ಕಲಬುರಗಿ: ನಗರದ ಕನ್ನಡ ಭವನದಲ್ಲಿ ಭೀಮರಾಯ ಹೇಮನೂರ ರವರ “ಮುಳ್ಳು ಚೆಲ್ಲಿದ ಹಾದಿಗೆ” ಎಂಬ ಕೃತಿ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ, ಸಮ ಸಾಹಿತ್ಯ ವೇದಿಕೆ ಸೇಡಂ ಹಾಗೂ ಮಯೂರ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಬೆಳಿಗ್ಗೆ 40.45ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ಸುರೇಶ್ ಬಡಿಗೇರ್ ಹಾಗೂ ಸಮ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ. ಬಿ.ಆರ್. ಅಣ್ಣಾಸಾಗರ ಅವರು ತಿಳಿಸಿದ್ದಾರೆ.
ಶರಣಬಸವೇಶ್ವರ ಸಂಸ್ಥಾನದ ಶ್ರೀ ಲಿಂಗರಾಜಪ್ಪ ಅಪ್ಪ ಕಾರ್ಯಕ್ರಮದ ಸಾನಿಧ್ಯವಹಿಸಲಿದ್ದು, ಕೇಂದ್ರೀಯ ವಿ.ವಿಯ ಇಂಗ್ಲಿಷ್ವಿ ಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಪ್ರೊ.ಬಸವರಾಜ ಡೋಣೂರ ಅವರ ಪುಸ್ತಕ ಜನಾರ್ಪಣೆಗೊಳಿಸಿಲಿದ್ದಾರೆ. ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು, ಹಿರಿಯ ಅಂಚೆ ಅಧಿಕಾರಿ ಬಿ.ಆರ್. ನನಜಗಿ ಹಾಗೂ ಹಿರಿಯ ಸಾಹಿತಿ ನರಸಿಂಗರಾವ ಹೇಮನೂರ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆಂದು ಸಮಿತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪುಸ್ತಕ ಪರಿಚಯ, ವಿಶೇಷ ಸನ್ಮಾನ ಹಾಗೂ ಗೀತಗಾಯನ ಆಯೋಜಿಸಲಾಗಿದೆ ಎಂದು ಅಣ್ಣಾಸಾಗರ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.