ಕನ್ನಡ ಸಾಹಿತ್ಯ ಸಂಘ 36ನೇ ನಾಡ ಹಬ್ಬ- ಅದ್ಧೂರಿ ಆಚರಣೆ: ರಾಜಾ ಮುಕುಂದ ನಾಯಕ

0
14

ಸುರಪುರ:ಕಳೆದ 35 ವರ್ಷಗಳಿಂದ ಕನ್ನಡ ಸಾಹಿತ್ಯ ಸಂಘದಿಂದ ನಡೆಸಿಕೊಂಡು ಬರುತ್ತಿರುವ ನಾಡಹಬ್ಬವನ್ನು ಈ ವರ್ಷದ 36ನೇ ನಾಡಹಬ್ಬವನ್ನು ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ನಾಡಹಬ್ಬ ಉತ್ಸವ ಸಮಿತಿ ಹಾಗೂ ಸುರಪುರ ರೀಕ್ರಿಯೇಷನ್ ಕ್ಲಬ್ ಅಧ್ಯಕ್ಷರಾಗಿರುವ ರಾಜಾ ಮುಕುಂದ ನಾಯಕ ತಿಳಿಸಿದರು.

ನಗರದ ರಿಕ್ರಿಯೇಷನ್ ಕ್ಲಬ್ ಆವರಣದಲ್ಲಿ ನಾಡಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ,ಹಿಂದೆ ಸಾಹಿತ್ಯ ಸಂಘದ ಅಧ್ಯಕ್ಷರಾಗಿದ್ದ ರಾಜಾ ಮದನಗೋಪಾಲ ನಾಯಕ ಅವರು ನಡೆಸಿಕೊಂಡು ಬಂದಿರುವ ನಾಡಹಬ್ಬ ಕಾರ್ಯಕ್ರಮವನ್ನು ಅವರ ಸ್ಮರಣೆಯಲ್ಲಿಯೇ ಈ ಬಾರಿಯೂ ನಡೆಸಲಾಗುವುದು,ಇದೇ 26ನೇ ತಾರೀಖಿನಿಂದ ಅಕ್ಟೋಬರ್ 4ರ ವರೆಗೆ ನಿತ್ಯವೂ ಸಂಜೆ ನಗರದ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

26ರಂದು ಬೆಳಿಗ್ಗೆ ನಾಡದೇವಿಯ ಭಾಚಿತ್ರದ ಭವ್ಯ ಮೆರವಣಿಗೆಯನ್ನು ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ದಿಂದ ಆರಂಭಿಸಿ ಗರುಡಾದ್ರಿ ಕಲಾ ಮಂದಿರದವರೆಗೆ ನಡೆಸಲಾಗುವುದು.ಮೆರವಣಿಗೆಗೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ,ಮಾಜಿ ಜಿ.ಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ನಾಡಹಬ್ಬ ಉತ್ಸವ ಸಮಿತಿ ಗೌರವಾಧ್ಯಕ್ಷ ರಾಜಾ ಪಾಮನಾಯಕ,ಕಲಬುರ್ಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್,ಉದ್ದಿಮೆದಾರ ಕಿಶೋರ್ ಚಂದ್ ಜೈನ್ ಭಾಗವಹಿಸಿ ಚಾಲನೆ ನೀಡಲಿದ್ದಾರೆ. ನಂತರ ಗರುಡಾದ್ರಿ ಕಲಾಮಂದಿರದಲ್ಲಿ ನಾಡದೇವಿ ಪ್ರತಿಷ್ಠಾಪನೆ,ಪೂಜೆ ನೆರವೇರಲಿದೆ ಎಂದರು.

ಸಂಜೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮವನ್ನು ಉತ್ಸವ ಸಮಿತಿ ಗೌರವಾಧ್ಯಕ್ಷ ರಾಜಾ ಪಾಮನಾಯಕ ಉದ್ಘಾಟಿಸುವರು,ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸುವರು,ಮುಖ್ಯ ಅತಿಥಿಗಳಾಗಿ ಉತ್ಸವ ಸಮಿತಿ ಅಧ್ಯಕ್ಷ ರಾಜಾ ಮುಕುಂದ ನಾಯಕ,ಉಪಾಧ್ಯಕ್ಷ ರಾಜಾ ಹರ್ಷವರ್ಧನ ನಾಯಕ,ಕಿಶೋರ್ ಚಂದ್ ಜೈನ್,ನಯೊಪ್ರಾ ಅಧ್ಯಕ್ಷ ಪ್ರಕಾಶ ಸಜ್ಜನ್,ಜಿ.ಪಂ ಮಾಜಿ ಸದಸ್ಯ ಹೆಚ್.ಸಿ ಪಾಟೀಲ್ ಭಾಗವಹಿಸಲಿದ್ದಾರೆ.

ಸಪ್ಟೆಂಬರ್ 26ನೇ ತಾರೀಖು ಸಂಜೆಯಿಂದ ಅಕ್ಟೋಬರ್ 3ನೇ ತಾರೀಖಿನವರೆಗೆ ಸಂಜೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮೊದಲ ದಿನ ಜಾನಪದ ಕಲಾ ತಂಡಗಳ ಪ್ರದರ್ಶನ,ನಂತರದ ದಿನಗಳಲ್ಲಿ ಶ್ರೀಮತಿ ರಾಣಿ ಜಾನಕಿದೇವಿ ಶಾಲೆ,ಶೆಟ್ಟಿ ಕಾಂಪಿಟೇಶನ್ ಶಾಲೆ,ಆನಂದ ವಿದ್ಯಾಲಯ,ಶರಣಬಸವ ಪಬ್ಲಿಕ್ ಶಾಲೆ,ಗಾಯತ್ರಿ ಶಿಕ್ಷಣ ಸಂಸ್ಥೆ,ಪ್ರೀಯದರ್ಶಿನಿ ಶಾಲೆ,ಶ್ರೀಮತಿ ಲಕ್ಷ್ಮೀದೇವಿ ಎಂ.ಜೇವರ್ಗಿ ಸರಕಾರಿ ಶಾಲೆ ಮ್ಯಾಗೇರಿ,ಸರ್ವೋದಯ ಶಿಕ್ಷಣ ಸಂಸ್ಥೆ,ಸರಕಾರಿ ಬಾಲಕಿಯರ ಶಾಲೆ,ಸರಕರಿ ಕನ್ಯಾ ಮಾದರಿಯ ಶಾಲೆ,ಸರಕಾರಿ ಶಾಲೆ ಖುರೇಷಿ ಮೊಹಲ್ಲಾ,ಅಕ್ಷರಧಾಮ ಶಿಕ್ಷಣ ಸಂಸ್ಥೆ,ಖಾಸ್ಗತೇಶ್ವರ ಸಾಂಸ್ಕøತಿಕ ನೃತ್ಯ ಸಂಸ್ಥೆ,ವಿನಾಯಕ ಆಂಗ್ಲ ಮಾದ್ಯಮ ಶಾಲೆ ವತಿಯಿಂದ ಸಾಂಸ್ಕøತಿಕ ಹಾಗೂ ಸ್ಪಂದನಾ ಮೆಲೋಡಿಸ್ ರವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿವೆ ಎಂದು ತಿಳಿಸಿದರು.

ಶಾಲಾ ಮಕ್ಕಳಿಗಾಗಿ ಲೇಖನ,ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ,ಗಾಯನ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಲಿವೆ ಎಂದರು.ಅಲ್ಲದೆ ಅಕ್ಟೋಬರ್ 4 ರಂದು ಸಂಜೆ ಸಮಾರೋಪ ಸಮಾರಂಭ ಜರುಗಲಿದ್ದು ರಾಜಾ ಪಾಮನಾಯಕರು ಅಧ್ಯಕ್ಷತೆ ವಹಿಸುವರು,ಮುಖ್ಯ ಅತಿಥಿಗಳಾಗಿ ಶಾಸಕ ರಾಜುಗೌಡ,ಪತ್ರಕರ್ತ ಶ್ರೀನಿವಾಸ ಸಿರನೂರಕರ್,ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ,ಬಿಇಓ ಮಹೇಶ ವಿ.ಪೂಜಾರ,ಕಸಾಸಂ ಸುರಪುರ ಅಧ್ಯಕ್ಷ ಬಸವರಾಜ ಜಮದ್ರಖಾನಿ,ನ್ಯಾಯವಾದಿ ಜೆ.ಅಗಷ್ಟಿನ್,ಡಾ:ಸುರೇಶ ಸಜ್ಜನ್,ಜಾನಪದ ಅಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜಾ ಪಾಮನಾಯಕ,ಬಸವರಾಜಪ್ಪ ನಿಷ್ಠಿ ದೇಶಮುಖ,ಜಯಲಲಿತಾ ಪಾಟೀಲ್,ಛಾಯಾ ಕುಂಟೋಜಿ,ಎಸ್.ಎನ್ ಪಾಟೀಲ್,ಗೋವರ್ಧನ ಝಂವ್ಹಾರ, ಮಹೇಶ ಜಾಗೀರದಾರ,ದೇವು ಹೆಬ್ಬಾಳ,ಸೋಮರಾಯ ಶಖಾಪುರ,ಹಣಮಂತ್ರಾಯ ದೊರಿ ಸೇರಿದಂತೆ ಅನೇಕರಿದ್ದರು,ನಿವೃತ್ತ ಶಿಕ್ಷಕ ಶಿವಕುಮಾರ ಮಸ್ಕಿ ನಿರೂಪಿಸಿದರು,ರಾಜಶೇಖರ ದೇಸಾಯಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here