ರಂಗಕಾಳಜಿಯ ಲೇಖಕ ಗವೀಶ ಹಿರೇಮಠ

0
98

ಕಾವ್ಯ, ಕಾದಂಬರಿ, ಚರಿತ್ರೆ, ಅಭಿನಂದನಾ ಮತ್ತುರಂಗೇತಿಹಾಸಕ್ಷೇತ್ರದಲ್ಲಿತುಂಬಾಅಭಿಮಾನದಿಂದ ಬರವಣಿಗೆ ಮಾಡಿದ ಲೇಖಕರುಎಂದರೆ, ಶ್ರೀ ಗವೀಶ ಹಿರೇಮಠ, ’ರಂಗಕಾಳಜಿ ಹೊಂದಿರುವಅಪರೂಪದ ಲೇಖಕರು.ಈ ಏಳೂವರೆ ದಶಕದತಮ್ಮಜೀವನಾನುಭವದಲ್ಲಿ ’ರಂಗಸಂಬಂಧಿ’ ಕಾರ್ಯವೇ ಹೆಚ್ಚು. ಸದಾಕಲಾವಿದರ ಬದುಕು, ಅವರಜೀವನದ ಏಳು-ಬೀಳು, ಶ್ರಮ, ಕ? ಸುಖ.. ಹೀಗೆ ’ರಂಗಕುಸುಮ’ಗಳ ’ರಂಗನೋಟ’ವನ್ನುಕನ್ನಡದಲ್ಲಿತುಂಬಾ ತಳಸ್ಪರ್ಶಿಯಾಗಿ ಕೊಟ್ಟವರು.

’ವೃತ್ತಿರಂಗವೈಭವ’ದ ಸಂದರ್ಭಗಳನ್ನು, ಬಣ್ಣದ ಬದುಕಿನ ನಿಜದ ಹಿಂದಿನ ಕಥನವನ್ನು, ಬಣ್ಣ ಮಾಸಿದ ಮೇಲೆ ಆಗುವ ಯಾತನಾದಾಯಕಜೀವನದಚಿತ್ರಣವನ್ನು, ರಂಗಭೂಮಿಯಿಂದಲೇ ಶ್ರೀಮಂತ ಬದುಕನ್ನುಕಟ್ಟಿಕೊಂಡ ಅನೇಕ ಕಲಾವಿದರನ್ನು, ರಂಗ ನಟರನ್ನೇ ನೆಚ್ಚಿಕೊಂಡು ಲಕ್ಷಾಂತರ ರೂ.ಗಳಿಕೆ ಮಾಡಿಕೊಂಡ ಕಂಪನಿ ಮಾಲೀಕರ ಬಗ್ಗೆ, ತಮ್ಮಇಡೀ ಬದುಕೇರಂಗ ’ಕಂಪನಿ’ ಕಟ್ಟಿಕೋಟ್ಯಾಂತರರೂ. ನ? ಅನುಭವಿಸಿದ ರಂಗಪ್ರೀತಿಯ ಮನಸ್ಸುಗಳ ಬಗ್ಗೆ, ಟಿಕೇಟ್ ಮಾರುವವನಿಂದ ಹಿರಿದು ಹಣಎಣಿಕೆ ಮಾಡುವ ಮಾಲೀಕನವರೆಗೂ ’ರಂಗಭೂಮಿ’ಯಎಲ್ಲಾ ಮಗ್ಗಲುಗಳನ್ನು ತುಂಬಾಆಸೆಯಿಂದ ,ತುಂಬಾ ಪ್ರೀತಿಯಿಂದ, ತುಂಬಾಗೌರವದಿಂದಕಂಡು ’ರಂಗೇತಿಹಾಸ’ವನ್ನು ದಾಖಲಿಸಿದ ಕನ್ನಡದ ಮೊಟ್ಟ ಮೊದಲ ಲೇಖಕರು.

Contact Your\'s Advertisement; 9902492681

ರಂಗಭೂಮಿಯನ್ನು ಮತ್ತುರಂಗಕಲಾವಿದರನ್ನುಅತ್ಯಂತ ಸಮೀಪದಿಂದ ನೋಡಿದ ಕ್ರಿಯಾಶೀಲ ’ರಂಗಚೇತನ’ ಶ್ರೀ ಗವೀಶ ಹಿರೇಮಠಅವರ ರಂಗಕಾಳಜಿಯ ಬದುಕೇಒಂದುರೂಪಕ. ಅವರ ವಯಸ್ಸಿನ ಮುಕ್ಕಾಲು ಪಾಲು ’ರಂಗ’ಕ್ಕಾಗಿತೇಯ್ದಿದ್ದಾರೆ.ಇದೂವರೆಗಿನರಂಗ ಪ್ರೀತಿಯ ಬದುಕು, ರಂಗ ನಂಟಿನ ನೆನಪಿನ ಮೆರವಣಿಗೆ, ಶ್ರೀ ಗವೀಶ ಹಿರೇಮಠಅವರರಂಗದುಡಿಮೆಒಂದುಕಡೆಯಾದರೆ, ಅವರ ಸಾಹಿತ್ಯಕ್ಷೇತ್ರದ ಪ್ರವೇಶಿಕೆಯಾಗಿದ್ದೆ ’ಪ್ರಣಯಕಾವ್ಯ’ದ ಮೂಲಕ.ಅದು ಆ ಕಾಲದಲ್ಲಿಅತ್ಯಂತ ವಿಮರ್ಶೆಗೆ ಒಳಪಟ್ಟ ಪುಸ್ತಿಕೆ. ಗವೀಶ ಹಿರೇಮಠ ಅವರ ಜೀವನದಲ್ಲಿ ’ರಂಗ ಗಳಿಗೆ’ಗಳೇ ಜಾಸ್ತಿ.ಕಲ್ಯಾಣಕರ್ನಾಟಕದ ಕೊಪ್ಪಳ ಜಿಲ್ಲೆಯ ಪುಟ್ಟಊರಿನಿಂದಇವತ್ತುರಾಜಧಾನಿ ಬೆಂಗಳೂರುವರೆಗೂ ತಮ್ಮ ’ರಂಗನೆಂಟರನ್ನು ಹೊಂದಿರುವರು.ಉದ್ಯೋಗದ ಹಿನ್ನೆಲೆಯಲ್ಲಿ ಕಲಬುರ್ಗಿಗೆ ಬಂದರು.

ಇಲ್ಲಿಯ ವಿಶ್ವವಿದ್ಯಾಲಯದಗ್ರಂಥಾಲಯ ವಿಭಾಗದಲ್ಲಿ ಸೇವೆ ಸಲ್ಲಿಸಿದರು.ರಂಗಲೋಕದಜೀವನ್ಮುಖಿ ಶ್ರೀ ಗವೀಶ ಹಿರೇಮಠ, ಈ ನೆಲದಜವಾರಿಗುಣಸ್ವಭಾವ ಹೊಂದಿದ ಲೇಖಕರು.ಸಾಂಸ್ಕೃತಿಕ ಸಂವಹನ, ಸಂಘಟನೆ ಮಾಡುತ್ತಲೇರಂಗ ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ.
ರಂಗ ಸಂವಾದ, ರಂಗ ೧೯೭೪ ರಲ್ಲಿಯೇ ಪ್ರಣಯ ಮುಕ್ತಕಗಳು ಎಂಬ ಕಾವ್ಯಕೃತಿಯನ್ನು ಪ್ರಕಟಿಸುವುದರ ಮೂಲಕ ಸಾಹಿತ್ಯ ಲೋಕದಲ್ಲಿಗಟ್ಟಿಹೆಜ್ಜೆಯನ್ನಿಟ್ಟರು. ನನಗಿನ್ನೂ ಹೇಳುವುದಿದೆ, ಬದುಕುಚದುರಂಗದಾಟ, ಹಕ್ಕಿಗೂಡು ಸೇರಿತು, ಡಾ.ಎಂ.ವಿ.ಮಿಣಜಗಿ, ಕಲಾವಿದರು ನಡೆದು ಬಂದದಾರಿ, ಸೃಜನಶೀಲ ಕಲಾವಿದರು, ರಂಗ ಕುಸುಮಗಳು, ಹೊತ್ತು ಮುಳುಗುವ ಮುನ್ನ, ರಂಗಾಂತರಂಗ ಹೀಗೆ ಸಾಲು ಸಾಲಾಗಿ ಕೃತಿಗಳನ್ನು ಕೊಟ್ಟಿದ್ದಾರೆ.

ಅಪೂರ್ವತೇಜೋಮೂರ್ತಿ ಮಹಾದೇವಿಯಕ್ಕ, ಕಲಬುರಗಿಗುರುಬಸವ ಬೃಹನ್ಮಠ, ವೃತ್ತಿರಂಗಭೂಮಿಯಜೀವಧ್ವನಿ ಫಕೀರಪ್ಪ ವರವಿ, ಧೀಮಂತರಂಗಕಲಾವಿದೆರೆಹಮಾನವ್ವಕಲ್ಮನಿ, ಶ್ರೀಧರ ಹೆಗಡೆ, ಶರಣಯ್ಯ ವಸ್ತ್ರದಎಂಬುವವರಜೀವನಚರಿತ್ರೆಯನ್ನು ದಾಖಲಿಸಿದ್ದಾರೆ.ಕನ್ನಡದಲ್ಲಿ ೧೭ ಅಭಿನಂದನಾ ಗ್ರಂಥಗಳನ್ನು ಸಂಪಾದಿಸಿದ ಏಕೈಕ ಲೇಖಕರು.ಗಾಳಿಗಂಧ, ಸಂಪ್ರೀತಿ, ರಂಗಪ್ರಭೆ, ಚಿನ್ನದಗಟ್ಟಿ, ಸಿರಿಗಂಧ, ಸಂತೃಪ್ತಿ, ಗಾಂಧಿ ನೆನಪು ತಂದಗಾಂಧಿ, ಸ್ನೇಹ ಸಿರಿ ಸೇರಿದಂತೆ ಅನೇಕ ಅಭಿನಂದನಾ ಗ್ರಂಥಗಳನ್ನು ಹೊರತಂದ ಶ್ರೇಯಸ್ಸುಇವರಿಗೆ ಸಲ್ಲಬೇಕು.

ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಮೈಸೂರುದಸರಾ ಕವಿಗೋಷ್ಠಿ, ಮುಂಬೈನಲ್ಲಿ ನಡೆದ ಬಹುಭಾ? ಕವಿಸಮ್ಮೇಳನ ಹೀಗೆ ಅನೇಕ ಕಡೆಗಳಲ್ಲಿ ಕಾವ್ಯ ವಾಚನ ಮಾಡಿದ್ದಾರೆ.೧೯೮೯ ರಿಂದ ೧೯೯೦ ವರೆಗೆ ಸಂಯುಕ್ತಕರ್ನಾಟಕದಲ್ಲಿರಂಗ ಕುಸುಮಗಳು ಹಾಗೂ ೨೦೦೩ ರಿಂದ ೨೦೦೪ ವರೆಗೆ ವಿಜಯಕರ್ನಾಟಕದಲ್ಲಿರಂಗಾಂತರಂಗ ಎಂಬ ಅಂಕಣ ಬರಹಗಳನ್ನು ಬರೆದಿದ್ದಾರೆ.ಕರ್ನಾಟಕ ನಾಟಕಅಕಾಡೆಮಿ ಸದಸ್ಯ, ಜಾನಪದ ಮತ್ತುಯಕ್ಷಗಾನಅಕಾಡೆಮಿ ಸದಸ್ಯರಾಗಿಯೂ ಅನೇಕ ಚಟುವಟಿಕೆಗಳನ್ನು ಮಾಡಿದ್ದಾರೆ.ಕರ್ನಾಟಕ ಲಲಿತಾಕಲಾಅಕಾಡೆಮಿ ಪುರಸ್ಕಾರ, ನಾಟಕಅಕಾಡೆಮಿ ವಾರ್ಷಿಕ ಪ್ರಶಸ್ತಿ, ಗುಲಬರ್ಗ ವಿವಿ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆಟ್ರಸ್ಟ್ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.ಇಂತಹಅವಿಚ್ಛಿನ್ನ ಪ್ರತಿಭೆ ಶ್ರೀ ಗವೀಶ ಹಿರೇಮಠಅವರದು ಬಹುಮುಖಿ ಸಾಧನೆ.

ಸ್ವಾತಂತ್ರ್ಯೋತ್ಸ್ವದಅಮೃತ ಮಹೋತ್ಸವ ವರ್ಷದ ಸಂದರ್ಭದಲ್ಲಿಯೇ ಗವೀಶ ಹಿರೇಮಠ ಬದುಕಿನಅಮೃತಮಹೋತ್ಸವ ವರ್ಷ ಆಚರಿಸಬೇಕಾಗಿತ್ತು. ಅವರ ಬಹುಮುಖ ಸಾಧನೆಯ ೭೫ ವಸಂತಗಳ ತುಂಬುಜೀವನದ ಸಂದರ್ಭದಲ್ಲಿ ’ಗುಣಗ್ರಾಹಿ’ ಎಂಬ ಗೌರವಗ್ರಂಥವನ್ನು ಸಮರ್ಪಿಸಬೇಕೆಂಬ ಆಶಯ ನಮ್ಮದಾಗಿತ್ತು.ಆದರೆ ನಾವೊಂದು ಬಗೆದರೆದೈವವೊಂದು ಬಗೆಯಿತೆಂಬಂತೆ ದಿನಾಂಕ ೧೩-೦೮-೨೦೨೦ ಗುರುವಾರ ಹೊತ್ತು ಮುಳುಗುವ ಮುನ್ನ ವೇ ತಮ್ಮ ಬದುಕನ್ನು ಮುಗಿಸಿದರು.ಅಭಿನಂದನಗ್ರಂಥ ಸಮರ್ಪಿಸುವದನ್ನು ಸಂಸ್ಮರಣೆಗ್ರಂಥವನ್ನಾಗಿ ಮಾರ್ಪಡಿಸಿ ಅವರ ದ್ವಿತೀಯ ವರ್ಷದಪುಣ್ಯ ಸ್ಮರಣೆ ಹಾಗೂ ಅವರ ೭೬ನೇ ಹುಟ್ಟುಹಬ್ಬದ (೦೮-೦೯-೨೦೨೨) ಸಮೀಪದಲ್ಲಿಅವರ ನೆನಪಿನ ’ಗುಣಗ್ರಾಹಿ’ ಗ್ರಂಥವನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ.

ಗವೀಶ ಅವರಚಿಕ್ಕಪ್ಪ ವಿಶ್ವಬಹುಭಾಷಾ ಕವಿ ಡಾ.ಪಂಚಾಕ್ಷರಿ ಹಿರೇಮಠರಿಗೆ ೯೦ರ ಇಳಿ ವಯಸ್ಸುಧಾರವಾಡದಅವರ ಹಿರಿಯಅಣ್ಣ ಪ್ರೊ. ಮಲ್ಲಿಕಾರ್ಜುನ ಹಿರೇಮಠರುಖ್ಯಾತಕಥೆಗಾರರುಕಾದಂಬರಿಕಾರರು, ಗದುಗಿನಅವರತಮ್ಮಅನ್ನದಾನಿ ಹಿರೇಮಠರು ಹಿರಿಯ ಕವಿಗಳು, ಗವೀಶ ಅವರದು ಬಹುದೊಡ್ಡಕುಟುಂಬ, ಅವರ ’ಗುಣಗ್ರಾಹಿ’ ಸಂಸ್ಮರಣಗ್ರಂಥದ ಲೋಕಾರ್ಪಣೆ ಸಮಾರಂಭಕ್ಕೆಅವರಎಲ್ಲಆತ್ಮೀಯ ಸ್ನೇಹಿತರನ್ನು ರಂಗಾಭಿಮಾನಿಗಳನ್ನು ಬಂಧು ಬಳಗದವರನ್ನೆಲ್ಲ ಆತ್ಮೀಯವಾಗಿ ಸ್ವಾಗತಿಸುತ್ತೇವೆ.

  • ಮಹಿಪಾಲರೆಡ್ಡಿ ಮುನ್ನೂರ್ – ಪ್ರಭಾಕರ ಜೋಶಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here