ಜೇವರ್ಗಿ: ಇಲ್ಲಿನ ಯಡ್ರಾಮಿ ತಾಲ್ಲೂಕಿನ ಇಜೇರಿ, ಗುಗಿಹಾಳ ಮತ್ತು ಯಲಗೋಡ ಗ್ರಾಮದ ರೈತರ ಜಮೀನಿನಲ್ಲಿ ನಡೆಯುತ್ತಿರುವ ಕೆರೆ ತುಂಬು ಯೋಜನೆ ಕಾಮಗಾರಿ ಸಂಪೂರ್ಣವಾಗಿ ಕಳಪೆ ಮಟ್ಟದಿಂದ ಕೂಡಿದ್ದು, ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಕ್ರಮಕೈಗೋಳ್ಳುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಚಿಗರಹಳ್ಳಿ ಕ್ಯಾಂಪ್ ನಲ್ಲಿ ಇರುವ ಕೆಬಿಜೆಎನ್ ಎಲ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು.
ಉನ್ನತ ಮಟ್ಟದ ತನಿಖೆ ಮಾಡಬೇಕು ಗುಣಮಟ್ಟದ ಕಾಮಗಾರಿ ಮಾಡುವರೆಗೂ ಕಾಮಗಾರಿ ಬಿಲ್ ಪಾವತಿ ಮಾಡಬಾರದು ಹಾಗೂ ರೈತರ ಜಮೀನಿನಲ್ಲಿ ಇರುವ ಬೆಳೆಗಳು ಕಾಮಗಾರಿಯಿಂದ ಹಾಳಗುತ್ತಿದ್ದು ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಅಧೀಕ್ಷಕ ಅಭಿಯಂತರರು, ಭೀಮರಾಯನಗುಡಿ ವೃತ್ತದ ರವರು ಕಳಪೆ ಮಟ್ಟದ ಕಾಮಗಾರಿ ದೂರಿನ ಬಗ್ಗೆ ಒಂದು ವಾರದಲ್ಲಿ ತನಿಖೆ ಮಾಡಿ ವರದಿ ಸಲ್ಲಿಸಲಾಗುವುದು ,ರೈತರಿಗೆ ಬೆಳೆ ಪರಿಹಾರ ಬಗ್ಗೆ ಒಂದು ವಾರದಲ್ಲಿ ಅಧಿಕಾರಿಗಳ ಸಭೆ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಹೋರಾಟವನ್ನು ಹಿಂದೆಗೆದ್ದುಕೊಳ್ಳಬೇಕೆಂದು ಮನವಿಗೆ ಧರಣಿ ಕೈಬಿಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರವಣಕುಮಾರ ಡಿ ನಾಯಕ,ರೈತ ಸಂಘದ ಮುಖಂಡರಾದ ಅಲ್ಲಾಪಟೇಲ್ ಮಾಲಿ ಬಿರಾದಾರ ಇಜೇರಿ,ಚಂದ್ರು ಮಲ್ಲಾಬಾದ,ಸೈದಪ್ಪ ಹೊಸಮನಿ,ತಾಯಪ್ಪ ನಾಯಕ,ಅಂಬ್ರೇಶ ಲಿಂಗಸ್ಗೂರು,ಸಿದ್ದು ನೀರಲಕೋಡ,ವಿವಿಧ ಗ್ರಾಮದ ರೈತರು,ರೈತ ಸಂಘದ ಮುಖಂಡರು ಹೋರಾಟದಲ್ಲಿ ಭಾಗವಹಿಸಿದ್ದರು.