ಕಲಬುರಗಿ: ೨೦೨೧-೨೨ ನೇ ಸಾಲಿನ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ದಿ ಯೋಜನೆ ಅಡಿಯಲ್ಲಿ ೩ ಲಕ್ಷದ ಅನುದಾನದಲ್ಲಿ ೩ ಜನ ಅಂಗವಿಕಲ ಫಲಾನುಭವಿಗಳಾದ ಹಣಮಂತ ನಾಯಕ, ಸುರಜ್ ಪಾಟೀಲ, ದಾಮೂದರ ಕಾಂಬಳೆ ಇವರಿಗೆ ವಿಧಾನ ಪರಿಷತ್ ಸದಸ್ಯರಾದ ಡಾ.ಬಿ ಜಿ ಪಾಟೀಲ ಅವರು ತ್ರಿಚಕ್ರ ವಾಹನ ವಿತರಿಸಿದರು.
ಈ ಸಂದರ್ಭದಲ್ಲಿ ಅಂಗವಿಕಲ ಇಲಾಖೆಯ ಉಪ ನಿರ್ದೇಶಕ ವೆಂಕಟೇಶ್ ದೇಶಪಾಂಡೆ, ಬಿಜೆಪಿ ನಗರ ಪ್ರದಾನ ಕಾರ್ಯದರ್ಶಿ ಉಮೇಶ್ ಪಾಟೀಲ, ಬಿಜೆಪಿ ಮಂಡಲದ ಅಧ್ಯಕ್ಷ ಅಶೋಕ ಮಾನಕರ, ಮುಖಂಡರಾದ ಚನ್ನವೀರ ಲಿಂಗನವಾಡಿ, ಸಂಗು ಮುನ್ನಳ್ಳಿ, ಶಾಂತಕುಮಾರ ದುಧನಿ, ಶಿವಲಿಂಗ ಹಳಿಮನಿ, ವಿಕಾಸ ಕಿರಾಣಿಕ ಇದ್ದರು.