ಸುರಪುರ: ಎಂದೆಂದಿಗೂ ಕಾದಂಬರಿ ಬಿಡುಗಡೆ

0
14

ಸುರಪುರ:ನಗರದ ಅದಿತಿ ಹೋಟೆಲ್ ಸಭಾಂಗಣದಲ್ಲಿ ಖ್ಯಾತ ವೈದ್ಯಾಧಿಕಾರಿ ಡಾ:ಸತ್ಯನಾರಾಯಣ ಅಲದರ್ತಿಯವರು ಬರೆದಿರುವ ಪ್ರಥಮ ಕಾದಂಬರಿ ಎಂದೆಂದಿಗೂ ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಸಲಾಯಿತು.

ಕಾದಂಬರಿ ಬಿಡುಗಡೆಗೊಳಿಸಿದ ಸಾಹಿತಿ ರಾಜಶೇಖರ ಹಿರೇಮಠ (ರಾಗಂ) ಮಾತನಾಡಿ,ಇಂತಹ ೮೦ ಇಳಿ ವಯಸ್ಸಿನಲ್ಲಿಯೂ ಬರೆಯುವ ಆಸಕ್ತಿ ಹೊಂದಿ ಉತ್ತಮವಾದ ಕಾದಂಬರಿಯನ್ನು ಬರೆದಿರುವ ಡಾ:ಸತ್ಯನಾರಾಯಣ ಅಲದರ್ತಿಯವರನ್ನು ನೋಡಲು ಹಾಗೂ ಇಲ್ಲಿರುವ ನಮ್ಮೆಲ್ಲ ಆತ್ಮೀಯರನ್ನು ಕಾಣಲು ಈ ಭಾಗಕ್ಕೆ ಬಂದಿರುವೆ,ಡಾ:ಸತ್ಯನಾರಾಯಣ ಅಲದರ್ತಿಯವರು ಒಂದು ಉತ್ತಮವಾದ ಕಾದಂಬರಿಯನ್ನು ಬರೆದಿದ್ದು ಇನ್ನೂ ಹೆಚ್ಚೆಚ್ಚು ಕೃತಿಗಳು ಅವರಿಂದ ಹೊರಬರಲಿ ಎಂದರು.

Contact Your\'s Advertisement; 9902492681

ಅಲ್ಲದೆ ಇಂದು ಅನೇಕರು ಸಾಹಿತ್ಯ ಪರಿಷತ್‌ನ ಶಾಲು ಹಾರಕ್ಕಾಗಿ ಬರೆಯುವವರ ಸಂಖ್ಯೆ ಹೆಚ್ಚುತ್ತಿರುವುದು ಸಾಹಿತ್ಯ ವಲಯದ ದುರಂತವಾಗಿದೆ.ಆದರೆ ಅಲದರ್ತಿಯವರು ಇಂತವರಿಗೆ ಭಿನ್ನವಾಗಿದ್ದಾರೆ ಎಂದರು.ಯಾವ ಲೇಖಕ ತನ್ನನ್ನು ತಾನು ಅವಲೋಕಿಸಿಕೊಳ್ಳದ,ವಿಮರ್ಶಿಸಿಕೊಳ್ಳುವುದಿಲ್ಲವೋ ಅಂತಹ ಸಾಹಿತ್ಯ ಓದುವುದಕ್ಕೂ ಯೋಗ್ಯವಲ್ಲ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ,ಜಿಲ್ಲೆಯಲ್ಲಿ ಸಾಹಿತ್ಯ ವಲಯಕ್ಕೆ ದೊಡ್ಡ ಚಟುವಟಿಕೆಯ ಕೊಡುಗಡೆ ನೀಡುತ್ತಿರುವುದು ಸುರಪುರ ತಾಲೂಕಾಗಿದೆ.ಇದಕ್ಕೆ ನಮ್ಮ ಸಾಂಸ್ಕೃತಿ ರಾಯಭಾರಿಯಾಗಿದ್ದ ರಾಜಾ ಮದನಗೋಪಾಲ ನಾಯಕರು ಕಾರಣರಾಗಿದ್ದರು ಎಂದರು.ಡಾ:ಅಲದರ್ತಿಯವರ ವೃತ್ತಿ ಸೇವೆಯ ೫೦ನೇ ವರ್ಷಾಚರಣೆಯ ಸಂದರ್ಭದಲ್ಲಿ ಅಭಿನಂದನಾ ಗ್ರಂಥವನ್ನು ಹೊರತರೋಣ ಎಂಬ ಇಂಗಿತ ವ್ಯಕ್ತಪಡಿಸಿದರು.

ಗ್ರಂಥದ ಕುರಿತು ಖ್ಯಾತ ಕತೆಗಾರ ಮಹಾಂತೇಶ ನವಲಕಲ್ ಮಾತನಾಡಿ,ಡಾ:ಸತ್ಯನಾರಾಯಣ ಅಲದರ್ತಿಯವರ ಈ ಕೃತಿ ಲವ್ ಇನ್ ಟೈಮ್ಸ್ ಆಫ್ ಕೊರೊನಾ ಎಂದರೆ ತಪ್ಪಾಗದು ಎಂದರು.ಅಲ್ಲದೆ ಈ ಎಂದೆಂದಿಗೂ ಕಾದಂಬರಿ ಈ ಭಾಗದ ನೂರು ಕೃತಿಗಳಿಗೆ ಸಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಅನೇಕ ಜನರು ಹಾಗೂ ಕಸಾಪ ವತಿಯಿಂದ ಲೇಖಕ ಡಾ:ಸತ್ಯನಾರಾಯಣ ಅಲದರ್ತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.ಅಲ್ಲದೆ ಇದೇ ಸಂದರ್ಭದಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಟಿಹೆಚ್‌ಓ ಡಾ:ಆರ್.ವಿ.ನಾಯಕ,ನ್ಯಾಯವಾದಿ ಜೆ.ಅಗಸ್ಟಿನ್,ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ಮಾತನಾಡಿದರು,ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಳವಾರ,ಬೆರಗು ಪ್ರಕಾಶನದ ರಮೇಶ ಕತ್ತಿ ಕಡಣಿ ಭಾಗವಹಿಸಿ ಮಾತನಾಡಿದರು,ಸುರಪುರ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸಿದ್ದರು.ದೇವು ಹೆಬ್ಬಾಳ ನಿರೂಪಿಸಿದರು,ಕನಕಪ್ಪ ವಾಗಣಗೇರಾ ಸ್ವಾಗತಿಸಿದರು,ಮಹಾಂತೇಶ ದೇವರಗೋನಾಲ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here