ಸುರಪುರ: ನಗರದ ತಿಮ್ಮಾಪುರ ನಿವಾಸಿ ಹಾಗೂ ನಗರ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಗುರೇಶ್ ವಾರದ್ ಅವರ ತಾಯಿ ಮಹದೇವಮ್ಮ ಲಿಂಗೈಕ್ಯರಾಗಿದ್ದಾರೆ.
ಮಾದೇವಮ್ಮ ಅವರಿಗೆ 68 ವರ್ಷ ವಯಸ್ಸಾಗಿತ್ತು ಕಳೆದ ಕೆಲ ದಿನಗಳಿಂದ ಅನಾರೋಗ್ಯ ಕಾಣಿಸಿಕೊಂಡು ನಿಧನರಾಗಿದ್ದಾರೆ. ಮೃತರಿಗೆ ಸೂಗುರೇಶ ವಾರದ ಸೇರಿದಂತೆ ಮೂರು ಜನ ಗಂಡು ಮಕ್ಕಳು ಒಬ್ಬರು ಹೆಣ್ಣು ಮಗಳು ಇದ್ದು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಮಂಗಳವಾರ ಸಂಜೆ 4 ಗಂಟೆಗೆ ತಿಮ್ಮಾಪುರದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿಸಿದ್ದಾರೆ.
ಮಹದೇವಮ್ಮ ವಾರದ್ ಅವರ ನಿಧನಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ತಾಲೂಕು ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಡಾ ಸುರೇಶ ಸಜ್ಜನ್ ನಯೋಪ್ರಾ ಅಧ್ಯಕ್ಷ ಪ್ರಕಾಶ್ ಸಜ್ಜನ್ ಸೇರಿದಂತೆ ಸಮುದಾಯದ ಅನೇಕ ಮುಖಂಡರು ಹಾಗೂ ರಾಜಕೀಯ ಧುರೀಣರು ಶೋಕ ವ್ಯಕ್ತಪಡಿಸಿದ್ದಾರೆ.