ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಹಚ್ಚ ಹಸಿರಾಗಿಸಲು ಪಣತೊಡಿ: ಜಯಶ್ರೀ ಮತ್ತಿಮಡು

0
71

ಶಹಾಬಾದ: ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದರಿಂದ ಜನರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಗಿಡಮರಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಹಚ್ಚ ಹಸಿರಾಗಿಸಲು ಪಣತೊಡಬೇಕೆಂದು ಬಿಜೆಪಿ ಮುಖಂಡೆ ಜಯಶ್ರೀ ಬಸವರಾಜ ಮತ್ತಿಮಡು ಹೇಳಿದರು.

ಅವರು ಮಂಗಳವಾರ ನಗರದ ಅಲ್ಸಟಾಂ ಕಾಲೋನಿಯ ಮೌಂಟ ಕಾರ್ಮೆಲ್ ಕಾನವೆಂಟ್ ಶಾಲಾಮಕ್ಕಳಿಂದ ಆಯೋಜಿಸಲಾದ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮ ಹಾಗೂ ಪರಿಸರದ ಕುರಿತು ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಪ್ಲಾಸ್ಟಿಕ್ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ನಾಶವಾಗುತ್ತದೆ.ಅಲ್ಲದೇ ಜಾನುವಾರದಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.ಈ ಭೂಮಿಯ ಮೇಲೆ ಜೀವಿಗಳು ಉಳಿಯಬೇಕಾದರೆ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಒದಗಿಸಬೇಕಾದರೆ ಗಿಡಮರಗಳನ್ನು ಬೆಳೆಸಿ, ಪರಿಸರವನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಹೇಳಿದರು.

ಮೌಂಟ ಕಾರ್ಮೆಲ್ ಕಾನವೆಂಟ್ ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಲಿನೆಟ್ ಸಿಕ್ವೇರಿಯಾ ಮಾತನಾಡಿ, ನಗರೀಕರಣ, ಕೈಗಾರೀಕರಣಗಳಿಂದಾಗಿ ಹಳ್ಳಿಗಳು ನಗರಗಳಾಗುತ್ತಿವೆ.ಶುದ್ಧವಾದ ಮಣ್ಣು, ನೀರು ಮತ್ತು ಆಹಾರ ಸಿಗದಂತಾಗಿದೆ.ಪರಿಸರದಲ್ಲಿ ಹವಮಾನ ವೈಪರಿತ್ಯಕ್ಕೆ ಅತಿಯಾಗಿ ಬಳಸುತ್ತಿರುವ ಪ್ಲಾಸ್ಟಿಕ್ ಕೂಡ ಒಂದು ಕಾರಣವಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇದ ಮಾಡುವುದು ಸರ್ಕಾರದ ಕೆಲಸ.ಅದರ ಬಳಕೆಯನ್ನು ನಿಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಮೌಂಟ ಕಾರ್ಮೆಲ್ ಕಾನವೆಂಟ್ ಶಾಲೆಯ ವ್ಯವಸ್ಥಾಪಕರಾದ ಸಿಸ್ಟರ್ ಅನುಪಮ ಮಾತನಾಡಿ, ಮಕ್ಕಳಲ್ಲಿ ಪ್ಲಾಸ್ಟಿಕನಿಂದಾಗುವ ದುಷ್ಪರಿಣಾಮ ಹಾಗೂ ಪರಿಸರದ ಕುರಿತು ಹೆಚ್ಚಿನ ಜ್ಞಾನ ಪಡೆಯುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಅವರಿಂದಲೇ ನಗರದ ಮುಖ್ಯ ವೃತ್ತದಲ್ಲಿ, ಜನಸಂದಣಿ ಪ್ರದೇಶದಲ್ಲಿ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೆವೆ.ಮಕ್ಕಳು,ಪಾಲಕರು ಉತ್ತಮ ಸಹಕಾರ ನೀಡಿದ್ದಾರೆ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗಿರಥಿ ಗುನ್ನಾಪೂರ, ಪಾಲಕ ಶಿಕ್ಷಕರ ಸಂಘದ ಅಧ್ಯಕ್ಷ ಸುನೀಲ ಭಗತ್ ವೇದಿಕೆಯ ಮೇಲಿದ್ದರು.

ನಗರದ ಅಲ್ಸಟಾಂ ಕಾಲೋನಿಯ ಪ್ರಮುಖ ರಸ್ತೆಗಳಲ್ಲಿ ಮೌಂಟ ಕಾರ್ಮೆಲ್ ಕಾನವೆಂಟ್‌ನ ನೂರಾರು ಶಾಲಾ ಮಕ್ಕಳು ಸಂಚರಿಸಿ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮದ ಕುರಿತು ಘೋಷಣೆ ಕೂಗಿದರು. ನಂತರ ಭಂಕೂರ ವೃತ್ತ, ಬಸವೇಶ್ವರ ವೃತ್ತ,ನೆಹರು ವೃತ್ತದಲ್ಲಿ ಶಾಲಾಮಕ್ಕಳು ಪ್ಲಾಸ್ಟಿಕ್‌ನ ದುಷ್ಪರಿಣಾಮದ ಕುರಿತು ಕಿರುನಾಟಕ ಪ್ರಸ್ತುತಪಡಿಸಿದರು. ಗೀತೆಗಳನ್ನು ಹಾಡಿದರು. ನೃತ್ಯ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷರಾದ ಅನೀತಾ ಕುಲಕರ್ಣಿ, ಮೇರಿ, ಸುಮನ್ ಮೆಂಗನ್,ವಿಮಲಾ, ಸಾಹೇಬಗೌಡ ಪಾಟೀಲ, ಮೋರಿಟಾ,ಸಬರಿನಾ,ಗೌಡಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here