ಡಾ.ಬಿ.ಆರ್ ಅಂಬೇಡ್ಕರ್ ಸಾಂಸ್ಕೃತಿಕ ಮತ್ತು ಕ್ರೀಡಾಕೂಟ ಸಮಾರೋಪ ಸಮಾರಂಭ

0
23

ಕಲಬುರಗಿ: ನಗರದ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಸಾಂಸ್ಕೃತಿಕ ಮತ್ತು ಕ್ರೀಡಾಕೂಟ ಸಮಾರೋಪ ಸಮಾರಂಭವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ವಿ.ಟಿ ಕಾಂಬಳೆ ಅವರು ನೇರವೆರಿಸಿದ್ದರು.

ನಂತರ ಮಾತನಾಡುತ್ತಾ ವಿದ್ಯಾರ್ಥಿಗಳು ದೇಶದ ಸಂಪತ್ತು ಭಾರತ ದೇಶದ ಸಂವಿಧಾನವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ದೇಶವನ್ನು ಮುನ್ನಡೆಸಿದಾಗ ಅಂಬೇಡ್ಕರವರನ್ನು ಅರ್ಥ ಮಾಡಿಕೊಂಡಂತೆ ಇಂದು ಇಡೀ ವಿಶ್ವವು ಭಾರತವನ್ನು ನೋಡುತ್ತಿದೆ. ಅದಕ್ಕೆ ಪ್ರಮುಖವಾದ ಕಾರಣ ಡಾ.ಬಿ.ಆರ್. ಅಂಬೇಡ್ಕರ್ ರವರು ಕೊಟ್ಟ ಸಂವಿಧಾನ. ಆದ್ದರಿಂದ ನಾವು ಜಾತಿ, ಮತ, ಪಂಥ, ಧರ್ಮ, ಬಿಟ್ಟು ಮೊದಲು ಭಾರತೀಯರಾಗಿರಬೇಕು. ಆಗಮಾತ್ರ ದೇಶ ಕಟ್ಟುವಲ್ಲಿ ನಾವು ಎಲ್ಲರು ಭಾಗಿಯಾಗುವಂತಾಗುತ್ತದೆ. ಇಂದು ಎಲ್ಲಾ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ದಿನದಲಿತರಿಗೆ, ವಾಕ್ ಸ್ವಾತಂತ್ರ್ಯ ನೀಡಿದು ಸಂವಿಧಾನ ಅದರ ಸದ್ಭಳಿಮಾಡಿಕೊಂಡು ದೇಶೆ ನಡೆಸುವ ಅಧಿಕಾರ ಪಡೆಯಬೇಕು. ಅದು ತಾವು ಶಿಕ್ಷಣ ಪಡೆಯುವ ಮೂಲಕ ಸಾಧ್ಯ ಎಂದು ಹೇಳಿದ್ದರು.

Contact Your\'s Advertisement; 9902492681

ಕಾರ್ಯಕ್ರಮ ಡಾ.ರೇಖಾ ಅಣಿಗೇರಿ ವಿದ್ಯುನ್ಮಾನ ವಿಭಾಗ ಇವರ ಪ್ರಾರ್ಥನೆ ಗೀತೆಯಿಂದ ಪ್ರಾರಂಭವಾಯಿತು. ಪ್ರೊ.ಮೇರಿ ಮ್ಯಾಥ್ಯೂಸ್ ಇವರು ಎಲ್ಲರಿಗೂ ಸ್ವಾಗತ ಮಾಡಿದ್ದರು. ಡಾ.ಬಿ.ಆರ್ ಅಂಬೇಡ್ಕರ್ ಸಾಂಸ್ಕೃತಿಕ ಮತ್ತು ಕ್ರೀಡಾಕೂಟದ ಅಧ್ಯಕ್ಷರಾದ ಡಾ.ಹುಮೇರಾ ನುಜಹತ, ಅವರು ಪಂದ್ಯಾವಳ ಬಗ್ಗೆ ವರದಿ ಹೇಳಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಗಿತು. ಪ್ರಾಂಶುಪಾಲ ಡಾ.ಶಂಕ್ರಪ್ಪ ಹತ್ತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ.ಬಿ.ಆರ್ ಅಂಬೇಡ್ಕರ್ ಸಾಂಸ್ಕೃತಿಕ ಮತ್ತು ಕ್ರೀಡಾಕೂಟದ ಅಧ್ಯಕ್ಷರಾದ ಡಾ.ಹುಮೇರಾ ನುಜಹತ, ಹಾಗೂ ಸಂಚಾಲಕರಾದ ಪ್ರೊ.ಮೇರಿ ಮ್ಯಾಥ್ಯೂಸ್ , ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ.ವಿಜಯಕುಮಾರ ಹೆಬ್ಬಾಳಕರ್, ಸಾಂಸ್ಕೃತಿ ಕಾರ್ಯದರ್ಶಿಗಳಾದ ಪ್ರೊ.ರಾಜೇಶ ಅಜಬ್‌ಸಿಂಗ್, ಸಿಬ್ಬಂದಿ ಕಾರ್ಯದರ್ಶಿಗಳಾದ ಡಾ.ಶಶಿಕಿರಣ ಹಂಚನಾಳ, ಸಿಬ್ಬಂದಿ ಜಂಟಿ ಕಾರ್ಯದರ್ಶಿಗಳಾದ ಡಾ.ಭುವನೇಶ್ವರಿ ವೇದಿಕೆ ಮೇಲೆ ಉಪಸ್ಥಿತಿ ಇದ್ದರು. ಕಾರ್ಯಕ್ರಮದಲ್ಲಿ ೨೦೦೦ ವಿದ್ಯಾರ್ಥಿಗಳು ಉಪಸ್ಥಿತರಿದರು ಕಾರ್ಯಕ್ರಮದ ನಿರೂಪಣೆ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕ ಡಾ.ಸುರೇಶ ಮಾಳೆಗಾವ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ವಂದನಾ ಅರ್ಪಣೆಯನ್ನು ಡಾ.ರಮೇಶ ನಡಿಸಿಕೊಟ್ಟರು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here