ಸ್ವಾತಂತ್ರ್ಯ ತಂದು ಕೊಡಲು ತ್ಯಾಗ ಬಲಿದಾನ ಗೈದವರಿಗೆ ಕೃತಜ್ಞತೆ-ರಾಜುಗೌಡ

0
23

ಸುರಪುರ: ನಮ್ಮ ದೇಶ ಇಂದು ಸ್ವಾತಂತ್ರ್ಯವಾಗಿದೆ ಎಂದರೆ ಅದಕ್ಕೆ ಅನೇಕ ಜನ ಮಹನಿಯರುಗಳು ಹೋರಾಟ ತ್ಯಾಗ ಬಲಿದಾನಗೌದಿದ್ದಾರೆ,ಅಂತಹ ಎಲ್ಲಾ ಮಹನಿಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕ ರಾಜುಗೌಡ ತಿಳಿಸಿದರು.

ನಗರದ ಶ್ರೀ ಪ್ರಭು ಮಹಾವಿದ್ಯಾಲಯದ ಆವರಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ೭೬ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಅಮೃತ ಮಹೋತ್ಸವದಂತಹ ಸಂದರ್ಭದಲ್ಲಿ ನಾವೆಲ್ಲರು ಭಾಗಿಯಾಗಿರುವುದು ನಮ್ಮ ಪುಣ್ಯವಾಗಿದೆ,ಅಲ್ಲದೆ ನಮ್ಮ ಸುರಪುರದ ಅರಸು ನಾಲ್ವಡಿ ರಾಜಾ ವೆಂಕಟಪ್ಪ ನಾಯಕರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಧ್ವನಿ ಎತ್ತಿದವರು,ಅಂತಹ ಅರಸರ ಜೀವನ ಸಾಧನೆಯನ್ನು ಸುರಪುರ ಮತ್ತು ಹುಣಸಗಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ವಾರದಲ್ಲಿ ಒಂದು ದಿನ ವಿದ್ಯಾರ್ಥಿಗಳಿಗೆ ತಿಳಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.ಇನ್ನು ನಾರಾಯಣಪುರ ಜಲಾಶಯದ ಬಳಿಯಲ್ಲಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಪುತ್ಥಳಿ ನಿರ್ಮಾಣಕ್ಕೆ ಸಗರನಾಡಿನ ಪ್ರತಿ ಗ್ರಾಮದಿಂದ ಸಾಧ್ಯವಾದಷ್ಟು ಜನರು ತಮ್ಮಲ್ಲಿರುವ ಲೋಹವನ್ನು ನೀಡಲಿ,ಪುತ್ಥಳಿ ನಿರ್ಮಾಣದಲ್ಲಿ ತಮ್ಮದು ಕೊಡುಗೆ ಇದೆ ಎನ್ನುವ ಅಭಿಮಾನ ಅವರಲ್ಲಿ ಮೂಡಲಿ ಎಂಬ ಭಾವನೆ ನಮ್ಮದು ಎಂದರು.

Contact Your\'s Advertisement; 9902492681

ನಗರಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ೨೧೦ ಕೋಟಿ ರೂಪಾಯಿಗಳ ಅನುದಾನದಲ್ಲಿ ಕಾಮಗಾರಿ ನಿರ್ಮಿಸಲಾಗುತ್ತಿದ್ದು ಇನ್ನೂ ಮೂರು ತಿಂಗಳಲ್ಲಿ ನಗರದ ಎಲ್ಲಾ ಮನೆಗಳಿಗೆ ಅತ್ಯಂತ ಕಡಿಮೆ ಎಂದರೆ ೮ ಸಾವಿರ ಲೀಟರ್ ನೀರಿಗೆ ಕೇವಲ ೫೬ ರೂಪಾಯಿಗಳಲ್ಲಿ ಶುದ್ಧ ಕುಡಿಯುವ ನೀರು ಹಗಲಿರಳು ದೊರೆಯಲಿದೆ ಎಂದರು.ಇನ್ನೂ ನನ್ನ ಕ್ಷೇತ್ರದಲ್ಲಿ ೫೬ ಗ್ರಾಮಗಳಿಗೆ ಸ್ಮಶಾನ ನಿರ್ಮಾಣ ಮಾಡಿಕೊಡಲಾಗಿದೆ,ಇನ್ನೂ ಅಗತ್ಯ ಇರುವ ಗ್ರಾಮಗಳಿಗೆ ಒದಗಿಸಲಾಗುವುದು,ಇದುವರೆಗೆ ೯ಸಾವಿರ ರೈತರ ಪಹಣಿ ತಿದ್ದುಪಡಿ ಸಮಸ್ಯೆ ಪರಿಹರಿಸಲಾಗಿದೆ,ರೈತರ ಅಗತ್ಯ ದಾಖಲೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಯೋeನೆ ಜಾರಿಗೊಳಿಸಲಾಗಿದೆ ಎಂದರು.ದೇಶದ ಸ್ವಾತಂತ್ರ್ಯ ಹೋರಾಟಗಾರರು,ಸೈನಿಕರು ಮತ್ತು ರೈತರಿಗೆ ಎಂದಿಗೂ ಕೃತಜ್ಞರಾಗಿರೋಣ,ಇಂದಿನ ಮೆರವಣಿಗೆಯಲ್ಲಿ ಮಕ್ಕಳು ದೇಶಕಾ ರಕ್ಷಣೆ ಕೌನ್ ಕರೆಂಗೆ ಕೌನ್ ಕರೆಂಗೆ ಹಮ್ ಕರೆಂಗೆ ಹಮ್ ಕರೆಂಗೆ ಎನ್ನುವುದು ನೋಡಿದರೆ ಹೆಮ್ಮೆಯಾಗುತ್ತದೆ ಎಂದರು.

ದೇಶದ ಪ್ರತಿಯೊಬ್ಬರು ಅಮೃತಮಹೋತ್ಸವದ ಅಂಗವಾಗಿ ತಮ್ಮ ಮನೆಗಳ ಮೇಲೆ ಧ್ವಜಾರೋಹಣ ಮಾಡುವಂತ ಕಾರ್ಯಕ್ರಮ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರಿಗೆ ಕೃತಜ್ಞತೆ ಸಲ್ಲಿಸೋಣ.

ಈ ಕ್ಷೇತ್ರಕ್ಕೆ ನಾನು ಶಾಸಕನಾಗಿರುವುದು ನನ್ನ ಪೂರ್ವಜನ್ಮದ ಪುಣ್ಯ,ಕ್ಷೇತ್ರದ ಅಭಿವೃಧ್ಧಿಗೆ ಸದಾ ದುಡಿಯುವೆ,ನನ್ನ ಕ್ಷೇತ್ರಕ್ಕೆ ಯಾರ ಕೆಟ್ಟ ದೃಷ್ಟಿ ಬೀಳದಿರಲೆಂದು ವೇಣುಗೋಪಾಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ.

ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ,೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸುರಪುರ ಅರಸು ನಾಲ್ವಡಿ ರಾಜಾ ವೆಂಕಟಪ್ಪ ನಾಯಕರು ಮೊದಲು ಧ್ವನಿ ಎತ್ತಿರುವುದು ನೋಡಿದರೆ ಹೆಮ್ಮೆಯಾಗುತ್ತದೆ.ಅಂಬೇಡ್ಕರರು ಬರೆದ ಸಂವಿಧಾನ ಸರಿಯಾಗಿ ಪಾಲಿಸಿದರೆ ದೇಶ ಉಜ್ವಲಗೊಳ್ಳಲಿದೆ ಎಂದರು.

ಕಾರ್ಯಕ್ರಮದಲ್ಲಿ ೨೦೨೧ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ನಂತರ ವಿವಿಧ ಶಾಲಾ ಮಕ್ಕಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಧ್ವಜಾರೋಹಣ ಸಮಯದಲ್ಲಿ ಡಾ:ಬಿ.ಆರ್ ಅಂಬೇಡ್ಕರರ ಭಾವಚಿತ್ರ ಇಟ್ಟಿಲ್ಲ ಎಂದು ಆರೋಪಿಸಿ ಹೋರಾಟಗಾರ ಮಾನಪ್ಪ ಕಟ್ಟಿಮನಿ ನೇತೃತ್ವದಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದರು.ನಂತರ ಡಾ:ಬಿ.ಆರ್ ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಘಟನೆಯೂ ಜರುಗಿತು).

ಕಾರ್ಯಕ್ರಮದ ವೇದಿಕೆ ಮೇಲೆ ಡಿವೈಎಸ್ಪಿ ಡಾ:ಮಂಜುನಾಥ ಟಿ,ತಾಲೂಕು ಪಂಚಾಯತಿ ಇಒ ಚಂದ್ರಶೇಖರ ಪವರ್,ನಗರಸಭೆ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ,ಉಪಾಧ್ಯಕ್ಷ ಮಹೇಶ ಪಾಟೀಲ್,ಬಿಇಒ,ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವ ದರಬಾರಿ ಸೇರಿದಂತೆ ಅನೇಕ ಜನ ನಗರಸಭೆ ಸದಸ್ಯರು ಹಾಗೂ ಮುಖಂಡರು ವೇದಿಕೆ ಮೇಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here