ಕಲಬುರಗಿ: ಸರ್ದಾರ ವಲ್ಲಭಬಾಯಿ ಪಟೇಲ್ ಅವರ ಅಮೋಘ ಕಾರ್ಯ, ಚಂದ್ರಶೇಖರ ಪಾಟೀಲ, ವೆಂಕಟಪ್ಪ ನಾಯಕ, ಸರ್ದಾರ್ ಶರಣಗೌಡ ಇನಾಮದಾರ, ಸ್ವಾಮಿ ರಮಾನಂದತೀರ್ಥ, ಧರ್ಮವೀರ ನೆಲೋಗಿ, ಚನ್ನಬಸಪ್ಪ ಕುಳಗೇರಿ, ದೇವಳಗಾಂವಕರ್ ಅವರಂತಹ ಈ ಭಾಗದ ಅನೇಕ ಮಹನೀಯರ ಶ್ರಮದಿಂದ ನಿಜಾಮನಿಂದ ನಮ್ಮ ಪ್ರದೇಶ ವಿಮೋಚನೆ ಹೊಂದಿ ಸ್ವತಂತ್ರವಾಗಿದೆ. ಕಲ್ಯಾಣ ಕರ್ನಾಟಕÀ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಅಥವಾ ಕೆಲವು ವ್ಯಕ್ತಿಗಳು ಶ್ರಮಿಸಿದರೆ ಸಾಲದು. ಬದಲಿಗೆ ಸಾಮೂಹಿಕÀ ಪ್ರಯತ್ನ ಅಗತ್ಯವಾಗಿದೆ ಪ್ರಾಚಾರ್ಯ ಮಹಮ್ಮದ್ ಅಲಾಉದ್ದೀನ ಸಾಗರ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಸರ್ಕಾರಿ ಪಿಯು ಕಾಲೇಜು, ಪ್ರೌಢಶಾಲೆ, ಮೌಲಾನಾ ಆಜಾದ್ ಪ್ರೌಢಶಾಲೆ, ಉರ್ದು ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜರುಗಿದ ‘ಕಲ್ಯಾಣ ಕರ್ನಾಟಕ ಉತ್ಸವ’ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶಕುಮಾರ ಚಿಂಚೋಳಿ ಮಾತನಾಡಿ, ಕಲ್ಯಾಣ ಕರ್ನಾಟಕÀ ಪ್ರದೇಶವು ಕಲೆ, ಸಾಹಿತ್ಯ, ಸಾಂಸ್ಕøತಿಕವಾಗಿ ಶ್ರೀಮಂತಿಕೆ ಹೊಂದಿದೆ. ಶರಣರು, ಸಂತರು, ಸೋಫಿಗಳು ನಡೆದಾಡಿದ ಪವಿತ್ರ ಭೂಮಿ ಇದಾಗಿದೆ. ವಿಶ್ವದ ಪ್ರಥಮ ಸಂಸತ್ತೆಂದು ಕರೆಯಲ್ಪಡುವ ಅನುಭವ ಮಂಟಪವು, ವಿಶ್ವಕ್ಕೆ ಕಲ್ಯಾಣ ಕರ್ನಾಟಕದ ಅಮೋಘ ಕೊಡುಗೆಯಾಗಿದೆ. ನಮ್ಮ ಭಾಗದ ಭವ್ಯವಾದ ಇತಿಹಾಸ, ಪರಂಪರೆ ತಿಳಿದುಕೊಳ್ಳಬೇಕು. ಇಲ್ಲಿನ ಜನರು ನಮ್ಮಿಂದ ಸಾಧನೆ ಅಸಾಧ್ಯವೆಂಬ ಮನೋಭಾವನೆಯಿಂದ ಹೊರಬಂದು ನಿರಂತರವಾಗಿ ಶ್ರಮಿಸುವ ಮೂಲಕ ಬೇರೆ ಪ್ರದೇಶದ ಜನರಿಗಿಂತ ಕಡಿಯಿಲ್ಲದೆ ಸಾಧನೆ ಮಾಡಿ, ಕಲ್ಯಾಣ ಕರ್ನಾಟಕ ಪ್ರದೇಶದ ಕೀತಿಯನ್ನು ಹೆಚ್ಚಿಸುವ ಕಾರ್ಯ ಮಾಡಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪೂಕರ್, ರವಿಕುಮಾರ ಬಟಗೇರಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಪ್ರಕಾಶ ಪಾಟೀಲ, ರೇಣುಕಾ ಚಿಕ್ಕಮೇಟಿ, ಸಿದ್ದಾರೂಢ ಬಿರಾದಾರ, ದೇವೇಂದ್ರಪ್ಪ ಬಡಿಗೇರ್, ಪ್ರ.ದ.ಸ ನೇಸರ ಎಂ.ಬೀಳಗಿ, ಮೌಲಾನಾ ಶಾಲೆಯ ಪ್ರಾಚಾರ್ಯರಾದ ಲಕ್ಷ್ಮೀ ಬಿ.ನಾಯಕ್, ಸಹ ಶಿಕ್ಷಕರಾದ ಸೋಮಶೇಖರ ಪಾಟೀಲ, ದಯಾನಂದ ಹಿರೇಮಠ, ದೇವೇಂದ್ರಪ್ಪ, ಅನೀಲಕುಮಾರ ಸರಾಫ್, ತನುಜಾರಾಣಿ ಎಸ್., ಸೇರಿದಂತೆ ಕಾಲೇಜು ಮತ್ತು ಪ್ರೌಢಶಾಲೆಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.