ಸೃಜನಶೀಲ ಬರಹಗಾರರ ಸಾಲಿನಲ್ಲಿ ಡಾ:ಸತ್ಯನಾರಾಯಣ ಅಲದರ್ತಿ ನಿಲ್ಲುತ್ತಾರೆ: ಜಾಲವಾದಿ

0
19

ಸುರಪುರ: ಅನಕೃ,ತರಾಸು ಅವರಂತಹ ಸೃಜನಶೀಲ ಬರಹದ ಕಾದಂಬರಿಕಾರರ ಸಾಲಿನಲ್ಲಿ ನಮ್ಮ ಡಾ:ಸತ್ಯನಾರಾಯಣ ಅಲದರ್ತಿಯವರು ನಿಲ್ಲುತ್ತಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿದರು.

ನಗರದ ತಾಲೂಕು ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಡಾ:ಸತ್ಯನಾರಾಯಣ ಅಲದರ್ತಿಯವರ ಎಂದೆಂದಿಗೂ ಕಾದಂಬರಿ ಲೋಕಾರ್ಪಣೆ ಅಂಗವಾಗಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ,ಡಾ:ಸತ್ಯನಾರಾಯಣ ಅಲದರ್ತಿಯವರು ಕೇವಲ ಒಬ್ಬ ವೈದ್ಯರು ಎಂದು ಭಾವಿಸಿದ್ದೆವು,ಆದರೆ ಅವರ ಬರಹ ನೋಡಿದರೆ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುತ್ತಾರೆ.ಈಗ ಅವರ ಎಂದೆಂದಿಗೂ ಕಾದಂಬರಿಯೂ ಅಂತಹ ಬರಹವನ್ನು ಹೊಂದಿದೆ ಎಂದರು.ಅಲ್ಲದೆ ಇದೇ ೨೧ನೇ ತಾರೀಖು ನಗರದ ಅದಿತಿ ಹೋಟೆಲ್‌ನಲ್ಲಿ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಕಾದಂಬರಿಕಾರ ಡಾ:ಸತ್ಯನಾರಾಯಣ ಅಲದರ್ತಿ ಮಾತನಾಡಿ,ನನಗೆ ಮೊದಲಿನಿಂದಲೂ ಓದಿನ ಕುರಿತು ತುಂಬಾ ಆಸಕ್ತಿ ಇತ್ತು,ಈಗ ಕೊರೊನಾ ಸಂದರ್ಭದಲ್ಲಿ ಬರೆಯಲು ಅನುಕೂಲವಾಯಿತು ಎಂದರು.ಅಲ್ಲದೆ ಮುಂದೆ ಹಂಪಿಯ ಕುರಿತು ಇನ್ನೊಂದು ಕಾದಂಬರಿ ಬರೆಯು ಆಸೆ ಇದೆ ಎಂದು ಇಂಗಿತ ವ್ಯಕ್ತಪಡಿಸಿದರು.ಪ್ರತಿಯೊಬ್ಬರು ಹೆಚ್ಚೆಚ್ಚು ಓದಿನ ಕಡೆಗೆ ಆಸಕ್ತಿಹೊಂದಿದಲ್ಲಿ ಅಂತವರಿಂದ ಉತ್ತಮ ಕೃತಿಗಳೂ ಹೊರಬರಲಿವೆ ಎಂದರು.

ಇದೇ ಸಂದರ್ಭದಲ್ಲಿ ಯುವ ಸಾಹಿತಿಗಳಾದ ಕನಕಪ್ಪ ವಾಗಣಗೇರಾ,ಮಹಾಂತೇಶ ದೇವರಗೋನಾಲ ಅವರು ಎಂದೆಂದಿಗೂ ಕಾದಂಬರಿ ಹಾಗೂ ಡಾ:ಸತ್ಯನಾರಾಯಣ ಅಲದರ್ತಿಯವರ ವೈದ್ಯಕೀಯ ಸೇವೆಯ ಕುರಿತು ಗುಣಗಾನ ಮಾಡಿದರು.ನಂತರ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವೈದ್ಯ ಡಾ:ಸತ್ಯನಾರಾಯಣ ಅಲದರ್ತಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಅಶೋಕ ಎಸ್.ಅಲದರ್ತಿ,ರಾಘವೇಂದ್ರ ಭಕ್ರಿ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here