ಕಲಬುರಗಿ: ಇಂದಿನ ಮಕ್ಕಳು ಓದುವುದನ್ನು ಕಲಿಯಬೇಕು. ಓದುವ ಹವ್ಯಾಸ ರೂಡಿಸಿಕೊಂಡರೆ ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಅರಿಯಲು ಸಾಧ್ಯವಾಗುತ್ತದೆ ಎಂದು ಥಟ್ ಅಂತ ಹೇಳಿ ಖ್ಯಾತಿಯ ಡಾ. ನಾ ಸೋಮೇಶ್ವರ ಮಕ್ಕಳಿಗೆ ಕಿವಿಮಾತು ಹೇಳಿದರು.
ಗುರುವಾರ ನಗರದ ಡಾ. ಎಸ್ ಎಂ ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಪ್ರದೇಶಭಿವೃದ್ಧಿ ಮಂಡಳಿ, ಜಿಲ್ಲಾಡಳಿತ ಕಲಬುರಗಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ನಿಮಿತ್ತ ಜಿಲ್ಲಾ ಮಟ್ಟದ “ಕಲ್ಯಾಣ ಕಣ್ಮಣಿ” ರಸ ಪ್ರಶ್ನೆ ಸ್ಪರ್ಧೆಯನ್ನು ಸಸಿಗೆ ನೀರೇರೆದು ಉದ್ಘಾಟಿಸಿದರು.
ಬಳಿಕ ಮಾತನಾಡಿ ಅವರು, ಕ್ವೀಜ್ ಎಂಬ ಶಬ್ದಕ್ಕೆ ಯಾವುದೇ ಅರ್ಥವಿಲ್ಲ ಆದರೆ ಕ್ವೀಜ್ ಎಂದರೆ ಪ್ರಶ್ನೆಯನ್ನು ಕೇಳುವುದಾಗಿದೆ. ಆದರೆ, ಇಡಿ ಜಗತ್ತಿನ ಮೊದಲ ರಸಪ್ರಶ್ನೆ ಸ್ಪರ್ಧೆ ಮಹಾಭಾರತದಲ್ಲಿ ನಡೆದಿದೆ. ಯಕ್ಷನೂ ಪಾಂಡವರಿಗೆ ಪ್ರಶ್ನೆ ಕೇಳುವ ಸಂಗತಿಯೇ ಕ್ವಿಜ್ ಕಾರ್ಯಕ್ರಮವಾಗಿತ್ತು ಎಂದು ಅವರು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸಂಕ್ರೆಪ್ಪ ಬಿರಾದಾರ ಪ್ರಸ್ತವಿಕವಾಗಿ ಮಾತನಾಡಿ, ಈ ಕಾರ್ಯಕ್ರಮ ನಮ್ಮ ಜಿಲ್ಲೆಯಲ್ಲಿನ ಪ್ರತಿಭೆಗಳನ್ನು ಗುರುತಿಸಬೇಕು ಎಂಬ ಉದ್ದೇಶದಿಂದ ಆಯೋಜಿಸಲಾಗಿದೆ. ನಮ್ಮ ಭಾಗ ಇತಿಹಾಸ, ಸಂಸ್ಕೃತಿ, ಕಲೆ ಗಳ ಬಗ್ಗೆ ಮಕ್ಕಳಲ್ಲಿ ಉತ್ಸಹ ಬರಬೇಕುಎಂದರು.
ಕಲ್ಯಾಣ ಕಣ್ಮಣಿ ರಸ ಪ್ರಶ್ನೆ ಕಾರ್ಯಕ್ರಮ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಿನ್ನೆಲೆ ವಿದ್ಯಾರ್ಥಿಗಳಿಗಾಗಿ ಕಲ್ಯಾಣ ಕಣ್ಮಣಿ ಎಂಬ ರಸ ಪ್ರೆಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಲಬುರಗಿಯ ವಿವಿಧ ತಾಲೂಕಿನಿಂದ ಭಾಗವಹಿಸಿದ 80 ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸುವ ಮೂಲಕ 12 ವಿದ್ಯಾರ್ಥಿಗಳನ್ನು ಅಂತಿಮ ಸುತ್ತಿನ ರಸ ಪ್ರೆಶ್ನೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು.
ಬೆಣ್ಣೆತೂರೆ, ಕೃಷ್ಣೆ, ಭೀಮೆ ಹಾಗೂ ಕಾಗಿಣ ಎಂದು 4 ತಂಡಗಳನ್ನು ರಚಿಸಿಲಾಗಿತ್ತು. ಸ್ಥಳ, ವ್ಯಕ್ತಿ, ಜಿಲ್ಲೆ, ಇತಿಹಾಸ ಸೇರಿದಂತೆ ಅನೇಕ ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ಪ್ರೆಶ್ನೆ ಕೇಳಲಾಗಿತ್ತು. 11 ಸುತ್ತಿನ ಈ ರಸ ಪ್ರೆಶ್ನೆ ಕಾರ್ಯಕ್ರಮದಲ್ಲಿ ಕಾಗಿಣ ತಂಡ ವಿಜೇತವಾದರೆ. ಕೃಷ್ಣೆ ರನ್ನರ್ ಅಪ್ ತಂಡವಾಗಿ ಹೊರಹೋಮ್ಮಿತ್ತು.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಇದ್ದರು.