ಸುರಪುರ: ಖಾಸಗಿಯವರು ಮಾಡುವ ಕಾರ್ಯಕ್ರಮಗಳು ತಮ್ಮ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಕಾರ್ಯಕ್ರಮ ಮಾಡುತ್ತಿರುವುದಾಗಿ ಸುಳ್ಳು ಆಮಂತ್ರಣ ಪತ್ರಿಕೆಗಳ ಪ್ರಕಟಿಸಿ ಸರಕಾರದ ಹಣ ಲೂಟಿ ಮಾಡುತ್ತಿರುವ ಇಲಾಖೆ ಉಪ ನಿರ್ದೇಶಕಿಯನ್ನು ಅಮಾನತ್ತುಗೊಳಿಸುವಂತೆ ಮುಖಂಡ ವೇಣುಗೋಪಾಲ ನಾಯಕ ಜೇವರ್ಗಿ ಒತ್ತಾಯಿಸಿದ್ದಾರೆ.
ನಗರದ ಶ್ರೀಪ್ರಭು ವiಹಾವಿದ್ಯಾಲಯದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಕನ್ನಡ ಸಾಹಿತ್ಯ ಸಂಘದ ಸುರಪುರ ವತಿಯಿಂದ ಈಗಾಗಲೇ ನಾಡಹಬ್ಬ ಕಾರ್ಯಕ್ರಮ ಆಯೋಜನೆ ಮಾಡಿದ್ದು ಆಮಂತ್ರಣ ಪತ್ರಿಕೆಯು ಪ್ರಕಟಗೊಂಡು ಸಂಬಂಧಿಸಿದ ಅತಿಥಿಗಳಿಗಾ ಆಹ್ವಾನಿಸಿದ್ದು,ಅದೇ ಕಾರ್ಯಕ್ರಮದ ಹೆಸರಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯೂ ಆಮಂತ್ರಣ ಪತ್ರಿಕೆ ಮುದ್ರಿಸಿ ಜಿಲ್ಲಾ ಉಸ್ತುವಾರಿ ಸಚಿವರು,ಸ್ಥಳಿಯ ಶಾಸಕರು,ನಗರಸಭೆ ಅಧ್ಯಕ್ಷರು ಸೇರಿದಂತೆ ಅನೇಕ ಜನಪ್ರತಿನಿಧಿಗಳ ಹೆಸರನ್ನು ಹಾಕಿ ಆಮಂತ್ರಣ ಪತ್ರಿಕೆ ಪ್ರಕಟಿಸಲಾಗಿದೆ.ಆದರೆ ಈ ಕಾರ್ಯಕ್ರಮದ ಕುರಿತು ಇದುವರೆಗೂ ಒಂದೂ ಪೂರ್ವಭಾವಿ ಸಭೆ ನಡೆಸಿಲ್ಲ,ತಹಸೀಲ್ದಾರರಿಗೂ ಈ ಕಾರ್ಯಕ್ರಮದ ಮಾಹಿತಿ ಇಲ್ಲ,ನಗರಸಭೆ ಅಧ್ಯಕ್ಷರಿಗೂ ಮಾಹಿತಿ ಇಲ್ಲ,ಆದರೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಲಾಖೆಗೆ ಸಂಬಂಧಿಸಿರದ ಖಾಸಗಿ ವ್ಯಕ್ತಿಗಳಿಂದ ಜನಪ್ರತಿನಿಧಿಗಳಿಗೆ ಆಮಂತ್ರಣ ಪತ್ರಿಕೆ ಕಳುಹಿಸುವ ಮೂಲಕ ಜನಪ್ರತಿನಿಧಿಗಳಿಗೆ ಅವಮಾನಿಸಿದ್ದಾರೆ.
ಕಾರ್ಯಕ್ರಮದಲ್ಲಿ ಯಾವುದೇ ಶಿಷ್ಟಾಚಾರ ಪಾಲನೆ ಇಲ್ಲದೆ ಕೇವಲ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಮಾತ್ರ ಕಾರ್ಯಕ್ರಮ ಸೀಮಿತಗೊಳಿಸಿ ಮಧ್ಯವರ್ತಿಗಳ ಮೂಲಕ ಸರಕಾರದ ಹಣ ಲೂಟಿ ಮಾಡುತ್ತಿದ್ದಾರೆ.ಆದ್ದರಿಂದ ಸರಕಾರ ಕೂಡಲೇ ಸುರಪುರಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹೆಸರಲ್ಲಿ ಕಾರ್ಯಕ್ರಮ ಆಯೋಜನೆಗೆ ಯಾವುದೇ ಅನುದಾನ ಬಿಡುಗಡೆ ಮಾಡಬಾರದು ಮತ್ತು ಪೂರ್ವಭಾವಿ ಸಭೆ ಇಲ್ಲದೆ,ತಾಲೂಕು ಆಡಳಿತದ ಗಮನಕ್ಕಿಲ್ಲದೆ ನಕಲಿ ಆಮಂತ್ರಣ ಪತ್ರಿಕೆ ಮುದ್ರಿಸಿ ಜನಪ್ರತಿನಿಧಿಗಳ ಹೆಸರು ದುರ್ಬಳಕೆ ಮಾಡಿಕೊಂಡು ಹಣ ಲೂಟಿ ಮಾಡುತ್ತಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಪ ನಿರ್ದೇಶಕಿಯನ್ನು ಅಮಾನತ್ತುಗೊಳಿಸಬೇಕು ಇಲ್ಲವಾದಲ್ಲಿ ಇದರ ವಿರುದ್ಧ ಸಂದರ್ಭಬಂದಲ್ಲಿ ನ್ಯಾಯಾಲಯದ ಮೊರೆ ಹೋಗಲು ಚಿಂತನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಹ್ಮದ ಗೌಸ್ ಕಿಣ್ಣಿ,ಮುಖಂಡರಾದ ಮಲ್ಲೇಶಿ ಪಾಟೀಲ್ ನಾಗರಾಳ ಕ.ರಾ.ಪ್ರ.ಕು.ಸಂ.ನಿರ್ದೇಶಕರು,ಮಲ್ಲಿಕಾರ್ಜುನ ಹೂಗಾರ,ರಂಗಪ್ಪ ನಾಯಕ,ಮಲ್ಲೇಶಿ ಪೂಜಾರಿ ಇದ್ದರು.