ಜೇವಗಿ೯: 75ನೇ ಸ್ವಾತಂತ್ರೋತ್ಸವ ತಾಲೂಕಿನಾದ್ಯಂತ ಅತ್ಯಂತ ಸಡಗರದಿಂದ ಆಚರಿಸಬೇಕು. ಪ್ರತಿ ಮನೆ ,ಶಾಲೆ ,ಅಂಗಡಿ ಸೇರಿದಂತೆ ಎಲ್ಲೇಡೆಯಲ್ಲಿಯೂ ರಾಷ್ಟ್ರಧ್ವಜಕ್ಕೆ ಗೌರವ ನೀಡುವ ಜೋತೆಯಲ್ಲಿ ಒಂದು ಉತ್ಸವವಾಗಿ ಆಚರಿಸಲು ತಹಶೀಲ್ದಾರರಾದ ಸಂಜಯಕುಮಾರ ದಾಸರ ಅಧಿಕಾರಿಗ ಸಭೆಯಲ್ಲಿ ತಿಳಿಸಿದರು.
ಪಟ್ಟಣದಲ್ಲಿ ತಹಸೀಲ್ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಪೂವ೯ಭಾವಿ ಸಭೆ ನಡೆಯಿತು.ಈ ಸಭೆಯಲ್ಲಿ ಜೇವಗಿ೯ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ತಹಸಿಲ್ದಾರರಾದ ಸಂಜಯಕುಮಾರ ದಾಸರ ಮಾತನಾಡಿ 75ನೇ ಸ್ವತಂತ್ರೋತ್ಸ ಕಾಯ೯ಕ್ರಮವನ್ನು ಅದ್ದೂರಿಯಾಗಿ ಆಚರಿಸೋಣ ,ಬೆಳ್ಳಿಗೆ 7.45ಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಧ್ವಜಾರೋಹಣ ನೇರವೆರಿಸಿ ,ನಂತರ 8.45ಕ್ಕೆ ಜೇವಗಿ೯ ತಹಸೀಲ ಕಾಯಾ೯ಯಲದಲ್ಲಿ ಧ್ವಜಾರೋಹಣದಲ್ಲಿ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಭಾಗವಸಬೇಕು . ನಂರತರ 9ಗಂಟೆಗೆ ತಾಲೂಕಾ ಕ್ರೀಡಾಂಣದಲ್ಲಿ ಧ್ವಜಾರೋಹಣ ಹಾಗೂ ವಿವಿಧ ಸಾಂಸ್ಕೃತಿಕ ಕಾಯ೯ಕ್ರಮಗಳು ನಡೆಲಿವೆ.
ತಾಲೂಕಾ ಆಡಳಿತದ ವತಿಯಿಂ ಆರು ಸಾವಿರ ಧ್ವಜಗಳನ್ನು ಸಾವ೯ಕನೀಕರಿಗೆ ಹಾಗೂ ಅಧಿಕಾರಿಗಳಿಗೆ ರಿಯಾಯತಿದರಲ್ಲಿ ನೀಡಲಾಗುತ್ತಿದ್ದು 22ರೂಪಾಯಿಗಳನ್ನು ನೀಡಿ ಧ್ವಜವನ್ನು ಖರೀದಿಸಬಹುದು. ಅಚ್ಚುಕಟ್ಟಾಗಿ ಧ್ವಜವನ್ನು ಮನೆ-ಮನೆಗಳಲ್ಲಿ ಹಾರಿಸಬೇಕು.ಅಲ್ಲದೇ ಈ ಭಾರಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯೂ.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ದ್ವಿತಿಯ ಹಾಗೂ ತೃತಿಯ ಸ್ಥಾನವನ್ನು ಪಡೆದ ವಿದ್ಯಾಥಿ೯ಗಳಿಗೆ ಸೇರಿದಂತೆ ಕನ್ನಡ ವಿಷಯದಲ್ಲಿ 125ಕ್ಕೆ 125ಅಂಕ ಪಡೆದ ವಿದ್ಯಾಥಿ೯ಗಳಿಗೂ ಸನ್ಮಾನ ಮಾಡಲಾಗುತ್ತದೆ ಎಂದರು.
ಪುರಸಭೆ ಕಾಯಾ೯ಲಯದ ವತಿಯಿಂದ ಪಟ್ಟಣದ ವಿದ್ಯಾಥಿ೯ಗಳಿಗೆ ಹಾಗೂ ಸಾವ೯ಜನೀಕರಿಗೆ ರಿಯಾಯತಿ ದರದಲ್ಲಿ 4000 (ನಾಲ್ಕ ಸಾವಿರ ) ರಾಷ್ಟ್ರಧ್ವಜಗಳನ್ನು ವಿತರಿಸಲಾಗುತ್ತದೆ. ಪಟ್ಟದಲ್ಲಿ ಶಾಲಾ ಕಾಲೇಜುಗಳ ವಿಧ್ಯಾಥಿ೯ಗಳು ಧ್ವಜಗಳನ್ನು ಪಡೆಯಬಹುದು. – ಶರಣಯ್ಯ ಸ್ವಾಮಿ ಮುಖ್ಯಾಧಿಕಾರಿಗಳು ಪುರಸಬೆ ಕಾಯಾ೯ಲಯ ಜೇವಗಿ೯.
ಈ ಸಂದಭ೯ದಲ್ಲಿ ಪಿ.ಎಸ್.ಐ ಸಂಗಮೇಶ ಅಂಗಡಿ, ಆಹಾರ ಇಲಾಖೆಯ ಡಿ.ಬಿ ಪಾಟೀಲ, ಸಮಾಜ ಕಲ್ಯಾಣಾಧಿಕಾರಿ ಅಶೋಕ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ತಾಳಿಕೋಟಿ, ಕನ್ನಡ ಸಾಹಿತ್ಯ ಪರಿಷತ್ ಎಸ್.ಕೆ ಬಿರಾದಾರ, ಅವ್ವಣಗೌಡ ಪಾಟೀಲ , ಸಾಯಬಣ್ಣ ಕಲ್ಯಾಣಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.