ಕಲಬುರಗಿ: ಬಿದ್ದಾಪುರ ಕಾಲೋನಿಯಲ್ಲಿರುವ ನಗರದ ಭವಾನಿ ಮಂದಿರದಲ್ಲಿ ಹೈದರಾಬಾದ್ ಕರ್ನಾಟಕ ಯುವ ದಲಿತ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಆಶ್ರಯದಲ್ಲಿ ಹಮ್ಮಿಕೋಂಡ ಜನಪದ ನೃತ್ಯ ಹಾಗೂ ಸಂಸ್ಕೃತಿ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆಯ ಸದಸ್ಯೆ ಪಾರ್ವತಿ ರಾಜು ದೇವದುರ್ಗ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡ ಮಲ್ಲಪ್ಪ ಸರ್, ಕರವೇ ಹೈ-ಕ ಉಪಾಧ್ಯಕ್ಷ ಮನೋಹರಕುಮಾರ್ ಬೀರನೂರ, ಬಿಜೆಪಿ ಮುಖಂಡರಾದ ಪ್ರದೀಪ ಬಾಚನಹಳ್ಳಿಕರ್, ಬಿಜೆಪಿ ಎಸ್.ಸಿ.ಮೋರ್ಚಾ ಮಹಿಳಾ ಮಂಡಲ ಉಪಾಧ್ಯಕ್ಷೆ ಸಂತೋಷಿ ಜಗದಾಳೆ, ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಆಯೋಜಕ ದಿನೇಶ್ ನಾಯಕ್ ಹಾಗೂ ನೃತ್ಯ ಸಂಗೀತ ಸಾಹಿತ್ಯ ಕಲೆಯ ಕಲಾವಿದರು ಮತ್ತು ಇತರರು ಭಾಗವಹಿಸಿದ್ದರು. ನಂತರ ಕಲೇಯಲ್ಲಿ ಸಾಧನೆ ಮಾಡಿದ ಕಲಾ ಸಾಧಕರಿಗೆ ಕಲ್ಯಾಣ ಕರ್ನಾಟಕ ಕಲಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಂಸ್ಕೃತಿ ಕಾರ್ಯಕ್ರಮಗಳು ಜರುಗಿತು.