ಸುರಪುರ: ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಂಘದಿಂದ ಸರ್ವಪಿತೃ ಅಮಾವಾಸ್ಯೆ ಅಂಗವಾಗಿ ತಾಲೂಕಿನ ಶ್ರೀಕ್ಷೆತ್ರ ಶೆಳ್ಳಗಿಯ ಪ್ರಾಣದೇವರ ಸನ್ನಿಧಾನದ ಕೃಷ್ಣಾ ನದಿ ತೀರದಲ್ಲಿ ವಿಪ್ರ ಸಮಾಜದ ಬಂಧುಗಳು ಭಾಗವಹಿಸಿ ತಮ್ಮ ಎಲ್ಲಾ ಪಿತೃಗಳು ಸಂತೃಪ್ತಿಗಾಗಿ ಪಿತೃ ಪಕ್ಷ ಕಾರ್ಯಕ್ರಮವನ್ನು ನಡೆಸಿದರು.
ಕಾರ್ಯಕ್ರಮದ ಆರಂಭದಲ್ಲಿ ಎಲ್ಲರು ಕೃಷ್ಣಾ ನದಿಯಲ್ಲಿ ಪವಿತ್ರ ಸ್ನಾನ ನಡೆಸಿ ನಂತರ ಪಿತೃತರ್ಪಣ,ಪಿಂಡ ಪ್ರಧಾನ ನಡೆಸಲಾಯಿತು.ಈ ಸಂದರ್ಭದಲ್ಲಿ ಭೀಮಸೇನಾಚಾರ್ಯ ಜೋಷಿ,ಬಲಭೀಮರಾವ್ ಶೆಳ್ಳಗಿ,ಗುರುನಾಥರಾವ್ ಹಂದ್ರಾಳ,ಶಾಮರಾವ್ ಶೆಳ್ಳಗಿ,ವ್ಯಾಸರಾವ್ ಶೆಳ್ಳಗಿ,ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ,ಶ್ರೀನಿವಾಸ ದೇವಡಿ,ಪ್ರಕಾಶ ಲಾಯೆದ ಹುಣಸಗಿ,ದತ್ತೇರಾವ್ ಏವೂರ,ಗುಂಡೆರಾವ್ ಅರಳಳ್ಳಿ,ಚಂದ್ರಕಾಂತ ನಾಡಗೌಡ,ಮಲ್ಹಾರಾವ್ ಪಟವಾರಿ,ವೆಂಕಟೇಶ ಕುರಿಹಾಳ,ಪ್ರಲ್ಹಾದ ದೀಕ್ಷಿತ ಹಾಗೂ ಕೃಷ್ಣಾ ಹಂದ್ರಾಳ ಸೇರಿದಂತೆ ಅನೇಕರಿದ್ದರು.