ಕಲಬುರಗಿ: ನಮ್ಮ ಇಂದಿನ ವ್ಯವಸ್ಥೆಯಲ್ಲಿ ಯಾಕಿರಬೇಕು ಎಂಬ ಪ್ರಶ್ನೆ ಹಾಗೂ ಅದಕ್ಕೆ ಉತ್ತರ ಸಹ ಇರಬೇಕು. ಲೋಕತಂತ್ರ ವ್ಯವಸ್ಥೆಯಲ್ಲಿ ಸರ್ಕಾರದ ಕ್ರಮ ಹಾಗೂ ಲೋಪದೋಷ ಹಾಗೂ ಒಳ್ಳೆಯ ವಿಚಾರಗಳನ್ನು ಜನತೆಗೆ ಮುಟ್ಟಿಸುವಲ್ಲಿ ಮಾಧ್ತಮ ಪಾತ್ರ ಬಹಳ ಪ್ರಮುಖ ಎಂದು ಪ್ರಾದೇಶಿಕ ಆಯುಕ್ತ ಸುಭೋದ ಯಾದವ ಹೇಳಿದರು.
ನಗರದ ಪತ್ರಿಕಾ ಬವನದಲ್ಲಿ ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ವತಿಯಿಂದ ಇಂದು ಜರುಗಿದ ಪತ್ರಿಕಾ ದಿನಾಚರಣೆ ಮತ್ತು ಸಂವಾದ ಕಾರ್ಯಕ್ರಮ. ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ನಿಷ್ಪಕ್ಷಪಾತ ವರದಿ ಮಾಡುವುದರ ಜೊತೆಗೆ ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಬೇಕು ಎಂದರು.
ಪೇಯ್ಡ್ ನ್ಯೂಸ್ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.ಅದೇವೇಳೆಯಲ್ಲಿ ಮೀಡಿಯಾಗಳಿಗೆ ಕಡಿವಾಣ ಹಾಕುವುದು ಕೂಡ ತಪ್ಪು. ಪತ್ರಕರ್ತರಾದವರು ಕೂಡ ಸಾಕಷ್ಟು ಸಮಸ್ಯೆ ಹಾಗೂ ಚಾಲೆಂಜ್ ಗಳನ್ನು ಎದುರಿಸುತ್ತಿದ್ದಾರೆ. ಪತ್ರಕರ್ತರಿಗೆ ಸರ್ಟಿಫಿಕೇಟ್ ಜೊತೆಗೆ ತರಬೇರಿ ಮತ್ತು ಅನುಭವ ಅಗತ್ಯ ಎಂದು ತಿಳಿಸಿದರು.
ಸುದ್ದಿಗಾಗಿ ಕಾಸು ಪಡೆಯದ ಡಿ.ವಿ.ಜಿ. ಒಂದೊಮ್ಮೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಗೆ ಆಗಮಿಸಿದ್ದ ಪತ್ರಕರ್ತರಿಗೆ ಹಣದ ಪಾಕೆಟ್ ಕೊಡಲಾಗಿತ್ತು. ಪಾಕೆಟ್ ಕೊಟ್ಟರೆ ಸುದ್ದಿ ಬರುವುದಿಲ್ಲ ಎಂದು ಡಿವಿಜಿ ಹೇಳಿದ್ದರು ಜೊತೆಗಿದ್ದ ಇಬ್ಬರು ಪತ್ರಕರ್ತರನ್ನು ಮನೆಗೆ ಕರೆದುಕೊಂಡು ಹೋದಾಗ ಮನೆಯಲ್ಲಿ ಚಹಾ ಮಾಡಲು ಸಕ್ಕರೆ, ಚಹಾಪುಡಿ ಇಲ್ಲ ಎಂದು ಹೆಂಡತಿ ತಿಳಿಸಿದಾಗ, ಕಿರಾಣಿ ಅಂಗಡಿಯವನಿಗೆ ಚೀಟಿ ಬರೆದುಕೊಟ್ಟು ಉದ್ರಿ ಕೊಡಲು ತಿಳಿಸಿದರಂತೆ. ಅವನು ಉದ್ರಿ ಕೊಟ್ಟ ನಂತರ ಚಹಾ ಕುಡಿಸಿ ಕಳಿಸಲಾಯಿತು. ಇದನ್ನು ಅವರ ಮನೆಗೆ ಹೋಗಿ ಚಹಾ ಕುಡಿದು ಬಂದ ಪತ್ರಕರ್ತರು ತಿಳಿಸಿದರು ಎಂಬುದು ಅವರ ಬದುಕಿನ ಓದಿನಿಂದ ತಿಳಿದು ಬರುವ ಸಂಗತಿ.
-ಪಿ.ಎಂ. ಮಣ್ಣೂರ, ಹಿರಿಯ ಪತ್ರಕರ್ತ
ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹಾವನೂರ ನಿರೂಪಿಸಿದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ವಿ.ಎನ್. ಸ್ವಾಗತಿಸಿದರು. ಹಿರಿಯ ಪತ್ರಕರ್ತ ಪಿ.ಎಂ. ಮಣ್ಣೂರ ಪ್ರಾಸ್ತಾವಿಕ ಮಾತನಾಡಿದರು. ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಸಿದ್ದೇಶ್ವರಪ್ಪ ಅತಿಥಿಗಳಾಗಿ ಆಗಮಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಕೆ.ಎಚ್ ಅಧ್ಯಕ್ಷತೆ ವಹಿಸಿದ್ದರು.
ಎಚ್ಕೆಆರ್ ಡಿಬಿ ಬಗ್ಗೆ ಆರ್.ಸಿ. ಹೇಳಿದ್ದೇನು?
ಮೊದಲು ಏರಿಯಾ ಡೆವಲಪ್ ಮೆಂಟ್ ಬೋರ್ಡ್. (ಎಚ್ಕೆ ಎಡಿಬಿ) ಇದೀಗ ರಿಜಿನಲ್ ಡೆವಲಪ್ ಮೆಂಟ್ ಬೋರ್ಡ್ (ಎಚ್ಕೆ ಆರ್ ಡಿಬಿ). ಆಗ ೪೮ ಜನ ಸಿಬ್ಬಂದಿ, ೮೮ ಜನ ಸಿಬ್ಬಂದಿ ಇದ್ದಾರೆ. ನಮ್ಮ ಹಂತದಲ್ಲಿ ಸಾಧ್ಯವಿರುವುದನ್ನು ಮಾಡಿದ್ದೇವೆ. ರಸ್ತೆ, ಚರಂಡಿ ಮಾತ್ರ ಮಾಡಲಾಗಿತ್ತು. ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದ ನ್ಯೂಟ್ರಿಷಿಯನ್ ಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ೨೦೧೮-೧೯ನೇ ಸಾಲಿನಲ್ಲಿ ೧೨೦೦ ಕೋಟಿ ಖರ್ಚು ಮಾಡಲಾಗಿದೆ. ಬೊರ್ಡ್ ಅಡಿಯಲ್ಲಿ ಕೈಗೆತ್ತಿಕೊಳ್ಳುವ ಯೋಜನೆಗಳಿಗೆ ಕಾಲಮಿತಿ ಹಾಕಿಕೊಳ್ಳಲಾಗಿದೆ.
ಇದೇವೇಳೆಯಲ್ಲಿ ಪಿ.ಎಂ. ಮಣ್ಣೂರ, ಶಂಕರ ಕೋಡ್ಲಾ, ವೆಂಕಟರಾವ ಖಮೀತ್ಕರ್, ಅಜೀಜುಲ್ಲಾ ಸರ್ಮಸ್ತ ಅವರನ್ನು ಸಂಘದ ವತಿಯಿಂದ ಸತ್ಕರಿಸಲಾಯಿತು. ನಂತರ ಪ್ರಾದೇಶಿಕ ಆಯುಕ್ತರೊಂದಿಗೆ ಸಂವಾದ ನಡೆಯಿತು. ಡಿ. ಶಿವಲಿಂಗಪ್ಪ, ರಾಮಕೃಷ್ಣ ಬಡಶೇಷಿ, ಎಸ್.ಬಿ. ಜೋಶಿ, ಸಿದ್ದು ಸುಬೇದಾರ, ಡಾ. ಶಿವರಾಮ ಅಸುಂಡಿ, ದೇವಯ್ಯ ಗುತ್ತೇದಾರ, ಬಸವರಾಜ ಚಿನಿವಾರ, ಶಿವರಂಜನ್ ಸತ್ಯಂಪೇಟೆ, ಸುರೇಶ ಬಡಿಗೇರ ಇತರರು ಭಾಗವಹಿಸಿದ್ದರು.