ಮಕ್ಕಳಿಗೆ ನಯ, ವಿನಯ, ಸಂಸ್ಕೃತಿ ಕಲಿಸುವುದು ಪಾಲಕರ ಕರ್ತವ್ಯ: ಹೋನ್ನಕಿರಣಗಿ ಶ್ರೀಗಳು

0
132

ಕಲಬುರಗಿ: ಮಕ್ಕಳ ಮಾನಸಿಕ ಮತ್ತು ಬೌಧಿಕ ಬೆಳವಣಿಗೆಗೆ ಪಠ್ಯದ ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆ ಒಳ್ಳೆಯ ಆರೋಗ್ಯಕ್ಕೆ ಬುನಾದಿ ಮಕ್ಕಳ ಇಂದಿನ ಒತ್ತಡದ ಪಠ್ಯದ ಅಭ್ಯಾಸದ ಜೊತೆಗೆ ತಾಳ್ಮೆ ಶಕ್ತಿ ಬಹಳ ಮುಖ್ಯವಾದದ್ದು ಹಾಗಾಗಿ ಪಾಲಕರು ಮಕ್ಕಳಿಗೆ ನಯ, ವಿನಯ, ನೀತಿ,ಸಂಸ್ಕೃತಿ ಕಲಿಸುವುದು ಹಿಂದೇಂದಿಗಿಂತಲೂ ಇಂದಿನ ದಿನಾಮಗಳಲ್ಲಿ ಅತಿ ಅವಶ್ಯಕವಾಗಿದೆ ಎಂದು ಹೊನ್ನಕಿರಣಗಿಯ ಪೂಜ್ಯ ಶ್ರೀ ಷ.ಬ್ರ. ಚಂದ್ರಗುಂಡ ಶಿವಾಚಾರ್ಯರುಗಣೇಶ ಉತ್ಸವ೨೦೨೨ಅಂಗವಾಗಿಪ್ರಶಸ್ತಿಪತ್ರವಿತರಣೆಸಮಾರಂಭ ಉದ್ಘಾಟಿಸಿ ಮಾತನಾಡಿದ್ದರು.

ನಗರದ ಬಸವೇಶ್ವರ ಆಸ್ಪತ್ರೆಯ ಎದುರುಗಡೆ ಇರುವ ವಿದ್ಯಾನಗರ ಕಾಲೋನಿಯ ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ವಿದ್ಯಾನಗರ ವೆಲಫೇರ ಸೊಸಾಯಿಟಿ ಆಶ್ರಯದಲ್ಲಿ ೫ದಿನದ ಗಣೇಶ ಉತ್ಸವ ಹಾಗೂ ಮಲ್ಲಿಕಾರ್ಜುನ ತರುಣ ಸಂಘದ ೨೪ನೇ ವಾರ್ಷಿಕೋತ್ಸವ ಹಮ್ಮಿಕೊಂಡ ಕ್ರೀಡಾ ಕೂಟ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಒಟ್ಟು-೨೫ ವಿವಿಧ ಸ್ಪರ್ಧೇಗಳಲ್ಲಿ ಪ್ರಥಮದ್ವೀತಿಯ ಮತ್ತು ತೃತೀಯಹೀಗೆ ೭೫ ಮಕ್ಕಳಿಗೆ ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ವಿತರಿಸಿದ ಶ್ರೀಗಳುತರುಣ ಸಂಘದ ಕಾರ್ಯಚಟುವಟುಕೆ ಕುರಿತು ಮೆಚ್ಚುಗೆ ವತ್ಯಕ್ತಪಡಿಸಿದರು.

Contact Your\'s Advertisement; 9902492681

ಸಮಾರಂಭದ ಅಧ್ಯಕ್ಷತೆ ಮಲ್ಲಿಕಾರ್ಜುನ ತರುಣ ಸಂಘದ ಅಧ್ಯಕ್ಷರಾದ ಶಿವರಾಜ ಅಂಡಗಿ ಅಧ್ಯಕ್ಷತೆ ವಹಿಸಿದರು.
ವಿದ್ಯಾನಗರ ವೆಲ್‌ಫೆರ ಸೊಸಾಯಿಟಿ ಅಧ್ಯಕ್ಷರಾದ ಮಲ್ಲಿನಾಥ ದೇಶಮುಖ,ತರುಣ ಸಂಘದ ಉಪಾಧ್ಯಕ್ಷ ವಿರೇಶನಾಗಶೆಟ್ಟಿ, ಕಾರ್ಯದರ್ಶಿ.ಕರಣ ಆಂದೋಲಾ,ವೇದಿಕೆಮೇಲೆಉಪಸ್ಥಿತರು.

ಕುಮಾರಿ ಶ್ರೀನಿಧಿ ಕೊಲ್ಲಕೂರ ಭರತ ನಾಟನೃತ್ಯ ಮಾಡಿದಳು, ಸಂತೋಷ ನಿಂಬೂರ ಪ್ರಾರ್ಥಿಸಿದರು.ವಿಶ್ವನಾಥ ತೋಟನಳ್ಳಿ ನಾಡಗೀತೆ ಪ್ರಸ್ತುತಪಡಿಸಿದ್ದರು. ನಂತರ ಡಿಜೆ ದೊಂದಿಗೆ ವಿದ್ಯಾನಗರದ ಮುಖ್ಯ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ಮಾಡಿ ನಂತರ ಮುಖ್ಯ ರಸ್ತೆಯಿಂದ ಟಂಟಂ ಮೂಲಕ ಶ್ರೀ ಶರಣಬಸವೇಶ್ವ ಕೆರೆಯಲ್ಲಿ ವಿಸರ್ಜಿಸಲಾಯಿತು.

ಪ್ರಮುಖರಾದ ವಿಶ್ವನಾಥರಟಕಲ್ ಆದಪ್ಪಾ ಸಿಕೇದ ನಾಗರಾಜಹೆಬ್ಬಾಳ ನಾಗಭೂಷಣ ಹಿಂದೋಡಿಎಸ್.ಕೆ.ಮುತ್ತಾ ಶಾಂತಯ್ಯಾ ಬೀದಿಮನಿ ಅಮೀತ ಜೀವಣಗಿ ತರುಣಶೇಖರ ಬಿರಾದಾರ ಶಶೀಧರಪ್ಯಾಟಿ ಸಂಗಮೇಶ ಹೆಬ್ಬಾಳ ಸಂಜು ತಂಬಾಕಿ ಶಿವರಾಜ ಕೊಲ್ಲಕೂರ ಸಂತೋಷ ನಿಂಬೂರ ವಿಶ್ವನಾಥಮಠ ಪತಿ ಶ್ರೀವತ್ಸ ಸಂಗೋಳಗಿ ಲಿಂಗರಾಜ ಕಾಳೆ ಶಿವರಾಜ ಪಾಟೀಲ ಅನೀಲಕುಮಾರ ಕೋಣಿನ ವಿನೋದಕುಮಾರ ಜನೇವರಿ ಅಶೋಕ ಬಿರಾದಾರ ನಾಗೇಂದ್ರಪ್ಪಾ ಪಾಟೀಲ ಬಸವರಾಜ ಸಜ್ಜನ ಬಸವರಾಜ ಸ್ವಾಮಿ ತರುಣ ಸಂಘದ ಹಾಗು ಅಕ್ಕಮಹಾದೇವಿ ಮಹಿಳಾ ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿರುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here