15 ಜನ ಸಾಧಕರಿಗೆ ಬ್ರಹ್ಮಶ್ರೀ ನಾರಾಯಣ ಗುರು ಪ್ರಶಸ್ತಿ ಪ್ರದಾನ

0
265

ಬ್ರಹ್ಮಶ್ರೀ ನಾರಾಯಣ ಗುರು ಪ್ರಶಸ್ತಿ ಪುರಸ್ಕೃತರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ವಾರ್ತಾ ಇಲಾಖೆಯ ಉಮಾಶಂಕರ ಚಿನ್ನಮಳ್ಳಿ (ಸರ್ಕಾರಿ ಸೇವಾ ಕ್ಷೇತ್ರ), ಪತ್ರಕರ್ತ ಭೀಮಾಶಂಕರ ಫಿರೋಜಾಬಾದ್ (ಪತ್ರಿಕಾ ಮಾಧ್ಯಮ), ಉದ್ಯಮಿ ಶಾಂತಕುಮಾರ ಗುತ್ತೇದಾರ್ (ಉದ್ಯಮ), ಪಂಚಪೀಠದ ವಾರ್ತಾಧಿಕಾರಿ ಸಿದ್ರಾಮಪ್ಪ ಆಗಲೂಡಕರ್ (ಧಾರ್ಮಿಕ), ಸೈಯದ್ ಮನ್ಸೂರ್ (ಟಿವಿ ಮಾಧ್ಯಮ), ಆಕಾಶವಾಣಿ ಕಲಾವಿದರಾದ ಅಣ್ಣಾರಾವ ಶೆಳ್ಳಗಿ, ಸಂಗೀತ ಶಿಕ್ಷಕ ಡಾ. ಶಿವಶಂಕರ ಬಿರಾದಾರ್, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ (ಸಂಗೀತ), ಕೊರಳ್ಳಿ ಸಿಆರ್‌ಪಿ ವಿಜಯಲಕ್ಷ್ಮೀ ಗುತ್ತೇದಾರ್ (ಸಾಹಿತ್ಯ), ಜಿಲ್ಲಾ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ನಾಗಪ್ಪ ಹೊನ್ನಳ್ಳಿ (ಸಹಕಾರ), ಮೀನಾಕ್ಷಿ ಗುತ್ತೇದಾರ್ (ಚಿತ್ರಕಲೆ), ಶಿಕ್ಷಕಿ ಲತಾ ಡಿ.ಎನ್, ಶಂಕರ ಮಗಿ (ಶಿಕ್ಷಣ), ಶಂಕರ ದೊಡ್ಡಮನಿ (ವೈದ್ಯಕೀಯ) ಅವರನ್ನು ಬ್ರಹ್ಮಶ್ರೀ ನಾರಾಯಣ ಗುರು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಲಬುರಗಿ: ಪಾಶ್ಚಾತ್ಯ ಸಂಸ್ಕೃತಿ ಭರಾಟೆ ಮಧ್ಯೆ ಶಾಸ್ತ್ರೀಯ ಸಂಗೀತದ ಪ್ರಕಾರಗಳು ಕ್ಷೀಣಿಸುತ್ತಿವೆ ಎಂದು ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್ ವಿಷಾದಿಸಿದರು.

Contact Your\'s Advertisement; 9902492681

ಇಲ್ಲಿನ ಕನ್ನಡ ಭವನದ ಸುವರ್ಣಾ ಸಭಾವನದಲ್ಲಿ ತೆಲ್ಲೂರಿನ ಬ್ರಹ್ಮಶ್ರೀ ನಾರಾಯಣಗುರು ಸಾಂಸ್ಕೃತಿಕ ಕಲಾ ಸಂಘದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ೧೬೮ನೇ ಜಯಂತ್ಯುತ್ಸವ ಅಂಗವಾಗಿ ಶನಿವಾರ ಬ್ರಹ್ಮಶ್ರೀ ನಾರಾಯಣಗುರು ಪ್ರಶಸ್ತಿ ಪ್ರದಾನ ಹಾಗೂ ಸಂಗೀತ ಸಂಜೆ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಈ ಭಾಗದಲ್ಲಿ ಕಲಾವಿದರಿಗೇನು ಕೊರತೆಯಿಲ್ಲ, ಕಲಾವಿದರು ಉಳಿದರೆ ಕಲೆ ಬೆಳೆಯುವುದಲ್ಲದೆ, ಸಂಸ್ಕೃತಿ, ಸಂಪ್ರದಾಯ, ಆಧ್ಯಾತ್ಮ ಕ್ಷೇತ್ರ ಬೆಳವಣಿಗೆ ಹೊಂದಲಿದೆ ಎಂದು ಪ್ರತಿಪಾದಿಸಿದರು.

ದಿನದ ೨೪ ಗಂಟೆಗಳ ಕಾಲ ಮೊಬೈಲ್ ಬಳಕೆಯಿಂದ ದೈನಂದಿನ ಬದುಕಿನ ಮೇಲೆ ಒತ್ತಡ ಹೆಚ್ಚುತ್ತಿದೆ. ಒಂಟಿತನ, ಮಾನಸಿಕ ಖಿನ್ನತೆ ಹೀಗೆ ಮಾನಸಿಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಎದುರಾಗಿದೆ. ಒತ್ತಡ ನಿವಾರಣೆಗೆ ಸಂಗೀತದ ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಉದ್ಘಾಟಿಸಿದ ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ್ ಅವರು, ಕಲೆ-ಕಲಾವಿದರಿಗೆ ರಾಜಾಶ್ರಯ ಸಿಗಬೇಕಿದ್ದು, ಈ ದಿಸೆಯಲ್ಲಿ ಸರ್ಕಾರವಷ್ಟೇ ಅಲ್ಲ ರಾಜಕಾರಣಿಗಳಿಂದಲೂ ಸಹ ಪ್ರೋತ್ಸಾಹಿಸಬೇಕು ಎಂದರು. ಆರ್ಯ ಈಡಿಗ ಸಮಾಜ ಜಿಲ್ಲಾಧ್ಯಕ್ಷ ರಾಜೇಶ ಗುತ್ತೇದಾರ್ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬುರಾವ ಕೋಬಾಳ, ಉದ್ಯಮಿ ಅಂಬಯ್ಯ ಗುತ್ತೇದಾರ್, ಸತ್ಯಂ ಪಿಯು ಕಾಲೇಜಿನ ಪ್ರಾಚಾರ್ಯ ಬಿ.ಎಚ್. ನಿರಗುಡಿ ವೇದಿಕೆ ಮೇಲಿದ್ದರು. ನಾಗಲಿಂಗಯ್ಯ ಸ್ಥಾವರಮಠ ಸ್ವಾಗತಿಸಿ, ನಿರೂಪಿಸಿದರು. ಶಿವಶರಂಕರ ಬಿರಾದಾರ ಪ್ರಾರ್ಥನೆ ಗೀತೆ ಹಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here