17ಕ್ಕೆ ಪ್ರಥಮ ದರ್ಜೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹುದ್ದೆ ಹೆಚ್ಚಿಸುವಂತೆ ಒತ್ತಾಯಿಸಿ ಜಾಗೃತಿ ಅಭಿಯಾನ

1
127

ಮೈಸೂರು: ಶನಿವಾರ ಬೆಳಗ್ಗೆ ೧೨.೦೦ ಗಂಟೆಗೆ ನಗರದ ಅರಮನೆಯ ಮುಂಭಾಗದಲ್ಲಿರುವ ಕೋಟೆ ಆಂಜನೇಯ ದೇವಸ್ಥಾನದ ಎದುರು ಸರ್ಕಾರವು ಸರ್ಕಾರಿ ಪ್ರಥಮ ದರ್ಜೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹುದ್ದೆಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿ. ದೇವರಾಜು ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷರಾದ ಜಾಕೀರ್ ಹುಸೇನ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಲು ರಸಾಯನಶಾಸ್ತ್ರ, ಭೌತಶಾಸ್ತ್ರ, ಇಂಗ್ಲಿಷ್, ಕನ್ನಡ, ಇತಿಹಾಸ ಮೊದಲಾದ ಒಟ್ಟು ೨೯ ವಿಷಯಗಳಿಗೆ ಸೇರಿದಂತೆ ೧೨೪೨ ಹುದ್ದೆಗಳನ್ನು ಕರೆಯಲಾಗಿದ್ದು, ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿಗಳನ್ನು ಹಾಕಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಪ್ರಸ್ತುತ ತಾತ್ಕಾಲಿಕ ಅಂಕಪಟ್ಟಿಯು ಬಿಡುಗಡೆಯಾಗಿರುತ್ತದೆ. ಈಗಾಗಲೇ ೪೧೦ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರ ಜೊತೆಗೆ ನೂತನ ಶಿಕ್ಷಣ ನೀತಿ ಪ್ರಾರಂಭವಾಗಿದೆ. ಅಲ್ಲದೆ ಪ್ರಸ್ತುತ ಸಂದರ್ಭದಲ್ಲಿ ಪದವಿ ಕಾಲೇಜುಗಳಲ್ಲಿ ಹಲವಾರು ವಿಷಯಗಳಲ್ಲಿ ಸಹಾಯಕ ಪ್ರಾಧ್ಯಾಪಕರನ್ನು ನೇಮಕಮಾಡಲು ಹೆಚ್ಚಿನ ಕಾರ್ಯಭಾರವು ಲಭ್ಯವಿದೆ.

Contact Your\'s Advertisement; 9902492681

ಕಾರ್ಯಭಾರ ತಗ್ಗಿಸಲು ಸದರಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಕನಿಷ್ಠ ೭೦೦ ರಿಂದ ೮೦೦ ಹುದ್ದೆಗಳನ್ನು ಮೀಸಲಾತಿ ಹಾಗೂ ನಿಯಮಾನುಸಾರ ಪ್ರವರ್ಗ (೩ಎ, ೨ಎ, ೨ಬಿ, ಮಹಿಳಾ ಮೀಸಲಾತಿ) ಇನ್ನಿತರ ನಿಯಮಾವಳಿಗಳನ್ನು ಅನುಸರಿಸಿ ಹುದ್ದೆಗಳನ್ನು ಒಂದೊಂದು ವಿಷಯದಲ್ಲು ಕನಿಷ್ಠ ೩೫ ರಿಂದ ೪೦ ಹೆಚ್ಚುವರಿ ಮಾಡಬೇಕಾಗಿದೆ. ಕಾರಣ ಪ್ರಸ್ತುತ ನೇಮಕಾತಿ ಪರೀಕ್ಷೆ ಎಷ್ಟೋ ಅಭ್ಯರ್ಥಿಗಳ ಪಾಲಿಗೆ ಕೊನೆಯದಾಗಿದ್ದು, ಇದಕ್ಕೆ ಅವರ ವಯೋಮಿತಿ ಮೀರುತ್ತಿರುವುದು ಇದನ್ನು ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಪರಿಗಣಿಸಲೇಬೇಕಾದ ಪ್ರಮುಖ ವಿಷಯವಾಗಿದೆ. ಈ ಸಾಲಿನ ವಯೋಮಿತಿ ಮೀರಿದ ಅಭ್ಯರ್ಥಿಗಳು ಮುಂದಿನ ಬಾರಿ ಯಾವುದೇ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸುವುದಾಗಲಿ ನೇಮಕಾತಿಗಳಲ್ಲಿ ಸ್ಪರ್ಧೆಮಾಡುವುದಾಗಲಿ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ನೇಮಕಾತಿಗಳ ಪ್ರಕ್ರಿಯೆ ಸಂಖ್ಯೆ ಕೇವಲ ೧೨೪೨ ಆದರೆ ಕೆಲವು ಅಂಕಿಅಂಶಗಳ ಪ್ರಕಾರ ಸಾವಿರಾರು ಹುದ್ದೆಗಳು ಖಾಲಿ ಇವೆ. ಉದಾ : ೨೦೨೨ರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ವಿವರ : ನಿರ್ವಹಣಾ ಶಾಸ್ತ್ರ ಖಾಲಿ ಹುದ್ದೆ ೫೫೦ ಸಧ್ಯ ನೇಮಕಾತಿ ೦೧, ವಾಣಿಜ್ಯಶಾಸ್ತ್ರ ಖಾಲಿ ಹುದ್ದೆ ೧೫೦೭ ಸದ್ಯ ನೇಮಕಾತಿ ೧೩೪, ಇಂಗ್ಲಿಷ್ ಖಾಲಿ ಹುದ್ದೆ ೭೨೩ ಸದ್ಯ ನೇಮಕಾತಿ ೩೪, ರಸಾಯನ ಶಾಸ್ತ್ರ ಖಾಲಿ ಹುದ್ದೆ ೫೮೫ ಸದ್ಯ ನೇಮಕಾತಿ ೮೨, ಕನ್ನಡ ಖಾಲಿ ಹುದ್ದೆ ೯೮೯ ಸದ್ಯ ನೇಮಕಾತಿ ೧೦೫ ಇನ್ನು ಮುಂತಾದವು. ರಾಜ್ಯದಲ್ಲಿ ಕಳೆದ ೧೨ ವರ್ಷದಲ್ಲಿ ಈವರೆಗೆ ೨ ಬಾರಿ ಮಾತ್ರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ನಡೆದಿದೆ. ಈ ಹುದ್ದೆಗಳಿಗೆ ಅರ್ಹತೆಯಾದ ನೆಟ್, ಸೆಟ್, ಪಿ.ಎಚ್.ಡಿ. ಪಡೆದಿರುವ ಬಹುತೇಕ ಅಭ್ಯರ್ಥಿಗಳ ವಯೋಮಿತಿ ಮೀರುತ್ತಿದೆ.

ಈ ರೀತಿಯ ನೇಮಕಾತಿ ಪ್ರಕ್ರಿಯೆ ವಯೋಮಿತಿ ಮೀರಲು ಪ್ರಮುಖ ಅಂಶವಾಗಿದೆ. ಅರ್ಹತೆ ಇದ್ದರು ಕೆಲವೇ ಅಂಕಗಳಿಂದ ವಂಚಿತರಾಗಿರುವ ಹಾಗೂ ಮೀಸಲಾತಿಯ ಮಿತಿಯಿಂದ (೩ಎ, ೨ಎ, ೨ಬಿ, ಮಹಿಳಾ ಮೀಸಲಾತಿ) ವಂಚಿತರಾಗಿರುವುದನ್ನು ಗಮನದಲ್ಲಿ ಇಟ್ಟುಕೊಂಡು ೨೦೧೫ರಲ್ಲಿ ನಡೆದಿದ್ದ ನೇಮಕಾತಿಯಲ್ಲಿ ೧೨೯೮ ಹುದ್ದೆಗಳಿಗೆ ಮತ್ತೆ ಹೆಚ್ಚುವರಿಯಾಗಿ ೮೬೨ ಹುದ್ದೆಗಳನ್ನು ಸೇರಿಸಲಾಗಿದೆ.

ಅದರಂತೆ ಈ ಬಾರಿಯು ಕನಿಷ್ಠ ೭೦೦ ರಿಂದ ೮೦೦ ಹುದ್ದೆಗಳನ್ನು ಹೆಚ್ಚುವರಿ ಮಾಡಬೇಕು. ಮಾನವೀಯತೆಯ ಹಿತದೃಷ್ಟಿಯಿಂದ ಈ ಎಲ್ಲಾ ಅಂಶಗಳನ್ನು ವಿಶೇಷವಾಗಿ ಪರಿಗಣಿಸಿ ಅವಕಾಶ ನೀಡುವಂತೆ ಕೋರಲಾಗುತ್ತಿದ್ದು, ಈ ಅಭಿಯಾನದಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಿಂದ ಸುಮಾರು ೬೦೦ ರಿಂದ ೭೦೦ ಉದ್ಯೋಗ ಆಕಾಂಕ್ಷಿಗಳು ಭಾಗಿಯಾಗಲಿದ್ದು, ಅಭಿಯಾನಕ್ಕೆ ನಾಡಿನ ಹೆಸರಾಂತ ಮುತ್ಸದ್ಧಿ ರಾಜಕಾರಣಿ ಹಾಗೂ ಇಂದಿನ ಸರ್ಕಾರ ರಚನೆಯ ರೂವಾರಿಯೂ ಕೂಡ ಆಗಿರುವ ಅಡಗೂರು ಹೆಚ್. ವಿಶ್ವನಾಥ್‌ರವರು ಚಾಲನೆ ನೀಡಲಿದ್ದಾರೆ ಎಂದು ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಗೌರವಾಧ್ಯಕ್ಷರಾದ ಎಂ. ಚಂದ್ರಶೇಖರ್ ಮಾಹಿತಿ ನೀಡಿದರು.

ಪ್ರಶಾಂತ್ ಆರ್ಯ,  ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್.ಎಸ್.ಯು.ಐ.), ಪಿ. ರಾಜು, ದಲಿತ ಪ್ರಗತಿಪರ ಒಕ್ಕೂಟಗಳ ಸಂಚಾಲರಕರಾದ ದ್ಯಾವಪ್ಪನಾಯಕ, ಉದ್ಯೋಗ ಆಕಾಂಕ್ಷಿಗಳಾದ ಜಯಶ್ರೀ, ಸುಷ್ಮಿತಾ, ಶಿವಕುಮಾರ್ ಸೇರಿದಂತೆ ಹಲವರು ಇದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here