ದ.ರಾ.ಬೇಂದ್ರೆಯವರು ಕನ್ನಡ ಸಾರಸ್ವತ ಲೋಕದ ಮಿನುಗುತಾರೆ: ಅಷ್ಠಗಿ

0
200

ಶಹಾಬಾದ: ಕನ್ನಡ ಕಾವ್ಯಲೋಕಕ್ಕೆ ವಿಶಿ? ಶೈಲಿ ಮತ್ತು ಲಯಗಳ ಮೂಲಕ ನಾದದ ಗುಂಗು ಹಿಡಿಸಿದ ಶಬ್ದ ಗಾರುಡಿಗ, ವರಕವಿ, ದ.ರಾ.ಬೇಂದ್ರೆಯವರು ಕನ್ನಡ ಸಾರಸ್ವತ ಲೋಕದ ಮಿನುಗುತಾರೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೋ. ಯಶವಂತರಾಯ ಅಷ್ಠಗಿ ಹೇಳಿದರು.

ಅವರು ಗುರುವಾರ ಕಸಾಪ ತಾಲೂಕಾ ಘಟಕದ ವತಿಯಿಂದ ಆಯೋಜಿಸಲಾದ ಮಾಲಗತ್ತಿ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಜ್ಞಾನ ಪೀಠ ಗಾರುಡಿಗರು ಉಪನ್ಯಾಸ ಮಾಲಿಕೆಯ ಅಡಿಯಲ್ಲಿ ವರಕವಿ ದ.ರಾ.ಬೇಂದ್ರೆಯವರ ಬದುಕು-ಬರಹ ಕುರಿತು ಉಪನ್ಯಾಸ ಮಾತನಾಡಿದರು.

Contact Your\'s Advertisement; 9902492681

ಬೇಂದ್ರೆಯವರು ತಮ್ಮ ಕಾವ್ಯ ಶಕ್ತಿಯಿಂದ ಉತ್ಸಾಹದ ಚಿಲುಮೆಯನ್ನುಕ್ಕಿಸಿ ನೊಂದ ಜೀವಕ್ಕೆ ಸಾಂತ್ವನ ನೀಡಿ, ಪ್ರೀತಿ ಪ್ರೇಮಗಳನ್ನು ಮೂಡಿಸಿ, ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರು.ಈ ನೆಲದ ಭಾ? ಸೊಗಡನ್ನು ಕಾವ್ಯಕ್ಕೆ ತಂದ ಅಪ್ಪಟ ದೇಸಿ ಕವಿಯೆಂದರೆ ಬೇಂದ್ರೆಯವರು. ಜೀವನದಲ್ಲಿ ನೊಂದು ಬೆಂದು ಬಳಲಿದವರಾದರೂ ಕಾವ್ಯದ ಮೂಲಕವಾಗಿ ಮಿಂಚಿದ ರತ್ನವೆನಿಸಿದ್ದಾರೆ. ಜೀವನದಲ್ಲಿ ಮಕ್ಕಳ ಸಾವು,ಪತ್ನಿಯ ಸಾವು ಬೇಂದ್ರೆಯವರಿಗೆ ಅತೀವ ದುಃಖವನ್ನುಂಟು ಮಾಡಿದವು. ಆದರೂ ಇದ್ಯಾವುದಕ್ಕೂ ದೃತಿಗೆಡದೆ ಕೊರತೆಯ ಬದುಕಿನಲ್ಲಿಯೇ ಅಪಾರವಾದ ಶ್ರೇ? ಸಾಹಿತ್ಯ ಸಂಪತ್ತನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಬೇಂದ್ರೆಯವರಿಗೆ ಸಲ್ಲುತ್ತದೆ.
ಅವರು ಕ?ಗಳ ಕುಲುಮೆಯಲ್ಲಿ ಅರಳಿ ನಿಂತ ಅಪೂರ್ವ ಪ್ರತಿಭೆ. ಬೇಂದ್ರೆ ಅವರ ಮಾತೃಭಾ? ಮರಾಠಿ ಆದರೂ ಕನ್ನಡ ಸಾಹಿತ್ಯಕ್ಕೆ ನಿರೀಕ್ಷೆಗೂ ಮೀರಿದ ಕೊಡುಗೆ ನೀಡಿ ಗಮನ ಸೆಳೆದಿದ್ದಾರೆ.

ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇಂದ್ರೆಯವರು ನಮ್ಮಿಂದ ಭೌತಿಕವಾಗಿ ದೂರವಾಗಿದ್ದರೂ, ಕಾವ್ಯದ ಮೂಲಕ ಇನ್ನೂ ಜೀವಂತ ವಾಗಿದ್ದಾರೆ. ಅವರ ನೆನಪು ನಮ್ಮಲ್ಲಿ ನಾಡು ನುಡಿಯ ಅಭಿಮಾನವನ್ನು ಉಕ್ಕಿಸಲಿ, ಕನ್ನಡನಾಡು ನುಡಿ ಅಭಿವೃದ್ಧಿ ಹೊಂದಲಿ, ಸತ್ವಪೂರ್ಣ ಸಾರ್ಥಕ ಬದುಕು ನಮ್ಮೆಲ್ಲರದಾಗಲಿ ಎಂದು ಹೇಳಿದರು.

ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ಮಾತನಾಡಿದರು. ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಚಿದಾನಂದ ಕುಡ್ಡನ, ಸ್ವಾಸ್ತಿಕ ಭಂಡಾರಿ, ಮುಖ್ಯಗುರುಮಾತೆ ಶಕುಂತಲಾ ಪಾಟೀಲ, ಬಸವರಾಜ ಬಾಳಕ್,ಚಂದ್ರಶೇಖರ,ಜಿಲ್ಲಾ ಕಸಾಪದ ರಾಜೇಂದ್ರ ಮಾಡಬೂಳ, ಕಾಳಗಿ ಕಸಾಪ ತಾಲೂಕಾಧ್ಯಕ್ಷ ಸಂತೋಷ ಕುಡ್ಡಳ್ಳಿ ವೇದಿಕೆ ಮೇಲೆ ಇದ್ದರು. ಬಸವರಾಜ ಮದ್ರಕಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಕುಮಾರ ನಿರೂಪಿಸಿದರು. ಮಲ್ಲಿಕಾರ್ಜುನ ಇಟಗಿ ವಂದಿಸಿದರು.

ಅವರು ನರಬಲಿ ಶಿರ್ಷಿಕೆ ಕವಿತೆಯನ್ನು ಬರೆದು ಬ್ರಿಟಿ?ರಿಂದ ರಾಷ್ಟ್ರದ್ರೋಹದ ಪಟ್ಟದ ಜೊತೆಗೆ ಶಿಕ್ಷೆ ಅನುಭವಿಸುವಂತಾಯಿತು. ಆದರೂ ಅವರೆಂದಿಗೂ ತಮ್ಮ ತತ್ವ ಆದರ್ಶಗಳ ವಿಚಾರದಲ್ಲಿ ರಾಜಿಯಾಗಲಿಲ್ಲ ಎಂದು ತಿಳಿಸಿದರು- ಪ್ರೋ. ಯಶವಂತರಾಯ ಅಷ್ಠಗಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here