ಆಯ್ಕೆಯಾಗಿ ಮೂರು ವರ್ಷದಲ್ಲಿಎರಡು ವರ್ಷಕೋವಿಡ್‌ಕಾರಣದಿಂದ ಏನೂ ಆಗಿರಲಿಕ್ಕಿಲ್ಲ. ಆದರೆಔಟರ್‌ರಿಂಗ್‌ರೋಡ್, ರೈಲ್ವೆ ಸಂಚಾರ, ನೀಲೂರ ಸೇತುವೆ ನಿಮರ್ನಾಣ ಮುಂತಾದಅಭಿವೃದ್ಧಿ ಕಾರ್ಯಗಳ ಅನುಷ್ಠಾನಗೊಳಿಸಲು ಶ್ರಮಿಸಲಾಗುತ್ತಿದೆ. -ಡಾ. ಉಮೇಶ ಜಾಧವ, ಸಂಸದ, ಕಲಬುರಗಿ.
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರಜನ್ಮದಿನ ಸೆ. ೧೭ ಇರುವುದರಿಂದ ಅಂದಿನಿಂದಅಕ್ಟೋಬರ್ ೨ರವರೆಗೆ ಸೇವಾ ಪಾಕ್ಷಿಕಕಾರ್ಯಕ್ರಮ ಇಡೀದೇಶಾದ್ಯಂತ ಬೂತ್ ಮಟ್ಟದಿಂದ ನಡೆಯುವಂತೆ ನಮ್ಮಲ್ಲಿಯೂಅ ತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುವುದ ಎಂದು ಸಂಸದ ಡಾ. ಉಮೇಶ ಜಾಧವ ತಿಳಿಸಿದರು.
೧೫ ದಿನಗಳ ಕಾಲ ಅನೇಖ ಸೇವಾ ಚಟುವಟಿಕೆಗಳನ್ನು ನಡೆಸಿ ಅವುಗಳ ಮೂಲಕ ಪ್ರಧಾನಿಗಳ ದೀರ್ಘಾಯುಷ್ಯ ಮತ್ತುಆರೋಗ್ಯಕ್ಕಾಗಿ ಪ್ರಾರ್ಥಿಸಲಿದ್ದೇವೆ. ರಾಷ್ಟ್ರೀಯಅಧ್ಯಕ್ಷಜೆ.ಪಿ.ನಡ್ಡಾಅವರ ಸೂಚನೆಯಂತೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದುಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ. ೨೫ರಂದು ಬಿಜೆಪಿ ಸಂಸ್ಥಾಪಕರಲ್ಲಿಒಬ್ಬರಾದ ದೀನದಯಾಳರ ಜನ್ಮದಿನ, ಅ.೨ರಂದು ಮಹಾತ್ಮಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಜನ್ಮದಿನ ಕೂಡಆಚರಿಸಲಾಗುವುದು.ಇದಕ್ಕಾಗಿ ಸ್ವದೇಶಿ, ಖಾದಿ, ಆತ್ಮನಿರ್ಭರತೆ, ಸರಳತೆ, ಶುಚಿತ್ವಅಭಿಯಾನ ಕೈಗೊಳ್ಳಲಾಗುವುದು.ಇದಕ್ಕಾಗಿಜಿಲ್ಲಾ ಮಟ್ಟದಲ್ಲಿ ಮೂರು ಸದಸ್ಯರನ್ನುರಚಿಸಲಾಗಿದೆಎಂದು ವಿವರಿಸಿದರು.
ನರೇಂದ್ರ ಮೋದಿ ಜನ್ಮ ದಿನ ಪ್ರಯುಕ್ತರಕ್ತದಾನ ಶಿಬಿರ, ದಿವ್ಯಾಂಗರಿಗೆಕೃತಕ ಅಂಗಾಂಗಗಳ ಜೋಡಣೆ, ಉಚಿತಆರೋಗ್ಯತಪಾಸಣೆ, ಕೋವಿಡ್ ಲಸಿಕಾಕರಣ, ಸಸಿ ನೆಡುವಕಾರ್ಯಕ್ರಮ, ಸ್ಚಛ್ಛತಾಅಭಿಯಾನ, ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರತಿಜಿಲ್ಲೆಗೆ ೭೫ ಕೆರೆಗಳ ನಿರ್ಮಾಣಕ್ಕೆ ಸರ್ಕಾರ ನಿರ್ದೇಶನ ನೀಡಿರುವಂತೆಯಡ್ರಾಮಿಯಲ್ಲಿಕೆರೆ ನಿರ್ಮಾಣ ಮತ್ತುಉದ್ಯಾನ ನಿರ್ಮಾಣ ಮಾಡಲಾಗುವುದುಎಂದರು. ಶಾಕ ಅಪ್ಪುಗೌಡ, ಬಿಜೆಪಿ ಗ್ರಾಮೀಣಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಚಂಣದ್ರಶೇಖರರೆಡ್ಡಿಇದ್ದರು.