ಶಹಾಬಾದ:ಶಿಕ್ಷಣ ಜೀವನವನ್ನು ಬೆಳಗಿಸಿದರೆ ಕ್ರೀಡೆ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೊನಗುಂಟಾ ಗ್ರಾಮದ ಶಿಕ್ಷಣ ಪ್ರೇಮಿ ಭೀಮುಗೌಡ ಖೇಣಿ ಹೇಳಿದರು.
ಅವರು ಮಂಗಳವಾರ ಹೊನಗುಂಟಾ ಗ್ರಾಮದ ಸರಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಆಯೋಜಿಸಲಾದ ಹೋಬಳಿ ಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾ ಕೂಟ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು.
ಕ್ರೀಡೆಯಲ್ಲಿ ಸೋಲು,ಗೆಲುವು ಸಾಮಾನ್ಯವಾಗಿದ್ದು ಕ್ರೀಡೆಯನ್ನು ಸ್ಪರ್ಧಾತ್ಮಕ ಮನೋಭಾವನೆಯಲ್ಲಿ ಸ್ವೀಕರಿಸಬೇಕು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಗೆ ಮಹತ್ವ ನೀಡಬೇಕು. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸದೃಢರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ ಮಾತನಾಡಿ, ಎಲ್ಲ ಮಕ್ಕಳು ಪ್ರತಿಭೆಯನ್ನು ಹೊಂದಿರುತ್ತಾರೆ. ಅವರ ಪ್ರತಿಭೆಯನ್ನು ಶಿಕ್ಷಕರು ಬೆಳಕಿಗೆ ತರಬೇಕು. ಮಕ್ಕಳ ಪ್ರತಿಭೆಯನುಸಾರವಾಗಿ ಆಯಾ ಕ್ಷೇತ್ರಗಳಲ್ಲಿ ತೊಡಗಿದಾಗ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ದೈಹಿಕ ಶಿಕ್ಷಕರು ಯಾವುದೇ ಶಾಲೆಯ ಮಕ್ಕಳಿರಲಿ ಪಕ್ಷ ಬೇಧ ಮಾಡದೇ ಸರಿಯಾದ ನಿರ್ಣಯ ನೀಡುವ ಮೂಲಕ ಮಕ್ಕಳ ಪ್ರತಿಭೆಗೆ ಪೋಷಿಸಿ ಮುಂದಿನ ಹಂತದಲ್ಲಿ ಹೋಗುವಲ್ಲಿ ಪೋಷಿಸಬೇಕೆಂದು ಹೇಳಿದರು.
ದೈಹಿಕ ಶಿಕ್ಷಕ ಹಣಮಂತರಾಯ ಬಿರಾದಾರ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು,ಗೆಲುವು ಸಾಮಾನ್ಯವಾಗಿದ್ದು, ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಸ್ಪರ್ಧೆಯನ್ನು ಸಮಾನ ದೃಷ್ಠಿಯಿಂದ ಸ್ವೀಕರಿಸಿ ಹೋಬಳಿ ಮಟ್ಟದಿಂದ ಪ್ರಾರಂಭವಾದ ನಿಮ್ಮ ಗುರಿ ರಾಷ್ಟ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ತನಕ ತಲುಪಲಿ ಎಂದು ಹಾರೈಸಿದರು.
ಮುಖಂಡರಾದ ಭೀಮುಗೌಡ ಖೇಣಿ, ದೇವೆಂದ್ರ ಕಾರೊಳ್ಳಿ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ಭೀಮಬಾಯಿ ಮಲ್ಲಪ್ಪ, ಗ್ರಾಪಂ ಮಾಜಿ ಅಧ್ಯಕ್ಷರಾದ ಮೆಹಬೂಬ ಪಟೇಲ್, ಆನಂದ ಕೊಡಸಾ, ಮುಖ್ಯಗುರು ದತ್ತಾತ್ರೇಯ ಕುಲಕರ್ಣಿ, ಮುಖಂಡರಾದ ರುದ್ರಗೌಡ, ರೇವಣಸಿದ್ದ ವಾರಕರ್, ನಜೀರ ಪಟೇಲ್,ಸಾಯಬಣ್ಣ ಇಜೇರಿ,ಸಂಗಣ್ಣ ಇಜೇರಿ,ಧರ್ಮು ಕೊಲೆ, ಶಿವಕುಮಾರ ಕಾರೊಳ್ಳಿ, ನಿವೃತ್ತ ದೈಹಿಕ ಶಿಕ್ಷಕ ಹೆಚ್.ವಾಯ್.ರಡ್ಡೇರ್, ವೆಂಕಟೇಶ ಚಿನ್ನೂರ್,ಚನ್ನಬಸಪ್ಪ ಕೊಲ್ಲೂರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಿದಾನಂದ ಕುಡ್ಡನ್,ಪಿಡಿಓ ಮಹಾದೇವ, ಬಿಆರ್‌ಪಿ ಆಶ್ವಿನಿ, ಸಾವಿತ್ರಿ ಪಾಟೀಲ ಸೇರಿದಂತೆ ಇತರರು ವೇದಿಕೆಯ ಮೇಲಿದ್ದರು.