ಕಲಬುರಗಿ: ಸ್ವಾತಂತ್ರ್ಯ ಅಮೃತ ಮಹ್ಸೋವ ಹಿನ್ನೆಲೆಯಲ್ಲಿ ದೇಶದ ಪ್ರಗತಿಗೆ ಕಾಂಗ್ರೆಸ್ ಪಕ್ಷದ ಕೊಡುಗೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಲಬುರಗಿ ದಕ್ಷಿಣ ಕಾಂಗ್ರೆಸ್ ಪಕ್ಷದ ಮುಖಂಡ ಅಲ್ಲಂಪ್ರಭು ಪಾಟೀಲ್ ನೇತೃತ್ವದಲ್ಲಿ ಕಳೆದ 2 ದಿನಗಳಿಂದ ಆರಂಭವಾಗಿರುವ ಕಾಂಗ್ರೆಸ್ ಪಕ್ಷದ ಜನ ಜಾಗೃತಿ ಪಾದಯಾತ್ರೆಯ 2 ಹಂತದಲ್ಲಿ ಬುಧವಾರ ಹೀರಾಪೂರದಲ್ಲಿ ಮುಖಂರು ಇಡೀ ದಿನ ಸುತ್ತಾಡಿ ಜನಮನ ಸೆಳೆದರು.
ಈ ಸಂದರ್ಭದಲ್ಲಿ ನಡೆದ 2 ಬಹಿರಂಗ ಸಬೆಗಳಲ್ಲಿ ಜನರನ್ನು ಉz್ದÉೀಶಿಸಿ ಮಾತನಾಡಿದ ಮುಖÀಂಡರು ಹಾಗೂ ಕೆಪಿಸಿಸಿ ಪ್ರ. ಕಾರ್ಯದರ್ಶಿ ಶರಣು ಮೋದಿ, ನೀಲಕಂಠ ಮೂಲಗೆ, ಕೃಷ್ಣಾಜಿ ಕುಲಕರ್ಣಿ ಸೇರಿದಂತೆ ಅನೇಕರು ಬಿಜೆಪಿ ಸರ್ಕಾರ ಹಗರಣಗಳಲ್ಲಿ ಮುಳುಗಿದೆ. ಜನರ ನೋವು- ಯಾತನೆಗೆ ಪರಿಹಾರ ನೀಡುತ್ತಿಲ್ಲವೆಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಪಾದಯಾತ್ರೆ ನೇತೃತ್ವ ವಹಿಸಿರುವ ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್ ಮಾತನಾಡುತ್ತ ಕೆಕೆಆರ್‍ಡಿಬಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಬಿಡುಗಡೆ ಮಾಡಿದ ಹIೂಎಷ್ಠು ಎಂಬುದನ್ನು ವಿವರವಾಗಿ ಜನರಿಗೆ ತಿಳಿಸಲಿ ಎಂದು ಸವಾಲು ಹಾಕಿದರು.
ಕೆಕೆಆರ್‍ಡಿಬಿಗೆ ಗೆ ಸಾವಿರ ಕೋಟಿ ರು ಹಣ ನೀಡೋದಾಗಿ ಹೇಳಿ ಮೂಗಿಗೆ ತುಪ್ಪ ಸವರಿದ್ದಾರೆ. ವಾಸ್ತವದಲ್ಲಿ ಹಣವೇ ಬಂದಿಲ್ಲ. ಬಂದ ಹಣವೂ ಏನಕೇನ ಕಾರಣ ವೆಚ್ಚವಾಗುತ್ತಿಲ್ಲ. ಕೆಕೆಆರ್‍ಡಿಬಿಯಲ್ಲೂ ಭ್ರಷ್ಟಾಚಾರ ಮುಗಿಲ ಮುಟ್ಟಿದೆ. ಇದರಿಂದ ಈ ಭಾಗದ ಹಿಂದುಳಿದಿರುವೆ ಹೋಗೋದು ಹೇಗೆ? ಎಂದು ಪ್ರಶ್ನಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ವಾಣಿಶ್ರೀ ಸಗರಕರ್, ಸಂತೋಷ ಮೇಲಿನಮನಿ ಸೇರಿದಂತೆ ಪಕ್ಷದ ಪ್ರಮುಖರು, ಹೀರಾಪೂರ ಸಾವರ್Àಜನಿಕರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಅಲ್ಲಂಪ್ರಭು ಪಾಟೀಲರ ನೇತತ್ವಕ್ಕೆ ಬೆಂಬಲ ಸೂಚಿಸಿದರು.
ಪಾದಯಾತ್ರೆ ಇನ್ನೂ ಮೂರು ದಿನ ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಸಂಚರಿಸಲಿದೆ. ನಗರದ ವಾಡ್‍ಗಳ ನಂತರ ಗ್ರಾಮಾಂತರ ಬಾಗದಲ್ಲಿಯೂ ಕಾಂಗ್ರೆಸ್ ಜನಜಾಗೃತಿ ಪಾದಯಾತ್ರೆ ಅಲ್ಲಂಪ್ರಭು ಪಾಟೀಲರ ನೇತೃತ್ವದಲ್ಲಿ ಮುಂದಿನ 2 ದಿನಗಳ ಕಾಲ ನಡೆಯಲಿದೆ ಎಂದು ಕಲಬುರಗಿ ದಕ್ಷಿಣ ಕಾಂಗ್ರೆಸ್ ಪಕ್ಷದ ಮುಖಂಡರು ಹೇಳಿದ್ದಾರೆ.