿಂದ ಬಾಯಿಗೆ ಬಂದ ಸಾಹಿತ್ಯವಾಗಿದೆ.ಅವರು ಯಾವುದೇ ವಿಶ್ವವಿದ್ಯಾಲಯದಲ್ಲಿ ಓದಿದವರಲ್ಲ.ಆದರೂ ಅವರ ಸಾಹಿತ್ಯದ ಮೇಲೆ ವಿಶ್ವವಿದ್ಯಾಲಯದಲ್ಲಿ ಇಂದಿಗೂ ಅನೇಕ ಜನರು ಪಿಹೆಚ್‌ಡಿ ಮಾಡುವುದನ್ನು ನೋಡಿದ್ದೆವೆ.

ಬದುಕಿಗೆ ಮಾರ್ಗದರ್ಶನ ನೀಡುವ , ಬದುಕಿಗೆ ಪಾಠ ಹಾಗೂ ಬದುಕಿನ ನಿಜ ಸ್ವರೂಪವನ್ನು ಜನಪದ ಸಾಹಿತ್ಯದಲ್ಲಿ ಮಾತ್ರ ಕಾಣಬಹುದು.ಅಲ್ಲದೇ ಕನ್ನಡ ಭಾಷೆಗೆ ಅತ್ಯಂತ ಶ್ರೀಮಂತಿಕೆ ಕೊಟ್ಟ ಸಾಹಿತ್ಯ ಏನಾದರೂ ಇದ್ದರೇ ಅದು ವಚನ ಸಾಹಿತ್ಯ. ಶರಣರ ರಚಿಸಿದ ವಚನ ಸಾಹಿತ್ಯ ಅತ್ಯಂತ ಸರಳ ಹಾಗೂ ಮೌಲ್ಯಗಳ ಭಂಡಾರದಿಂದ ಕೂಡಿವೆ.ಅದರಲ್ಲೂ ಉತ್ತರ ಕರ್ನಾಟಕರಾದ ನಾವು ಹೆಮ್ಮೆ ಪಡಬೇಕಾದ ಸಂಗತಿ ಎಂದಿಗೂ ಮರೆಯಬಾರದೆಂದು ಹೇಳಿದರು.

ಪ್ರಗತಿಪರ ಚಿಂತಕ ಸುರೇಶ ಮೆಂಗನ ಮಾತನಾಡಿ, ಹಲವಾರು ಸಾಹಿತ್ಯವನ್ನು ಅರಗಿಸಿಕೊಂಡಿರುವ ಭಾಷೆ ಕನ್ನಡ ಭಾಷೆ.ಇಂದಿನ ಯುವಕರು ಕನ್ನಡದ ಸಾಹಿತ್ಯವನ್ನು ಅರಿತು ಸಾಹಿತ್ಯವನ್ನು ರಚಿಸಬಹುದು.ನಮ್ಮ ಶಂಕರವಾಡಿ ಗ್ರಾಮದ ದಿ. ಡಾ.ಚೆನ್ನಣ್ಣ ವಾಲೀಕಾರ ಅವರು ಗ್ರಾಮೀಣ ಮಟ್ಟದಿಂದ ಬಂದು ಸಾಹಿತ್ಯ ಲೋಕದಲ್ಲಿ ದೊಡ್ಡ ಹೆಸರು ಮಾಡಿದರು ಎಂದು ನೆನಪಿಸಿಕೊಂಡರು. ಎಲೆ ಮರೆಯಾಗಿರುವ ಕಲಾವಿದರನ್ನು ಗುರುತಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಇನ್ನೂ ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸಿದರು.

ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ ಮಾತನಾಡಿ, ನಶಿಸಿ ಹೋಗುತ್ತಿರುವ ಗ್ರಾಮೀಣ ಕಲೆಗಳನ್ನು ಉಳಿಸಿ-ಬೆಳೆಸುವ ಕೆಲಸ ಮಾಡಬೇಕಿದೆ ಎಂದರು.

ಶಹಾಬಾದ ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ, ಭಂಕೂರ ವಲಯ ಕಸಾಪ ನಿಕಟಪೂರ್ವ ಅಧ್ಯಕ್ಷ ಪಿ.ಎಸ್.ಕೊಕಟನೂರ, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಬಾಳಿ, ಭಂಕೂರ ಕಸಾಪ ಹಾಲಿ ಅಧ್ಯಕ್ಷ ಪ್ರಕಾಶ ಪಾಟೀಲ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಉದ್ದಿಮೆದಾರ ಶಶಿಕಾಂತ ಪಾಟೀಲ,ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮುದೋಳಕರ್,ಸಿಆರ್‌ಪಿ ಮರೆಪ್ಪ ಭಜಂತ್ರಿ ವೇದಿಕೆಯ ಮೇಲಿದ್ದರು. ಹಣಮಂತ ಕುಂಬಾರ ನಿರೂಪಿಸಿದರು, ವೀಣಾ ನಾರಾಯಣ ಸ್ವಾಗತಿಸಿದರು, ಶಶಿಕಾಂತ ಮಡಿವಾಳ ವಂದಿಸಿದರು.

ಕಸಾಪ ತಾಲೂಕಾ ಮಾಜಿ ಅಧ್ಯಕ್ಷ ನಾಗಣ್ಣ ರಾಂಪೂರೆ, ಕಸಾಪ ಪದಾಧಿಕಾರಿಗಳಾದ ಈರಣ್ಣ ಹಳ್ಳಿ ಕಾರ್ಗಿಲ್, ಮುನ್ನಾ ಪಟೇಲ್, ಹೆಚ್.ವಾಯ್.ರಡ್ಡೇರ್,ಅಮೃತ ಮಾನಕರ್, ಭರತ್ ಧನ್ನಾ, ರೇವಣಸಿದ್ದಪ್ಪ ಮುಸ್ತಾರಿ, ಲಕ್ಷ್ಮಿಕಾಂತ ಕಂದಗೂಳ,ಮಲ್ಲಿಕಾರ್ಜುನ ಘಾಲಿ,ಶಿವರಾಜ ಹಡಪದ,ಈರಪ್ಪ ಹೂಗಾರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here