ರೇವಣಸಿದ್ದೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿಯಲ್ಲಿ ರಾಜಕೀಯ ಹಸ್ತಕ್ಷೆಪ ಆರೋಪ
ಕಲಬುರಗಿ: ಧಾರ್ಮಿಕ ದತ್ತಿ ಇಲಾಖೆಗೆ ಸುಳ್ಳು ಮಾಹಿತಿ ಕೊಟ್ಟು ಕಾಳಗಿ ತಾಲ್ಲೂಕಿನ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸ್ಥಾನ ಗೆಟ್ಟಿಸಿಕೊಂಡ ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಅವರ ದೊಡ್ಡಪ್ಪ ಸಂಸದ ಡಾ. ಉಮೇಶ್ ಜಾಧವ್ ಅವರ ಸಹೋದರಾಗಿರುವ ರಾಮಚಂದ್ರ ಜಾಧವ್ ರಾಜೀನಾಮೆಗೆ ಸ್ಥಳೀಯ ಮುಖಂಡರು ಪಟ್ಟು ಹಿಡಿದಿದ್ದಾರೆ.
ರಾಜಕೀಯ ಪ್ರಭಾವ ಬಳಸಿಕೊಂಡು ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ ಆದೇಶದ ಪ್ರಥಮ ಶರತ್ತಿನ್ನಲ್ಲೆ ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿ ಎಂದು ಕಂಡುಬಂದಲ್ಲಿ ಅಂಥವರು ವ್ಯವಸ್ಥಾಪನ ಸಮಿತಿಯ ಸದಸ್ಯರಾಗಲು ಅರ್ಹರಲ್ಲ ಎಂದು ಆದೇಶವಿದೆ. ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಅವರ ದೊಡ್ಡಪ್ಪ ರಾಮಚಂದ್ರ ಜಾಧವ್ ರವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಮಚಂದ್ರ ಜಾಧವಗೂ ರೇವಣಸಿದ್ದಶ್ವರ ಮಂದಿರಕ್ಕೂ ಯಾವುದೇ ಸಂಬಂಧ ಇಲ್ಲ, ಈ ಭಾಗದಲ್ಲಿ ಅತೀ ಹೆಚ್ಚು ಭಕ್ತರನ್ನು ಹೊಂದಿರುವ ಹಾಗೂ ಅತಿ ಹೆಚ್ಚಿನ ಕಾಣಿಕೆ ಸಂಗ್ರಹವಾಗುವ ಈ ದೇವಸ್ಥಾನಕ್ಕೆ ಜಾಧವ ಅವರು ಕೇವಲ ಹಣ ಲೂಟಿ ಮಾಡುವ ದುರುದ್ದೇಶದಿಂದ ಅಧ್ಯಕ್ಷ ಪಟ್ಟ ಹಿಡಿದಿದ್ದಾರೆ ಎಂದು ಆರೋಪಿಸಿದ ಮುಖಂಡರು ಶಾಸಕ ಸಂಸದರು ತಮ್ಮ ಬ್ರಷ್ಟಾಚಾರದ ಹಣದ ದಾಹಕ್ಕೆ ಇವಾಗ ಮಂದಿರಗಳನ್ನು ಬಿಡುತ್ತಿಲ್ಲ ಎನ್ನುವದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ ಎಂದು ಕೀಡಿಕಾರಿದ್ದಾರೆ.
ಒಂದು ರಾಜಕೀಯ ಪಕ್ಷದ ಮುಖಂಡರಾಗಿ ತಮ್ಮ ಮನೆಯಲ್ಲೇ ಶಾಸಕ ಸಂಸದರನ್ನು ಹೊಂದಿರುವ ಇವರು ಸರಕಾರದ ಸ್ಪಷ್ಟ ಷರತ್ತನ್ನು ಉಲ್ಲಂಘಿಸಿ ಅಧ್ಯಕ್ಷರಾಗಿದ್ದಾರೆ. ರಾಮಚಂದ್ರ ಜಾಧವ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಚಿಂಚೋಳಿ ಮತಕ್ಷೇತ್ರದ ಜನತೆ ಹಾಗೂ ರೇವಗ್ಗಿ ಶ್ರೀ ರೇವಣಸಿದ್ದೇಶ್ವರರ ಭಕ್ತರಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಶರಣು ಪಾಟೀಲ್ ಮೋತಕಪಳ್ಳಿ, ಬಸವರಾಜ್ ಕೊಲಕುಂದಿ,ಸಂಗಮೇಶ ಏರಿ, ಚಿತ್ರಶೇಖರ್ ಪಾಟೀಲ್ ದೇಗಲಮಡಿ, ಸಂಗಮೇಶ ಪಾಟೀಲ್ ಕೊರವಿ, ಮಲ್ಲಿಕಾರ್ಜುನ ಭೋಶೆಟ್ಟಿ, ವೀರಶೆಟ್ಟಿ ಪಾಟೀಲ್ ಅಣವಾರ ಮುಂತಾದವರು ಎಚ್ಚರಿಸಿದ್ದಾರೆ.