ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಪುರುಷ ಮತ್ತು ಮಹಿಳಾ ಬಂದಿಗಳು ಹಾಗೂ ಅವರ ಮಕ್ಕಳೊಂದಿಗೆ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ ಬಂದಿಗಳು ಹಾಗೂ ಮಹಿಳಾ ಬಂದಿಗಳ ಮಕ್ಕಳು ಶ್ರೀಕೃಷ್ಣನ ವೇಷ-ಭೂಷಣವನ್ನು ಧರಿಸಿ ಕಾರ್ಯಕ್ರಮದಲ್ಲಿ ಶೋಭೆಯನ್ನು ತಂದಿತ್ತು. ಮಕ್ಕಳು ಮತ್ತು ಬಂದಿಗಳು ಶ್ರೀಕೃಷ್ಣನ ನೃತ್ಯ ಮತ್ತು ಹಾಡುಗಳನ್ನು ಹಾಡಿದರು.
ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಪಿ.ರಂಗನಾಥ್‌ವರರು ಕಾರ್ಯಕ್ರಮದಲ್ಲಿ ನೃತ್ಯ ಮತ್ತು ಹಾಡಿರುವ ಬಂದಿಗಳಿಗೆ ಪ್ರಶಂಸಿಸುತ್ತಾ, ಎಲ್ಲರು ಒಳ್ಳೆಯ ಗುಣ ಸ್ವಭಾವವನ್ನು ಬೆಳೆಸಿಕೊಂಡು ಕಾರಾಗೃಹದಿಂದ ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಹೊಂದಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಬಿ.ಎಂ.ಕೊಟ್ರೇಶ್, ಅಧೀಕ್ಷಕರು,ಹುಸೇನಿ ಪೀರ್ ಸಾಬ್ ಸಹಾಯಕ ಅಧೀಕ್ಷಕರು, ಜೈಲರ್‌ಗಳಾದ ಸೈನಾಜ್ ಎಂ. ನಿಗೇವಾನ್, ಸರೋಜಾ ಎಸ್.ಟಿ,ಅರ್ಜುನ್ ಸಿಂಗ್, ಅಶೋಕ ಹೊಸಮನಿ ಉಪಸ್ಥಿತರಿದ್ದರು. ನಿರೂಪಣೆಯನ್ನು ಶಿಕ್ಷಕರಾದ ನಾಗರಾಜ ಮುಲಗೆ, ನೆರವೇರಿಸಿಕೊಟ್ಟರು. ಬಂದಿಗಳಿಂದ ಶ್ರೀಕೃಷ್ಣನ ಗೀತೆಗಳನ್ನು ಹಾಡಿಸಲಾಗಿರುತ್ತದೆ.