ಶಾಸಕ ದತ್ತಾತ್ರೇಯ ಪಾಟೀಲ್ ವಿರುದ್ಧ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

0
50

ಕಲಬುರಗಿ:ಶಾಸಕ ದತ್ತಾತ್ರೇಯ ಪೇಟೀಲ್ ರೇವೂರ್ ವಿರುದ್ಧ ಕೇಳಿ ಬಂದಿರುವ ಅವವ್ಯಹಾರ ಆರೋಪಗಳ ಸಮಗ್ರ ತನಿಖೆಗೆ ಆಗ್ರಹಿಸಿ ಮಾಜಿ ಎಂಎಲ್‍ಸಿ ಅಲ್ಲಂಪ್ರು ಪಾಟೀಲ್ ನೇತೃತ್ವದಲ್ಲಿ ಕಲಬುರಗಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರಾದ ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ಲವಾಣಿಶ್ರೀ ಸಗರಕರ್ ಸೇರಿದಂತೆ ಅನೇಕ ಮುಖಂಡರು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಕಲ್ಯಾಣ ಕರ್ನಾಟಕ ವಿಮೋಚನಾ ದಿನೋತ್ಸವ ಅಮೃತ ಮಹೋತ್ಸವ ಸಂದರ್ಭದಲ್ಲಿ ನಗರಕ್ಕೆ ಬಂದಿದ್ದ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ಕಲ್ಯಾಣ ಪ್ರಗತಿಗೆ ಕಾರ್ಯಪಡೆ ರಚನೆಯಾಗಲಿ, ಗ್ರೀನ್ ಕಾರಿಡಾರ್ ರಚಿಸಿ ರಣ್ಯೀರಣಕ್ಕೆ ಮುಂದಾಗುವಂತೆ ಹಾಗೂ ಅತಿವೃಷ್ಟಿಗೆ ತುತ್ತಾಗಿರುವ ಕಲಬುರಗಿ ರೈತರ ನೆರವಿಗೆ ಧಾವಿಸುವಂತೆ ಕೋರಿದ್ದಾರೆ.

Contact Your\'s Advertisement; 9902492681

ಕಲಬುರಗಿಯಲ್ಲಿ ಮಳೆಗೆ ಸಾವಿರಾರು ಮನೆಗಳು ನೆಲಕ್ಕುರುಳಿವೆ. ಈ ಪೈಕಿ ಕಲಬುರಗಿ ಜಿಲ್ಲೆಯ ದಕ್ಷಿಣ ಮತಕ್ಷೇ6ದ ಹಲ್ಳಿ ಗಾಲ್ಲಿ ಮನೆ ಬಿದ್ದವರಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಸಾವಳಗಿ ಸೇರಿದಂತೆ ಹಲವಾರು ºಳ್ಳಿಗಳಲ್ಲಿ ಪರಿಹಾರ ನೀಡುವಲ್ಲಿಯೂ ರಾಜಕೀಯ ಮಾಡಿರುವ ಪ್ರಕರಣಲು ವರದಿಯಾಗಿವೆ. ಈ ಊರುಗಳಿಗೆ ಹೋದಾಗ ನಮ್ಮ ಗಮನಕ್ಕೂ ಜನ ತಂದಿದ್ದಾರೆ. ಪರಿಹಾರ ವಿತರಣೆಯಲ್ಲಿ ರಾಜಕೀಯ ಮಾಡುವುದು ಯಾರೂ ಮಾಡಬಾರದು. ಆದ,್ಟ ಬೇಗ ತಡೆ ಹಿಡಿದಂತಹ ಪರಿಹಾರ ವಿತರಮೆಯಾಗಬೇಕು. ಅದರಿಂದ ಜನರು ನೆಮ್ಮದಿ ಬಾಳು ಬಾಳಬೇಕು. ಇದಕ್ಕೆ ತಕ್ಕ ಸೂಚನೆ ತಾವು ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಮಗೆ ಜನ ನೀಡಿರುವ ರಾಜಕೀಯ ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ಕುಟುಂಬದವರಿಗೆ ಬಹುಕೋಟಿ ಬೆಲೆಬಾಳುವ ಎಂಎಸ್‍ಕೆ ಮಿಲ್ ವಾಣಿಜ್ಯ ನಿವೇಶನಗಳು ಮಂಜೂರಾಗುವಂತೆ ನೋಡಿಕೊಂಡಿರುವ ಕಲಬುರಗಿ ದಕ್ಷಿಣ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್ ಘೋರ ಅಪರಾಧ ಮಾಡಿದ್ದಾರೆ.

ತಮಗೆ ಜನ ನೀಡಿರುವ ಅದಿಕಾರವನ್ನು ಸ್ವಾರ್ಥಕ್ಕಾಗಿ, ಸ್ವಯಂ ಅಭಿವೃದ್ಧಿಗಾಗಿ ಬಳಸಿಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ ಅಕ್ಷಮ್ಯ ಅಪರಾಧವಾಗಿದ್ದು ಈ ಕೂಡಲೆ ನಗರಾಭಿವೃದ್ಧಿ ಪ್ರಾಧಿಕಾರಾದ ಹಿಂದಿನ ಆಯುಕ್ತ ಎಂ ರಾಚಪ್ಪ ಹಾಗೂ ವಿಷಯ ನಿರ್ವಾಹಕ ಸುಬ್ಬಾರವ್ ಜೊತೆಗೇ ಶಾಸಕರಾದ ದತ್ತಾತ್ರೇಯ ಪಾಟೀಲರ ವಿರುದ್ಧವೂ ಸೂಕ್ತ ತನಿಖೆ ಮಾಡುವ ಮೂಕ ಪ್ರಾಧಿಕಾರಕ್ಕೆ ಆಗಿರುವ ಆರ್ಥಿಕ ನಷ್ಟದ ಮೊತ್ತವಾದಂತಹ 4. 30 ಕೋಟಿ ವಸೂಲಿ ಮಾಡಬೇಕು. ವಾಣಿಜ್ಯ ನಿವೇಶನ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ನಿವೇಶನ ಸಂಖ್ಯೆ 88 ಹಾಗೂ 88 / 1 ಇವುಗಳನ್ನ ಕಡಿಮೆ ಲಾಭದಲ್ಲಿಯೇ ಮಂಜೂರು ಮಾಡಲಾಗಿದೆ. ಪ್ರಾಧಿಕಾರಕ್ಕೆ ಇದರಿಂದಾಗಿ 4. 30 ಕೋಟಿ ರು ನಷ್ಟವಾಗಿದೆ. ಪ್ರಾಧಿಕಾರದ ಸಭೆಯಲ್ಲಿ ಇನ್ನು ಪ್ರಶ್ನಿಸಿ ಮರುಹರಾಜು ಮಾಡಬೇಕಿತ್ತು. ಅಥವಾ ನಿಯಮಗಳಂತೆ ಬಡ್ಡಿ ಸಮೇತ ನಿಗದಿತ ದಿನದಲ್ಲಿ ಹಣ ವಸೂಲಿಗೂ ಅವಕಾಶಗಲಿದ್ದರೂ ಯಾವುದನ್ನೂ ಮಾಡದೆ ಶಾಸಕರ ಪ್ರಭಾವಕ್ಕೆ ಮಣಿದು ಅಂದಿನ ಕುಡಾ ಆಯುಕ್ತ ರಾಚಪ್ಪ, ವಿಷಯ ನಿರ್ವಾಹಕರು ಸೇರಿ ಇಂತಹ ಅವ್ಯವಹಾರಕ್ಕೆ ಬೆಂಬಲ ನೀಡಿದ್ದಾರೆ. ಇದು ತಪ್ಪು. ಕೂಡಲೆ ತನಿಖೆ ಮಾಡುವ ಮೂಲಕ ಪ್ರಾಧಿಕಾರಕ್ಕಾಗಿರುವ ನಷ್ಟ ಭರಿಸಿಕೊಳ್ಳಬೇಕು ಎಂದಿದ್ದಾರೆ.

ಅಫಜಲ್ಪುರ ತಾಲೂಕಿನ ಅಂಕಲಗಾ ಊರಲ್ಲಿ ದಿ. ಮಲ್ಲಿಕಾರ್ಜುನ ಪಾಟೀಲ್ ಹೆಸರಲ್ಲಿದ್ದಂತಹ 112 ಎಕರೆ ಜಮೀನನ್ನು ತಮ್ಮ ಹೆಸರಿಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಅವರು ತಮ್ಮನ್ನು ದಿ. ಮಲ್ಲಿಕಾರ್ಜುನ ಇವರ ದತ್ತು ಪುತ್ರ ಎಂದು ಹೇಳಿಕೊಂಡಿದ್ದಾರೆ. ವಿಚಿತ್ರವೆಂದರೆ ಇವರೇ ತಾವೇ ದತ್ತು ಪತ್ರ ಬರೆದಿದ್ದಾರೆ.

ಒಪ್ಪಿಗೆ ಪತ್ರ ಕೂಡಾ ತಾವೇ ಬರೆಯುತ್ತಾರೆ, ತಾವೇ ವಾರ್ಸಾಕ್ಕೂ ಕೋರುತ್ತಾರೆ. ಅಫಜಲ್ಪೂರ ತಹಸೀಲ್ದಾರ್ ಕಚೇರಿಯ ಸಿಬಹ್ಬಂದಿ ಇಂತಹ ಸೂಕ್ಷ್ಮಗಳನ್ನು ಗಮನಿಸದೆ, ವಿಲ್ ಡೀಡ್ ಇಲ್ಲದ. ಸೂಕ್ತ ದತ್ತುಪತ್ರ ದಾಖಲೆ ಲ್ಲದ ಈ ಪ್ರಕರಣದಲ್ಲಿ ಶಾಸಕರ ಕೋರಿಕೆಯಂತೆ ಜಮೀನು ವರ್ಗಾವಣೆ ಮಾಡುತ್ತಾರೆ. ಇಲ್ಲಿ ಭೂಸುಧಾರಣೆ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

ದಿ. ಮಲ್ಲಿಕಾರ್ಜುನ ಪಾಟೀಲರಿಗೆ ಇಷ್ಟೊಂದು ಜಮೀನು ಬಂತು ಎಲ್ಲಿಂದ? ಶಾಸಕರು ತಮ್ಮ ಹೆಸರಿಗೆ ಸೂಕ್ತ ದಾಖಲೆ ಇಲ್ಲದೆ ವರ್ಗ ಹೇಗೆ ಮಾಡಿಕೊಂಡರು? ಭೂ ಕಂದಾಯ ಕಾಯಿದೆ ಉಲ್ಲಂನೆಯಾಗಿದ್ದು ಸ್ಪಷ್ಟ. ಮಾನ್ಯರಾದ ತಾವುಗಳು ಮೇಲಿನ ಎರಡೂ ಮೋಸ, ವಂಚನೆ ಹಾಗೂ ಆರ್ಥಿಕವಾಗಿ ಪ್ರಾಧಿಕಾರಕ್ಕೆ ನಷ್ಟ ಉಂಟು ಮಾಡಿರುವ ಪ್ರಕರಣಗಳಲ್ಲಿ ಸಂಬಂಧಪಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ಇವರ ವಿರುದ್ಧ ಕ್ರೀಮಿನಲ್ ಖಟ್ಲೆ ಹೂಡಿ ಆಸ್ತಿಪಾಸ್ತಿ ಮುಟ್ಟುಗೋಲಿಗೂ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here