ಕಲಬುರಗಿ: ಮಕ್ತಂಪುರ ಬಡಾವಣೆಯ ಬಸವಣ್ಣ ದೇವಸ್ಥಾನದಲ್ಲಿ ಬಸವಣ್ಣ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಕುರಿತು ದಿನನಿತ್ಯ ದೇವಸ್ಥಾನದಲ್ಲಿ ರುದ್ರಾಭಿಷೇಕ ನಡೆಯುತ್ತಿದ್ದು ಸ್ಪಂದನಾ ಮಹಿಳಾ ವಿವಿದೊದ್ದೇಶ ಸಂಘದ ನೇತೃತ್ವದಲ್ಲಿ ರುದ್ರಾಭಿಷೇಕ್ ಮುಗಿದ ನಂತರ ಮಾಲಾಧಾರಿಗಳಿಂದ ಬಡ ಮಕ್ಕಳಿಗೆ ಪೆನ್ನು ಕಾಫಿ ವಿತರಿಸಿ ಹಾಗೂ ವಯೋವೃದ್ಧ ಹೆಣ್ಣುಮಕ್ಕಳಿಗೆ ಸೀರೆ ಕೊಟ್ಟು ಮಾನವೀಯತೆ ಮೆರೆದರು.
ಈ ಸಂದರ್ಭದಲ್ಲಿ ಗದ್ದುಗೆ ಮಠದ ಶ್ರೀಗಳಾದ ಪೂಜ್ಯ ವಿಜಯ ಮಹಾಂತ ದೇವರು ದಿವ್ಯಸಾನಿಧ್ಯ ವಹಿಸಿದರು. ಸಮಾಜ ಸೇವಕ ಶರಣು ಎಮ್.ಪಪ್ಪಾ, ಶಾಂತಾಬಾಯಿ ಎಮ್ ಪಪ್ಪಾ, ಗಿರಿಜಾ ಎಸ್.ಬಿಲಗುಂದಿ, ಸ್ಪಂದನಾ ಮಹಿಳಾ ಸಂಘದ ಅಧ್ಯಕ್ಷ ಲತಾ ಎಸ್.ಬಿಲಗುಂದಿ, ಉಪಾಧ್ಯಕ್ಷೆ ಸುಮಾ ಎಸ್.ಪಪ್ಪಾ, ಕಾರ್ಯದರ್ಶಿ ವಿಜಯಲಕ್ಷ್ಮಿ ಸಿ.ಸಿಂಗೋಡಿ, ಖಜಾಂಚಿ ರೂಪಾ ಬಿ.ಪವಾರ ಹಾಗೂ ಸಂಘದ ಸರ್ವ ಸದಸ್ಯರ ನೇತೃತ್ವದಲ್ಲಿ ಮಹಿಳೆಯರಿಗೆ ಉಡಿ ತುಂಬಿ ಪ್ರಸಾದ ವಿತರಿಸಿ ಭಜನೆ ಮಾಡುವ ಮೂಲಕ ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮದ ನಿರೂಪಣೆ ಚಂದ್ರಕಾಂತ್ ಆರ್.ಕಾಳಗಿ ವಕೀಲರು ಮಾಡಿದರು.