ಕಲಬುರಗಿಯಲ್ಲಿ ಮುಖ್ಯಮಂತ್ರಿಗಳಿಗೆ ಕಪ್ಪು ಬಟ್ಟಿ ಪ್ರದರ್ಶನ: ಹಲವರ ಬಂಧನ

0
258

ಕಲಬುರಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಕಲಬುರಗಿಯಲ್ಲಿ ಕಪ್ಪು ಬಟ್ಟೆ ಪ್ರದರ್ಶನ ತಳವಾರ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಮತ್ತು ಸಿಎಂಗೆ ಬರೆಯಲಾದ ಮನವಿ ಪತ್ರವನ್ನು ಚಲಿಸುತ್ತಿದ್ದ ಸಿಎಂ ಕಾರಿನೊಳ್ಳಗೆ ಎಸಿದಿರುವ ಘಟನೆ ಶನಿವಾರ ಜರುಗಿತ್ತು.

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ದಿನಾಚರಣೆ ನಿಮಿತ್ತ ಕಲಬುರಗಿ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ನಗರದ ಸರದಾರ್ ಬಲ್ಲಭಾಯಿ ಪಟೇಲ್ ವೃತದಲ್ಲಿರುವ ಹೈದ್ರಾಬಾದ ಕರ್ನಾಟಕ ವಿಮೋಚನೆಯ ರೂವಾರಿ ಸರ್ದಾರ ವಲ್ಲಭಭಾಯ್ ಪಟೇಲ್ ರವರ ಪ್ರತಿಮೆಗೆ ಮಾಲಾರ್ಪಣೆಗೆ ಮಾಡಿ ತೆರಳುವ ವೇಳೆಯಲ್ಲಿ ಮುಖ್ಯಮಂತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಳವಾರ ಸಮಾಜದ ಮುಖಂಡರಿಂದ ಭಾರೀ ವಿರೋಧವನ್ನು ಎದುರಿಸಿದರು.

Contact Your\'s Advertisement; 9902492681

ವಲ್ಲಭಭಾಯ್ ಪಟೇಲ್ ರವರ ಪ್ರತಿಮೆಗೆ ಮಾಲಾರ್ಪಣೆಗೆ ತೆರಳುವ ವೇಳೆ ಮುಖಂಡರು ಸಿಎಂಗೆ ಕಪ್ಪು ಬಟ್ಟೆ ಪ್ರದರ್ಶಿ ಕೋಲಿ, ಕಬ್ಬಲಿಗ, ಗಂಗಾತಮ ಸಮುದಾಯಕ್ಕೆ ತಳವಾರ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿದರು.

ಹೋರಾಟಗಾರರ ರಾಜ್ಯಧ್ಯಕ್ಷರಾದ ಡಾ. ಸರದಾರಾಯಪ್ಪ, ಪ್ರಧಾನ ಕಾರ್ಯದರ್ಶಿಗಳದ ರಾಜೇಂದ್ರ ರಾಜ್ವಾಳ್ ಜೆರಿ, ತಾಲೂಕ್ ಅಧ್ಯಕ್ಷರಾದ ಗಿರಿ ತುಂಬಿ, ಸುನಿತಾ ಎಂ ತಳವಾರ್, ದಿಗಂಬರ್ ಮುದುಕಣ್ಣ, ಪ್ರೇಮ್ ಕಾಲಿ, ಸಂತೋಷ್ ತಳವಾರ್, ಸೈಬಣ್ಣ ತಳವಾರ್, ಜೈ ಶಂಕರ್ ರಾಯಪ್ಪ ಈ ಹೋರಾಟಗಾರರು ಪೊಲೀಸರು ವಶಕ್ಕೆ ಪಡೆದು ವಿಶ್ವವಿದ್ಯಾಲಯದ ತಾಣದಲ್ಲಿ ಕೂರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here