ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ದೊಡ್ಡದು: ಬಾಲರಾಜ್ ಗುತ್ತೇದಾರ

0
161
ಶಿಲಾರಕೋಟ ಗ್ರಾಮದಲ್ಲಿ ಬಾಲರಾಜ್ ಬ್ರಿಗೇಡ್‌ದಿಂದ ಉಚಿತ ಆರೋಗ್ಯ ಶಿಬಿರ

ಸೇಡಂ: ಎಲ್ಲಾ ಸಂಪತ್ತಿಗಿಂತ ಮನುಷ್ಯನಿಗೆ ಆರೋಗ್ಯ ಸಂಪತ್ತು ದೊಡ್ಡದು. ಅದಕ್ಕಾಗಿ ಎಲ್ಲರೂ ಆರೋಗ್ಯ ಕಡೆ ಗಮನಹರಿಸಬೇಕಾದ ಅವಶ್ಯಕತೆ ಇದೆ ಎಂದು ಬಾಲರಾಜ್ ಬ್ರಿಗೇಡ್ ಸಂಸ್ಥಾಪಕ ಬಾಲರಾಜ್ ಗುತ್ತೇದಾರ ಹೇಳಿದರು.

ತಾಲೂಕಿನ ಶಿಲಾರಕೋಟ ಗ್ರಾಮದಲ್ಲಿ ಶಾರದಾ ಚಾರಿಟೇಬಲ್ ಟ್ರಸ್ಟ್ ಸಂಚಾಲಿತ ಬಾಲರಾಜ್ ಬ್ರಿಗೇಡ್ ಫೌಂಡೇಷನ್ ಹಾಗೂ ಕಲಬುರಗಿಯ ಮನೂರ ಆಸ್ಪತ್ರೆ ಇವರ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಬ್ರಿಗೇಡ್‌ನ ಸಹಾಯ ಸಲ್ಲಬೇಕು. ಆ ನಿಟ್ಟಿನಲ್ಲಿ ಸೇಡಂ ಕ್ಷೇತ್ರದ ೧೩೩ ಗ್ರಾಮ ಹಾಗೂ ೫೪ ತಾಂಡಾಗಳಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸುವ ಮೂಲಕ ಬಾಲರಾಜ್ ಬ್ರಿಗೇಡ್ ಸಾಮಾಜಿಕ ಕಳಕಳಿ ತೋರುತ್ತಿದೆ. ಈ ಸೇವೆಗೆ ಮನೂರ ಆಸ್ಪತ್ರೆ ಬ್ರಿಗೇಡ್‌ನೊಂದಿಗೆ ಕೈ ಜೋಡಿಸಿರುವುದು ಅಭಿನಂದನಾರ್ಹ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನೂರಾ ಐವತ್ತಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆ ಮಾಡಿ, ಉಚಿತ ಔಷಧಿ ವಿತರಿಸಲಾಯಿತು. ಬಾಲರಾಜ್ ಬ್ರಿಗೇಡ್ ಸೇಡಂ ತಾಲೂಕಾಧ್ಯಕ್ಷ ಶಿವಕುಮಾರ ನಿಡಗುಂದಾ, ಪ್ರಮುಖರಾದ ಗಿರೀಶ ಕುಲಕರ್ಣಿ, ಸಾಯಪ್ಪ ಡಬ್ಬು, ಅಣ್ಣಾರಾವ ನೂರಂದಗೌಡ, ಪರಮೇಶ್ವರ ನೀಲಹಳ್ಳಿ, ಅಮೀರ್, ಮನೂರ ಆಸ್ಪತ್ರೆಯ ಡಾ. ನಿಶಾತ್ ಬಿರಾಜದಾರ್, ಮಲ್ಲಿಕಾರ್ಜುನ ಪೂಜಾರಿ, ಲಕ್ಷ್ಮೀ ಬನ್ಸೋಡೆ, ರಮಾ ಜವಳಗಾ, ವಿಶಾಲ್, ಅಪ್ಪು ಬಂಢಾರಿ, ಸಾಗರ ಸೇರಿ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here