ನಿರಂತರ ರಂಗಕ್ರಿಯೆಗೆ ರಂಗಾಯಣ ಬದ್ಧ: ರಾಜು ತಾಳಿಕೋಟೆ

0
15

ಧಾರವಾಡ: ಉತ್ತರ ಕರ್ನಾಟಕದಾದ್ಯಂತ ನಾಟಕ ಚಟುವಟಿಕೆಗಳನ್ನು ನಿರಂತರ ನಡೆಸಿ ರಂಗಲೋಕವನ್ನು ಜೀವಂತವಾಗಿರಿಸಲು ಬದ್ಧವಾಗಿದ್ದೇನೆಂದು ಖ್ಯಾತ ನಟ, ನಿರ್ದೇಶಕ ರಾಜು ತಾಳಿಕೋಟೆ ಹೇಳಿದರು.

ಜಿಲ್ಲಾ ಕ. ಸಾ. ಪ. ಗುರುವಾರ ಏರ್ಪಡಿಸಿದ್ದ ಮಕ್ಕಳ ಮತ್ತು ಆಧುನಿಕ ಕನ್ನಡ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಸಾಂಸ್ಕೃತಿಕ ಚಳುವಳಿಗೆ ಧಾರವಾಡ ಪರಿಸರ ಫಲವತ್ತಾದ ನೆಲ ಎಂಬುದು ನನ್ನ ಮನವರಿಕೆಗೆ ಬಂದಿದೆ ಎಂದೂ ಅವರು ನುಡಿದರು.

ನಾಟಕ ಅಕಾಡೆಮಿ ಸದಸ್ಯೆ ಗಾಯತ್ರಿ ಹಡಪದ ಮಾತನಾಡಿ
ಮರಾಠಿ ನಾಟಕಗಳ ವಿಪರೀತ ಹಾವಳಿಯ ವಿರುದ್ಧ ಸಿಡಿದೆದ್ದು ಶೂನ್ಯ ಸ್ಥಿತಿಯಲ್ಲಿದ್ದ ಕನ್ನಡ ರಂಗಭೂಮಿಗೆ ಅಪಾರವಾಗಿ ಶ್ರಮಿಸಿದ ಸಕ್ರಿ ಬಾಳಾಚಾರ್ಯ ಕಷ್ಟಪಟ್ಟ ಪರಿ ಅಮೋಘ, ಅನನ್ಯ , ಅಘಾದ ಮತ್ತು ಅವಿಸ್ಮರಣೀಯ ಎಂದು ಅಭಿಪ್ರಾಯಪಟ್ಟರು.

ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆಗಳ ಸಂಗಮ ಎಂದೇ ಪ್ರಸಿದ್ಧಿಯಾದ ಧಾರವಾಡ ಎಲ್ಲ ಲಲಿತಕಲೆಗಳ ಸಮಾಗಮವಾದ ರಂವಭೂಮಿಯ ನಿಜವಾದ ತವರೂರು ಸಹ ಹೌದು ಎಂದು ದತ್ತಿದಾನಿಗಳಲ್ಲೊಬ್ಬರಾದ ಹಿರಿಯ ಸಾಹಿತಿ ಡಾ. ಶಶಿಧರ ನರೇಂದ್ರ ಹೇಳಿದರು.

ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಮೂಡಿಸಿ ಅವರನ್ನು ಸರಿದಾರಿಯಲ್ಲಿ ಮುನ್ನಡೆಸುವ ಹೊಣೆ ಪಾಲಕರದು ಎಂದು ಕಿವಿಮಾತು ಹೇಳಿದ ಸಂಪದ್ಭರಿತ ದೇಶದ ನಾಳಿನ ನಾಗರಿಕರೆಂಬ ಅದಮ್ಯ ವಿಶ್ವಾಸ ಹೊಂದಿದ್ದ ಪಂ. ಜವಾಹರಲಾಲ ನೆಹರೂ ತಮ್ಮ ಜನ್ಮದಿನ ಮಕ್ಕಳ ದಿನವನ್ನಾಗಿಸುವ ನಿರ್ಧಾರವನ್ನು ಅಂದೇ ತೆಗೆದುಕೊಂಡಿದ್ದರೆಂದು ಸನ್ಮಾನ ಸ್ವೀಕರಿಸಿದ ಕಾಂಗ್ರೆಸ್ ಹಿರಿಯ ಧುರೀಣ ರಾಬರ್ಟ್ ದದ್ದಾಪುರಿ ಹೇಳಿದರು.

ಪ್ರಭಾವತಿ ಕಟ್ಟಿಮಠ, ನಿರಂಜನ ವಾಲಿಶೆಟ್ಟರ, ಡಾ. ಶಶಿಧರ ನರೇಂದ್ರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ವಿವಿಧ ರಂಗದ ಸಾಧಕರು, ಪ್ರತಿಭಾವಂತ ಮಕ್ಕಳನ್ನು ಸತ್ಕಾರಿಸಲಾಯಿತು.

‘ ರಂಗಸಾಮೃಟ ಅಭಿನಯ ಶಾಲೆ ‘ ಮಕ್ಕಳು ಸಿಕಂದರ ದಂಡಿನ ನಿರ್ದೇಶನದ ಕಾವ್ಯಾಭಿನಯ ರೂಪಕ ಪ್ರದರ್ಶಿಸಿದರು. ತುಳಸಿ ಮೊಖಾಶಿ ಅಭಿನಯ ನೋಡುಗರ ಮನಸೆಳೆಯಿತು.

” ಮೊಬೈಲ್ ಮಲ್ಲ ” ಮಲ್ಲಪ್ಪ ಹೊಂಗಲ ಅವರಿಂದ ಹಾಸ್ಯದ ಹೊನಲು, ಇಮಾಮಸಾಬ ವಲ್ಲೆಪ್ಪನವರ ಅವರಿಂದ ಭಾವೈಕ್ಯ ಗೀತೆಗಳ ಕಾರ್ಯಕ್ರಮ ಜರುಗಿದವು. ದತ್ತಿದಾನಿಗಳಾದ ವಿಜಯಲಕ್ಷ್ಮಿ ಕಟ್ಟಿಮಠ, ರವಿಕುಮಾರ ಮಾಳಿಗೇರ ಮುಂತಾದವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ. ಸಾ. ಪ. ಅಧ್ಯಕ್ಷ ಡಾ. ಲಿಂಗರಾಜ ಅಂಗಡಿಯವರು ರಾಜ್ಯೋತ್ಸವದ ತಿಂಗಳಿನಲ್ಲಿ ವಿಶೇಷ , ಅರ್ಥಗರ್ಭಿತ, ಸೃಜನಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸಿ ಸರ್ವಹೃದಯಗಳಲ್ಲಿ ಕನ್ನಡಜ್ಯೋತಿ ಬೆಳಗುವ ಉದ್ದೇಶವನ್ನು ಕ. ಸಾ. ಪ. ಹೊಂದಿದೆ. ಧಾರವಾಡಿಗರ ಹೆಚ್ಚಿನ ಪ್ರೋತ್ಸಾಹವನ್ನು ಬಯಸುತ್ತದೆ ಎಂದರು.

ಪ್ರೊ. ಕೆ. ಎಸ್. ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಮೀಳಾ ಜಕ್ಕಣ್ಣವರ ಪ್ರಾರ್ಥನೆ ಹಾಡಿದರು. ಡಾ. ಎಸ್. ಎಸ್. ದೊಡಮನಿ ಉಪಸ್ಥಿತರಿದ್ದರು.ತಾಲೂಕಾ ಕಸಾಪ ಅಧ್ಯಕ್ಷ ಮಹಾಂತೇಶ ನರೇಗಲ್ಲ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here