ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ

0
17

ಕಲಬುರಗಿ: ೨೦೨೧-೨೨ ನೇ ಸಾಲಿನ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ದಿ ಯೋಜನೆ ಅಡಿಯಲ್ಲಿ ೩ ಲಕ್ಷದ ಅನುದಾನದಲ್ಲಿ ೩ ಜನ ಅಂಗವಿಕಲ ಫಲಾನುಭವಿಗಳಾದ ಹಣಮಂತ ನಾಯಕ,  ಸುರಜ್ ಪಾಟೀಲ, ದಾಮೂದರ ಕಾಂಬಳೆ ಇವರಿಗೆ ವಿಧಾನ ಪರಿಷತ್ ಸದಸ್ಯರಾದ ಡಾ.ಬಿ ಜಿ ಪಾಟೀಲ ಅವರು ತ್ರಿಚಕ್ರ ವಾಹನ ವಿತರಿಸಿದರು.

ಈ ಸಂದರ್ಭದಲ್ಲಿ ಅಂಗವಿಕಲ ಇಲಾಖೆಯ ಉಪ ನಿರ್ದೇಶಕ ವೆಂಕಟೇಶ್ ದೇಶಪಾಂಡೆ, ಬಿಜೆಪಿ ನಗರ ಪ್ರದಾನ ಕಾರ್ಯದರ್ಶಿ ಉಮೇಶ್ ಪಾಟೀಲ, ಬಿಜೆಪಿ ಮಂಡಲದ ಅಧ್ಯಕ್ಷ ಅಶೋಕ ಮಾನಕರ, ಮುಖಂಡರಾದ ಚನ್ನವೀರ ಲಿಂಗನವಾಡಿ, ಸಂಗು ಮುನ್ನಳ್ಳಿ, ಶಾಂತಕುಮಾರ ದುಧನಿ, ಶಿವಲಿಂಗ ಹಳಿಮನಿ, ವಿಕಾಸ ಕಿರಾಣಿಕ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here