ದಾಕ್ಷಾಯಣಿ ಎಸ್. ಅಪ್ಪ ಅವರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

0
95

ಶರಣರ ದರ್ಶನ ಕುರಿತು ೧೧ ದಿನಗಳ ಕಾಲ ಪ್ರವಚನ ನಡೆಸಿಕೊಟ್ಟ ನಿಜಗುಣಾನಂದ ಸ್ವಾಮೀಜಿಯವರು ಬಸವತತ್ವ ಕುರಿತ ಜಾಗೃತಿ ಮೂಡಿಸಿದ್ದಾರೆ. ಬಸವತತ್ವ ಬದುಕಾಗಬೇಕು ಎಂಬುದನ್ನು ಬಹಳಷ್ಟು ಮನಮುಟ್ಟುವಂತೆ ತಿಳಿಸಿಕೊಟ್ಟಿದ್ದಾರೆ. -ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಸುಲಫಲ ಮಠ, ಕಲಬುರಗಿ.

ಕಲಬುರಗಿ: ದಾಸೋಹ ಬಡತನ ನಿವಾರಣೆಯ ಶಕ್ತಿ ಅಲ್ಲ. ಭಕ್ತಿ ಪರಂಪರೆಯ ಚಳವಳಿ. ಹೆಚ್ಚಿರುವುದನ್ನು ಕೊಡುವುದೇ ಹೊರತು ಶೋಷಣೆಯುಕ್ತವಾಗಿ ದಾಸೋಹ ಮಾಡುವುದಲ್ಲ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ನುಡಿದರು.

ನಗರದ ಸುಲಫಲ ಮಠದಲ್ಲಿ ೭೫ನೇ ಅಮೃತ ಮಹೋತ್ಸವ, ಗುರುಗಳ ಪುಣ್ಯಸ್ಮರಣೆ ಹಾಗೂ ಶರಣ ದರ್ಶನ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲಬುರಗಿಯ ಶರಣಬಸವೇಶ್ವರರು ಬಸವಾದಿ ಶರಣರ ದಾಸೋಹ ಪರಿಕಲ್ಪನೆ, ಪರಂಪರೆಯನ್ನು ಮುಂದುವರಿಸಿಕೊಂಡು ಬಂದರು ಎಂದು ತಿಳಿಸಿದರು.

Contact Your\'s Advertisement; 9902492681

ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗಪಟ್ಟದ್ದೇವರು ಮಾತನಾಡಿ, ಮತ್ತೊಬ್ಬರ ಕಣ್ಣೀರು ಒರೆಸುವ ಕಾರ್ಯವೇ ನಿಜವಾದ ಪೂಜೆ. ವಚನಗಳು ಪಚನವಾದಾಗ ಮಾತ್ರ ಬದುಕಿಗೆ ಬೆಲೆ ಬರುತ್ತದೆ. ವಚನ, ಪ್ರಾಣ ಹಾಗೂ ಬಸವನಿಷ್ಠೆ ಬೆಳೆಸಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.
ಇದೇವೇಳೆಯಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸ್‌ನ್ ದಾಕ್ಷಾಯಣಿ ಎಸ್. ಅಪ್ಪ ಅವರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿದ್ದ ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಮಾತನಾಡಿ ಸಾರಂಗಧರ ಶ್ರೀಗಳ ಸಾಮಾಜಿಕ ಕಾರ್ಯವನ್ನು ಶ್ಲಾಘಿಸಿದರು. ಚಿಂಚನಸೂರದ ಸಿದ್ಧಲಿಂಗ ಶಿವಾಚಾರ್ಯರು, ಡಾ. ರಾಜಶೇಖರ ಶಿವಾಚಾರ್ಯರು, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಮುಖಂಡರಾದ ನೀಲಕಂಠರಾವ ಪಾಟೀಲ ಮೂಲಗೆ, ಗೌಸ್ ಬಾಬಾ, ಸಿಪಿಐ ರಾಜಶೇಖರ ಹಳಿಗೋಧಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here