ಚಿಂಚೋಳಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ನಡೆಯುವ ಅಂಗನವಾಡಿ ಕೇಂದ್ರಗಳಿಗೆ ಅಪೌಷ್ಟಿಕತೆಯ ಮಕ್ಕಳಿಗೆ ಗರ್ಬಿಣಿಯರಿಗೆ ಕಿಶೋರಿಯರಿಗೆ ವಿತರಣೆ ಮಾಡುತ್ತಿರುವ ಮೊಟ್ಟೆಗಳು ನೀರಿನಲ್ಲಿ ಕುದಿಸಿದಾಗ ಮೊಟ್ಟೆಯ ಒಳಭಾಗದಲ್ಲಿರುವ ಹಳದಿ ಅಂಶವು ಬಿಳಿ ಬಣ್ಣಕ್ಕೆ ತಿರುಗುತ್ತಿದೆ ಎಂದು ಆರೋಪಿಸಿ ಗುಣಮಟ್ಟದ ಮೊಟ್ಟೆಗಳನ್ನು ಪೂರೈಕ್ಕೆ ಮಾಡಬೇಕೆಂದು ಒತ್ತಾಯಿಸಿ ಶಾಸಕ ಡಾ. ಅವಿನಶ್ ಜಾಧವ್ ಅವರಿಗೆ ಸಾಮಾಜಿಕ ಹೋರಾಟಗಾರ ಮಾರುತಿ ಗಂಜಗಿರಿ ಒತ್ತಾಯಿಸಿದ್ದಾರೆ.
ಈ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದ ಅವರು, ಕೆಮಿಕಲ್ ನಿಂದ ತಯಾರಾಗುತ್ತಿರುವ ಮೊಟ್ಟೆಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಪ್ರಶ್ನಿಸಿದಾಗ ಕುದಿಸಿದ ಮೊಟ್ಟೆ ಒಳಗಡೆಯಿರುವ ಬಿಳಿಬಣ್ಣದ ಅಂಶ ವಿಕ್ಷಿಸಿ ಮತ್ತು ಹಸಿ ಮೊಟ್ಟೆಗಳನ್ನು ಒಡೆದು ನೋಡಿ ಕೂಡಲೆ ಇದರ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುತ್ತೆನೆಂದು ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಛೇರಿಗೆ ಆಗಮಿಸಿದ್ದ ಶಾಸಕ ಅವಿನಾಶ ಜಾಧವರವರು ಹೇಳಿದರು.
ಶಾಸಕ ಜಾಧವ್ ಮನವಿ ಸ್ವೀಕರಿಸಿ ಕೂಡಲೇ ಮೊಟ್ಟೆಗಳನ್ನು ವೈಜ್ನ್ಯಾನಿಕ ಪರೀಕ್ಷೆಗೆ ಒಳಪಡಿಸಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಮೊಟ್ಟೆಗಳನ್ನು ಪೂರೈಸುವ ಭರವಸೆ ನೀಡಿದರು.