ಕಲಬುರಗಿಯಲ್ಲಿ 12ರವರೆಗೆ ಭಾರಿ ಮಳೆ  ಸಾಧ್ಯತೆ: ಸಾರ್ವಜನಿಕರಲ್ಲಿ ಡಿ.ಸಿ. ಮನವಿ

0
25

ಕಲಬುರಗಿ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇದೇ ಸೆಪ್ಟೆಂಬರ್ 9 ರಿಂದ 12 ರವರೆಗೆ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ನದಿಗಳ ದಂಡೆಗೆ ಹೋಗದಂತೆ ಸಾರ್ವಜನಿಕರಲ್ಲಿ ಡಿ.ಸಿ. ಯಶವಂತ ವಿ. ಗುರುಕರ್ ಅವರು ಮನವಿ ಮಾಡಿದ್ದಾರೆ.

ಜಿಲ್ಲೆಯ ಭೀಮಾ ನದಿ ತೀರ, ಸನ್ನತಿ ಗ್ರಾಮದ ಬ್ರೀಜ್ಡ್-ಕಂ-ಬ್ಯಾರೇಜ್, ಬೆಣ್ಣೆತೋರಾ ಜಲಾಶಯ, ಕೆಳದಂಡೆ ಮುಲ್ಲಾಮಾರಿ ಹಾಗೂ ಕಾಗಿಣಾ ನದಿಯ ದಂಡೆ ಕಡೆಗೆ ಸಾರ್ವಜನಿಕರು ಹೋಗದಂತೆ ಹಾಗೂ ಜಾನುವಾರುಗಳನ್ನು ಸಹ ಬಿಡದಂತೆ ಎಚ್ಚರಿಕೆವಹಿಸಲು ತಿಳಿಸಿದ್ದಾರೆ.

Contact Your\'s Advertisement; 9902492681

ಮಳೆ ಅಥವಾ ನೆರೆ ಹಾವಳಿಯಿಂದ ಏನಾದರೂ ಸಮಸ್ಯೆ ಕಂಡುಬಂದಲ್ಲಿ ತುರ್ತು ಸಹಾಯವಾಣಿ ಸಂಖ್ಯೆ 1077 ಹಾಗೂ ದೂರವಾಣಿ ಸಂಖ್ಯೆ 08472-278677ಗೆ ಸಂಪರ್ಕಿಸಬಹುದಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here