ಶಹಾಬಾದ:ಹುಟ್ಟು ಹಬ್ಬದ ನೆಪದಲ್ಲಿ ರಕ್ತದಾನ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಈ ರೀತಿಯೂ ಆಚರಿಸಿಕೊಳ್ಳಬಹುದೆಂದು ತೋರಿಸಿ ಬಸವರಾಜ iದ್ರಿಕಿ ಇತರರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ತಿಂಥಣಿಯ ಕನಕ ಗುರುಪೀಠದ ಲಿಂಗ ಬೀರದೇವರು ಹೇಳಿದರು.
ಅವರು ನಗರದ ಜಗದಂಬಾ ಮಂದಿರದಲ್ಲಿ ಸ್ನೇಹಿತರ ಬಳಗದ ವತಿಯಿಂದ ಬಿಜೆಪಿ ಮುಖಂಡ ಬಸವರಾಜ ಮದ್ರಿಕಿ ಅವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಲಾದ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಕೇಕ್ ಕತ್ತರಿಸಿ ದೀಪ ಆರಿಸುವ ಸಂಸ್ಕೃತಿ ನಮ್ಮದಲ್ಲಿ. ದೀಪ ಬೆಳಗಿಸುವ ಸಂಸ್ಕೃತಿ ನಮ್ಮದು.ಹಿಂದೆ ಹುಟ್ಟು ಹಬ್ಬದಂದು ದೇವಸ್ಥಾನಕ್ಕೆ ಹೋಗುತ್ತಿದ್ದರು.ಅಲ್ಲದೇ ತಮ್ಮ ಕೈಲಾದ ಬಡವರಿಗೆ ಸಹಾಯ ಮಾಡುತ್ತಿದ್ದರು.ಇಲ್ಲವೇ ಅಂದು ದೇವಸ್ಥಾನದಲ್ಲಿ ಪ್ರಸಾದ ಸೇವೆ ಮಾಡುತ್ತಿದ್ದರು. ಇಂದು ಟ್ರೆಂಡ್ ಬದಲಾಗಿದೆ. ಹುಟ್ಟು ಹಬ್ಬ ಎಂದರೆ ಕೇಕ್ ಕತ್ತರಿಸಿ ಮುಖಕ್ಕೆ ಕೇಕ್ ಹಚ್ಚುವುದು,ತಲೆಯ ಮೇಲೆ ಮೊಟ್ಟೆ ಒಡೆಯುವುದು.ನಂತರ ಕುಡಿದು, ತಿಂದು ಕುಪ್ಪಳಿಸುವುದು ಹುಟ್ಟು ಹಬ್ಬವಾಗಿದೆ.
ಆದರೆ ಬಸವರಾಜ ಮದ್ರಿಕಿ ಹಾಗೂ ಗೆಳೆಯರು ಇದ್ಯಾವುದನ್ನು ಮಾಡದೇ ರಕ್ತದಾನ ಮಾಡಿದ್ದಾರೆ. ಎಲ್ಲ ದಾನಗಳಿಗಿಂತ ಸಮಾಜದಲ್ಲಿ ರಕ್ತದಾನ ಮಹಾ ಶ್ರೇ?ದಾನವಾಗಿದೆ.ರಕ್ತದಾನದಿಂದ ಅಮೂಲ್ಯ ಜೀವ ಉಳಿಸಲು ಸಾಧ್ಯ. ದೇಶದಲ್ಲಿ ರಕ್ತದ ಕೊರತೆಯಿದೆ.ಸಾವು-ಬದುಕಿನ ಮಧ್ಯೆ ಇರುವ ರೋಗಿಗಳಿಗೆ ರಕ್ತ ಪೂರೈಕೆಯಾದರೆ ಅವರ ಜೀವ ಉಳಿಸಬಹುದು.ಆ ನಿಟ್ಟಿನಲ್ಲಿ ಮದ್ರಿಕಿ ಕಾರ್ಯ ಶ್ಲಾಘನೀಯವಾದುದು. ಆ ನಿಟ್ಟಿನಲ್ಲಿ ಆರೋಗ್ಯವಂತ ಯುವಕರು ಸ್ವಯಂ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕು ಎಂದು ಹೇಳಿದರು.
ಕೊತ್ತಲಪ್ಪ ಶರಣರು, ಶರಣ ಚಂದ್ರಶೇಖರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ನರೇಂದ್ರ ವರ್ಮಾ,ಮಹೇಂದ್ರ ಕೋರಿ, ರಾಜು ರಾಠೋಡ, ನಗರಸಭೆಯ ಸದಸ್ಯ ರವಿ ರಾಠೋಡ, ಶರಣಗೌಡ ಪಾಟೀಲ, ಅರುಣ ಜಾಯಿ, ಸಿದ್ದು ಕಣದಾಳ, ಬೆಳ್ಳಪ್ಪ ಕಣದಾಳ,ರಾಜು ಕೋಬಾಳ, ದಶರಥ ಕೋಟನೂರ್,ಮಹಾಲಿಂಗ ಪೂಜಾರಿ, ಸಿದ್ದು ವಾರಕರ್, ಶರಣಬಸಪ್ಪ ಕೋಬಾಳ, ಬಾಬುರಾವ ಪಂಚಾಳ, ಸುಭಾಷ ಜಾಪೂರ, ಕನಕಪ್ಪ ದಂಡಗುಲಕರ್, ಅನೀಲ ಹಿಬಾರೆ, ಅಶೋಕ ಜಿಂಗಾಡೆ, ಕಾಶಿನಾಥ ಇಂಗಳಗಿ, ಮೀರ ಅಲಿ ನಾಗೂರೆ, ಅವಿನಾಶ ಕೊಂಡಯ್ಯ, ನಾಗರಾಜ ಕುಂಬಾರ,ವಿಜುಕುಮಾರ ಕಂಠಿಕರ್, ಡಿಸಿ ಹೊಸಮನಿ, ಮಲ್ಕಪ್ಪ ಮುದ್ದಾ, ಸಾಯಿಬಣ್ಣ ಕೊಲ್ಲೂರ್, ಶರಣು ಪೂಜಾರಿ ತರನಳ್ಳಿ, ಮಲ್ಲಣ್ಣ ಮರತೂರ,ಅಶೋಕ ರಾವೂರ, ಕೆಂಚಪ್ಪ ಪೂಜಾರಿ,ರವಿ ಮರತೂರ, ಶಿವರಾಜ ಮುತ್ತಗಿ,ಹಣಮಂತ ಸಾಲಿ, ರಾಯಪ್ಪ ಹುರಮುಂಜಿ, ನಾಗರಾಜ ಅಲ್ದಿಹಾಳ ಇತರರು ಇದ್ದರು.