ಕಲಬುರಗಿ: ತಾಲೂಕಿನ ಔರಾದ್, ಪಟ್ಟಣ, ಭೀಮಳ್ಳಿ ಭಾಗದಲ್ಲಿ ರೈತರು ಬೆಳೆದ ೨೮ ರಿಂದ ೩೦ ದಿನ ಅವರಿಯ ಹೆಸರು ಬೆಳೆಯಲ್ಲಿ ಎಲೆ ಹಳದಿ ರೋಗ ಕಂಡುಬಂದಿದ್ದು ಬಿಳಿ ನೋಣಗಳ ಮೂಲಕ ರೋಗ ಹರಡುತ್ತಿದೆ.
ಕೆವಿಕೆ ವಿಜ್ಞಾನಿಗಳಾದ ಡಾ. ಜಹೀರ್ ಅಹಮದ್, ಕಲಬುರಗಿ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಚಂದ್ರಕಾಂತ ಜೀವಣಗಿ, ಪಟ್ಟಣ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳು ರಾಹುಲ್ ಚೌಹಣ್ ಕ್ಷೇತ್ರ ಭೇಟಿ ನೀಡಿ ರೈತರಿಗೆ ಹತೋಟಿ ಕ್ರಮ ವಿವರಿಸಿದರು.
ವೈರಸ ರೋಗ ಪೀಡಿತ ಗಿಡಗಳನ್ನು ಕಿತ್ತು ನಾಶ ಮಾಡಬೇಕು. ಆರೋಗ್ಯವಂತ ಗಿಡ ಉಳಿದುಕೊಳ್ಳಲು ಇಮಿಡಾ ಕ್ಲೋಪಿಡ್ ೦.೩ ಮಿ.ಲೀ. ಅಥವಾ ಥಯೋಮಿಥಕ್ಸಂ ೦.೩ ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಅಥವಾ ಬೇವಿನ ಎಣ್ಣೆ ೨ ಎಂ.ಎಲ್ ಪ್ರತಿ ಲೀಟರ್ ನೀರಿಗೆ ಸಿಂಪಡಿಸಬೇಕು ಎಕರೆಗೆ ೧೦ ಹಳದಿ ಅಂಟು ಬಲೆಯನ್ನು ಅಲಲ್ಲಿ ಹಾಕಬೇಕು. ಇದರಿಂದ ಬೆಳೆಗಳಿಗೆ ಬರುವ ರಸ ಹೀರುವ ಕೀಟಗಳನ್ನು ಹತೋಟಿ ಮಾಡಬಹುದು ಕೆವಿಕೆಯ ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ವಿವರಣೆ ನೀಡಿದರು.