ಕಲಬುರಗಿ: ಒಂದು ಚಿತ್ರ ಸಾವಿರ ಪದಗಳಿಗೆ ಸಮ. ಪದಗಳಲ್ಲಿ ವರ್ಣಿಸಲು ಸಾಧ್ಯವಾಗದ ಅದೆಷ್ಟೋ ಮಾತುಗಳನ್ನು ಕೇವಲ ಒಂದು ಚಿತ್ರ ಬಿಡಿಸಿಡುತ್ತದೆ. ಛಾಯಾಗ್ರಾಹಕ ತೆಗೆದ ಫೋಟೋಗಳು ಇಡೀ ಜಗತ್ತನ್ನು ಪರಿಚಯಿಸುತ್ತದೆ. ಛಾಯಾಗ್ರಾಹಕರು ಸದಾ ಕ್ರಿಯಾಶೀಲರಾಗಿ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಸಮಾಜ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿರುವ ಛಾಯಾಗ್ರಾಹಕರಿಗೆ ಭದ್ರತೆ ಇಲ್ಲದಂತಾಗಿದೆ. ಅವರ ಭದ್ರತೆಗೆ ಸರಕಾರ ಮುಂದಾಗಬೇಕೆಂದ ಅವರು, ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಕ್ಷೇತ್ರದವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಗುತ್ತಿದೆ. ಛಾಯಾಗ್ರಾಹಕರ ಸೇವೆ ಅಮೋಘವಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಬಣ್ಣಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಏರ್ಪಡಿಸಿದ ವಿಶ್ವ ಛಾಯಾಚಿತ್ರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಅಧ್ಯಕ್ಷ ಬಸವರಾಜ ತೋಟದ್, ರೈತ ಮುಖಂಡ ಮಲ್ಲಿನಾಥ ಪಾಟೀಲ ಕಾಳಗಿ, ಕಸಾಪ ದಕ್ಷಿಣ ವಲಯ ಅಧ್ಯಕ್ಷ-ಪತ್ರಕರ್ತ ಶಾಮಸುಂದರ ಕುಲಕರ್ಣಿ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಪ್ರಮುಖರಾದ ಶಿವಶರಣ ಹಡಪದ, ರವಿಕುಮಾರ ಶಹಾಪುರಕರ್, ಶಿವಕುಮಾರ ಸಿ.ಎಚ್., ವಿಶ್ವನಾಥ ತೊಟ್ನಳ್ಳಿ, ಮಲ್ಲಿನಾಥ ಸಂಗಶೆಟ್ಟಿ, ಸುರೇಶ, ಪ್ರಕಾಶ ಎಂ.ಶೇರಖಾನೆ, ಅನೀಲಕುಮಾರ ಗಣೇಶಕರ್, ಅರುಣಕುಮಾರ ಬಿ.ತೆಗನೂರ ಸೇರಿದಂತೆ ಅನೇಕ ಛಾಯಾಗ್ರಾಹಕರು, ಸಾಹಿತ್ಯ ಪ್ರೇರಕರು ಭಾಗವಹಿಸಿದ್ದರು.
ವಿಶೇಷ ಸತ್ಕಾರ: ಫೋಟೋಗ್ರಾಫಿಯಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಹಾವಣಿ, ಗಂಗಾರಾಮ ರಾಠೋಡ, ನಂದಕಿಶೋರ ಚವ್ಹಾಣ, ವೆಂಕಟೇಶ ಪುಕಾಳೆ, ಸೋಮನಾಥ ಕಾಳಗಿ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸತ್ಕರಿಸಲಾಯಿತು.