ಜನ್ಮ ನೀಡಿದ ತಂದೆ-ತಾಯಿಯರೇ ನಿಜವಾದ ದೇವರು: ಸಿದ್ದಲಿಂಗ ಶಿವಾಚಾರ್ಯರು

0
105

ಶಹಾಬಾದ: ಜನ್ಮ ನೀಡಿದ ತಂದೆ-ತಾಯಿಯರನ್ನೇ ದೇವರೆಂದು ಮನುಕಲಕ್ಕೆ ಸಂದೇಶ ಸಾರಿದವರು ಯಾರಾದರೂ ಇದ್ದರೇ ಅದು ವೀರಭದ್ರೇಶ್ವರ ದೇವರು ಎಂದು ಮುಗುಳನಾಗಾವಿಯ ಸಿದ್ದಲಿಂಗ ಶಿವಾಚಾರ್ಯರು ಹೇಳಿದರು.

ಅವರು ಸೋಮವಾರ ನಗರದ ಹಳೆಶಹಾಬಾದನಲ್ಲಿ ಶ್ರಾವಣ ಮಾಸದ ನಿಮಿತ್ತ ವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾದ ವೀರಭದ್ರೇಶ್ವರ ಪುರಾಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀವರ್ಚನ ನೀಡಿದರು.

Contact Your\'s Advertisement; 9902492681

ದೇವರ ದರ್ಶನ ಪಡೆಯಲು ಕಾಶಿ -ಕೇದಾರ, ಮಕ್ಕಾ-ಮದಿನಾ ಸೇರಿದಂತೆ ತೀರ್ಥಯಾತ್ರಾ ಸ್ಥಳಗಳಿಗೆ ಹೋಗಬೇಕಾಗಿಲ್ಲ. ನಮ್ಮ ಜನ್ಮ ದಾತರೇ ನಮಗೆ ನಡೆದಾಡುವ ನಿಜವಾದ ದೇವರು.ಅವರ ಸೇವೆಯೇ ನಿಜವಾದ ಪರಮಾತ್ಮನ ಸೇವೆ ಅದನ್ನು ಮೈಗೂಡಿಸಿಕೊಂಡಾಗ ಮಾತ್ರ ಜೀವನ ಪಾವನವಾಗುತ್ತದೆ.ಇಲ್ಲದಿದ್ದರೇ ನಮ್ಮ ಜೀವನ ನರಕವಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬಸವರಾಜ ಮತ್ತಿಮಡು,ಪುರಾಣ-ಪ್ರವಚನಗಳಿಂದ ಶಾಂತಿ ಸಿಗುತ್ತದೆ. ಇಂದಿನ ದಿನಮಾನಗಳಲ್ಲಿ ಮನು? ದುಶ್ಚಟಗಳನ್ನು ಮಾಡುವ ಮೂಲಕ ದಾಸನಾಗುತ್ತಿದ್ದಾನೆ, ಇದರಿಂದ ಹೊರಬಂದು ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಪುರಾಣ, ಪ್ರವಚನಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಅತ್ಯವಶ್ಯಕವಾಗಿದೆ. ಪುರಾಣ, ಪ್ರವಚನಗಳು ಮನಸ್ಸಿಗೆ ಶಾಂತಿ ನೆಮ್ಮದಿ ನೀಡುವುದಲ್ಲದೇ, ಸಮಾಜಕ್ಕೂ ಒಳ್ಳೆಯ ಸಂದೇಶಗಳನ್ನು ರವಾನಿಸುತ್ತವೆ ಆದ್ದರಿಂದ ಪರಾಣದಲ್ಲಿ ಬರುವ ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದರು.ಅಲ್ಲದೇ ಹಳೆಶಹಾಬಾದನಲ್ಲಿ ಕೋಟಿಗಟ್ಟಲೇ ಕೆಲಸಗಳಾಗಿವೆ.ಇನ್ನು ಮುಂದೆಯೂ ಜನರ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಮನಪೂರ್ವಕವಾಗಿ ಬಗೆಹರಿಸುತ್ತೆನೆ ಎಂದರು.

ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಮಾತನಾಡಿ, ಇಂದಿನ ಸಾಮಾಜಿಕ ಸಮಸ್ಯೆಗೆ ಆಧ್ಯಾತ್ಮಿಕ ಬಡತನವೇ ಕಾರಣವಾಗಿದ್ದು,ಮಠ ಮಾನ್ಯ, ಗುಡಿ-ಗುಂಡಾರಗಳಲ್ಲಿ ನಡೆಯುವ ಅನುಭಾವವು ನಮ್ಮಲ್ಲಿ ಆಧ್ಯಾತ್ಮಿಕ ಸಂಪತ್ತನ್ನು ವೃದ್ಧಿಸಿ ನೈತಿಕ ಪ್ರಜ್ಞೆ , ಸಾಮಾಜಿಕ ಮೌಲ್ಯ ಮತ್ತು ಧಾರ್ಮಿಕ ಮೌಲ್ಯಗಳನ್ನು ಬೆಳೆಸಬೇಕಾಗಿದೆ ಎಂದರು.

ಜಗಳೂರಿನ ವಿರೂಪಾಕ್ಷಿ ಶಾಸ್ತ್ರಿ,ಬಿಜೆಪಿ ಮುಖಂಡೆ ಜಯಶ್ರೀ ಮತ್ತಮಡು ಮಾತನಾಡಿದರು. ಹಳೆಶಹಾಬಾದನ ವಿಶ್ವರಾಧ್ಯ ಮಠದ ವಿಜಯಕುಮಾರ ಸ್ವಾಮಿ, ಹಳೆಶಹಾಬಾದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಚಂದನಕೇರಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಹಿರಿಯ ಮುಖಂಡರಾದ ಅಖಂಡಪ್ಪ ವಾಲಿ, ಚನ್ನವೀರರೆಡ್ಡಿ, ಪಿಐ ಸಂತೋಷ ಹಳ್ಳೂರ್, ವೇದಿಕೆಯ ಮೇಲಿದ್ದರು. ಶ್ರೀ ವೀರಭದ್ರೇಶ್ವರ ಚಾರಿಟೇಬಲ ಟ್ರಸ್ಟ್‌ನ ಅಧ್ಯಕ್ಷ ಬಸವರಾಜ ತರನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಶ್ರೀಶೈಲಪ್ಪ ಬೆಳಮಗಿ ಪ್ರಾಸ್ತಾವಿಕ ನುಡಿದರು.

ವಿಶ್ವನಾಥ ಹಡಪದ ನಿರೂಪಿಸಿದರು, ಗಿರಿಮಲ್ಲಪ್ಪ ವಳಸಂಗ ಸ್ವಾಗತಿಸಿದರು, ಸಂತೋಷ ಪಾಟೀಲ ವಂದಿಸಿದರು.

ಹಳೆಶಹಾಬಾದನ ಮಗಳೆಂದು ನನಗೆ ನಾಗರ ಪಂಚಮಿ ಹಬ್ಬದಂದು ಉಡಿ ತುಂಬಿ ಸತ್ಕರಿಸಿದ್ದೀರಿ.ನನ್ನ ತವರಮನೆಯಲ್ಲೂ ಮಾಡುವ ಸತ್ಕಾರಗಿಂತ ಹೆಚ್ಚಿನದು ಹಳೆಶಹಾಬಾದನ ತಂದೆ-ತಾಯಿಂದರು ಮಾಡಿದ್ದು ನನಗೆ ಅತೀವ ಸಂತೋಷವಾಗಿದೆ.ಹೇಳಲಿಕ್ಕೆ ಮಾತು ಬಾರದಾಗಿದೆ ಎಂದು ವೇದಿಕೆಯ ಮುಂಭಾಗದಲ್ಲಿ ಸೇರಿರುವ ನೂರಾರು ಜನರ ಮುಂದೆ ಸಾಷ್ಟಾಂಗ ನಮಸ್ಕಾರಗಳು ಹಾಕಿದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here